MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Business
  • ಸಮುದ್ರ ಮಂಥನಕ್ಕೆ ಕೇಂದ್ರ ₹84,084 ಕೋಟಿ ಮಂಜೂರು, 60 ಕೋಟಿ ಮೆಟ್ರಿಕ್‌ ಟನ್ ಹೊಸ ನಿಕ್ಷೇಪ ಪತ್ತೆ ನಿರೀಕ್ಷೆ

ಸಮುದ್ರ ಮಂಥನಕ್ಕೆ ಕೇಂದ್ರ ₹84,084 ಕೋಟಿ ಮಂಜೂರು, 60 ಕೋಟಿ ಮೆಟ್ರಿಕ್‌ ಟನ್ ಹೊಸ ನಿಕ್ಷೇಪ ಪತ್ತೆ ನಿರೀಕ್ಷೆ

ಕೇಂದ್ರ ಸರ್ಕಾರವು 'ಸಮುದ್ರ ಮಂಥನ' ಎಂಬ ಬೃಹತ್ ಯೋಜನೆಯನ್ನು ಘೋಷಿಸಿದೆ. ಇದರ ಮುಖ್ಯ ಉದ್ದೇಶ ಸಮುದ್ರದಾಳದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆಹಚ್ಚಿ, ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ ದೇಶವನ್ನು ಕಚ್ಚಾತೈಲ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸುವುದಾಗಿದೆ.

1 Min read
Author : Kannadaprabha News
Published : Aug 01 2026, 07:59 AM IST
Share this Photo Gallery
  • FB
  • TW
  • Linkdin
  • Whatsapp
15
ಕೇಂದ್ರದಿಂದ ಸಮುದ್ರ ಮಂಥನ ಯೋಜನೆ
Image Credit : X

ಕೇಂದ್ರದಿಂದ ಸಮುದ್ರ ಮಂಥನ ಯೋಜನೆ

ಜಾಗತಿಕ ಅಸ್ಥಿರತೆ ಹಾಗೂ ಅವಲಂಬನೆಯಿಂದಾಗಿ ದೇಶದಲ್ಲಿ ತೈಲಾನಿಲ ತತ್ವಾರ ತಲೆದೋರದಂತೆ ತಪ್ಪಿಸುವ ಉದ್ದೇಶದಿಂದ, ಸಮುದ್ರದಾಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳ ಅನ್ವೇಷಣೆಗೆ ಕೇಂದ್ರ ಸರ್ಕಾರ ಸಮುದ್ರ ಮಂಥನ ಎಂಬ ಯೋಜನೆ ಘೋಷಿಸಿದೆ. ಇದಕ್ಕಾಗಿ 84,084 ಕೋಟಿ ರು. ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏನಿದು ಸಮುದ್ರ ಮಂಥನ ಯೋಜನೆ?
Image Credit : X

ಏನಿದು ಸಮುದ್ರ ಮಂಥನ ಯೋಜನೆ?

ತೈಲ ಮತ್ತು ಅನಿಲ ಬೇಡಿಕೆ ಪೂರೈಸಲು ಭಾರತದ ಸಮುದ್ರ ವ್ಯಾಪ್ತಿಯಲ್ಲೇ ತೈಲ ಸಂಶೋಧನೆ ಉದ್ದೇಶ ಈ ಯೋಜನೆಗಿದೆ. ಇದಕ್ಕಾಗಿ 2031ರ ಸರ್ಕಾರ 43,200 ಕೋಟಿ ರು. ವಿನಿಯೋಗಿಸಲಿದೆ.

Related Articles

Related image1
ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Related image2
ಮುಂದಿನ ಐದು ವರ್ಷ ರೈತರಿಗೆ ನಿಶ್ಚಿಂತೆ, ಅನ್ನದಾತರಿಗೆ ಬಿಗ್‌ಗಿಫ್ಟ್‌ ಘೋಷಣೆ ಮಾಡಿದ ಪ್ರಧಾನಿ ಮೋದಿ!
35
ಖಾಸಗಿ ಕಂಪನಿಯವರು ತೋಡುವ ಬಾವಿಗೆ 650 ಕೋಟಿ
Image Credit : X

ಖಾಸಗಿ ಕಂಪನಿಯವರು ತೋಡುವ ಬಾವಿಗೆ 650 ಕೋಟಿ

ಉಳಿದ 10 ಸಾವಿರ ಕೋಟಿ ರು.ಅನ್ನು ತೈಲ ಮತ್ತು ಅನಿಲದ ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯ ನಿರ್ಮಾಣಕ್ಕೆ, 28,534 ಕೋಟಿ ರು.ಅನ್ನು ಕರಾವಳಿಯಾಚೆಗಿನ ದತ್ತಾಂಶ ಸಂಗ್ರಹಣೆಗೆ, 2 ಸಾವಿರ ಕೋಟಿ ರು.ಅನ್ನು ತೈಲ ಮತ್ತು ಅನಿಲ ಉತ್ಪಾದನೆ ಹಾಗೂ ಸೇವಾ ವಲಯಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಖಾಸಗಿ ವಲಯ ತೋಡುವ ಪ್ರತಿ ಬಾವಿಗೆ ಸರ್ಕಾರ 650 ಕೋಟಿ ರು. ನೀಡಲಿದೆ. ಬಾವಿಯ ಆಳಕ್ಕೆ ತಕ್ಕಂತೆ ವೆಚ್ಚವೂ ಹೆಚ್ಚಲಿದೆ.

45
ಈ ಯೋಜನೆ ಉದ್ದೇಶವೇನು?
Image Credit : X

ಈ ಯೋಜನೆ ಉದ್ದೇಶವೇನು?

ಭಾರತವು ಸದ್ಯ ಅಗತ್ಯವಿರುವ ಕಚ್ಚಾತೈಲದ ಶೇ.88ರಷ್ಟನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದೆ. ನೈಸರ್ಗಿಕ ಅನಿಲದ ವಿಷಯದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ. ಈ ಅವಲಂಬನೆಯಿಂದಾಗಿ, ಮಧ್ಯಪ್ರಾಚ್ಯ ಸಂಘರ್ಷದಂತಹ ಸಂದರ್ಭಗಳಲ್ಲಿ ದೇಶ ತೈಲಾನಿಲ ಕೊರತೆಯನ್ನು ಅನುಭವಿಸುವಂತಾಗಿದೆ. ಜತೆಗೆ ಅವುಗಳ ಆಮದಿಗಾಗಿಯೇ ವಿದೇಶಿ ವಿನಿಮಯದ ಬಹುಪಾಲು ಖರ್ಚಾಗುತ್ತಿದೆ.

55
ಕಚ್ಚಾತೈಲ ಕ್ಷೇತ್ರದಲ್ಲಿ ಸ್ವಾವಲಂಬನೆ ಗುರಿ
Image Credit : Asianet News

ಕಚ್ಚಾತೈಲ ಕ್ಷೇತ್ರದಲ್ಲಿ ಸ್ವಾವಲಂಬನೆ ಗುರಿ

ಹೀಗಿರುವಾಗ ಕಚ್ಚಾತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. 60 ಕೋಟಿ ಮೆಟ್ರಿಕ್‌ ಟನ್ ತೈಲ ಉತ್ಪಾದಿಸುವ ಸಾಮರ್ಥ್ಯದ ಹೊಸ ನಿಕ್ಷೇಪಗಳು ಪತ್ತೆಯಾಗುವ ನಿರೀಕ್ಷೆಯಿದೆ. ಇದು ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವ್ಯವಹಾರ
ವ್ಯಾಪಾರ ಸುದ್ದಿ
ಕಚ್ಚಾ ತೈಲ
ನರೇಂದ್ರ ಮೋದಿ
ಮಂತ್ರಿಮಂಡಲ ಸಭೆ
ಬಿಜೆಪಿ

Latest Videos
Recommended Stories
Recommended image1
AI ಕಡೆಗೆ Apple ಬಿಗ್ ಶಿಫ್ಟ್; 200ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್!
Recommended image2
ಲೀಟರ್‌ ಲೆಕ್ಕದಲ್ಲಿ ಯಾಕೆ ಮದ್ಯ ಮಾರಾಟ ಆಗೋದಿಲ್ಲ, ಫುಲ್‌ ಬಾಟಲ್‌ 750ML ಇರೋದರ ಹಿಂದಿನ ಕಾರಣವೇನು?
Recommended image3
ಎಸೆವ ಪ್ಲಾಸ್ಟಿಕ್​ನಿಂದಲೇ 2,700 ಕೋಟಿಯ ಉದ್ಯಮಿಯಾದ! ಸಹಸ್ರ ಕೋಟ್ಯಧಿಪತಿಯ ಮೈನವಿರೋಳೋ ಸ್ಟೋರಿ
Related Stories
Recommended image1
ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Recommended image2
ಮುಂದಿನ ಐದು ವರ್ಷ ರೈತರಿಗೆ ನಿಶ್ಚಿಂತೆ, ಅನ್ನದಾತರಿಗೆ ಬಿಗ್‌ಗಿಫ್ಟ್‌ ಘೋಷಣೆ ಮಾಡಿದ ಪ್ರಧಾನಿ ಮೋದಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved