ಶಿವ.. ಶಿವ... ಒಂದೇ ದಿನ ಇಷ್ಟೊಂದು ಏರಿಕೆನಾ? ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟ ಬಂಗಾರ
Gold Silver Price Today: ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 2,200 ರೂಪಾಯಿ ಹೆಚ್ಚಳವಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆಯೂ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ದರದಲ್ಲಿಯೂ ಏರಿಕೆ ಕಂಡುಬಂದಿದೆ.

ಮಂಗಳವಾರ ಚಿನ್ನದ ಬೆಲೆ ಇಳಿಕೆಯಾಗಿದ್ದರಿಂದ ಆಭರಣ ಪ್ರಿಯರು ಮತ್ತು ಹೂಡಿಕೆದಾರರು ಸಂತಸಗೊಂಡಿದ್ದರು. ಆದ್ರೆ ಇಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಒಂದೇ ದಿನ ಇಷ್ಟೊಂದು ಏರಿಕೆನಾ ಎಂದು ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗುತ್ತಿರುತ್ತದೆ. ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನ ಮತ್ತು ಬೆಳ್ಳಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಎರಡು ಲೋಹಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,930 ರೂಪಾಯಿ (220 ರೂಪಾಯಿ ಏರಿಕೆ)
8 ಗ್ರಾಂ: 71,440 ರೂಪಾಯಿ (1,760 ರೂಪಾಯಿ ಏರಿಕೆ)
10 ಗ್ರಾಂ: 89,300 ರೂಪಾಯಿ (2,200 ರೂಪಾಯಿ ಏರಿಕೆ)
100 ಗ್ರಾಂ: 8,93,000 ರೂಪಾಯಿ (22,000 ರೂಪಾಯಿ ಏರಿಕೆ)
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,742 ರೂಪಾಯಿ (240 ರೂಪಾಯಿ ಏರಿಕೆ)
8 ಗ್ರಾಂ: 77,936 ರೂಪಾಯಿ (1,920 ರೂಪಾಯಿ ಏರಿಕೆ)
10 ಗ್ರಾಂ: 97,420 ರೂಪಾಯಿ (2,400 ರೂಪಾಯಿ ಏರಿಕೆ)
100 ಗ್ರಾಂ: 9,74,200 ರೂಪಾಯಿ (24,000 ರೂಪಾಯಿ ಏರಿಕೆ)
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,307 ರೂಪಾಯಿ (180 ರೂಪಾಯಿ ಏರಿಕೆ)
8 ಗ್ರಾಂ: 58,456 ರೂಪಾಯಿ (1,440 ರೂಪಾಯಿ ಏರಿಕೆ)
10 ಗ್ರಾಂ: 73,070 ರೂಪಾಯಿ (1,800 ರೂಪಾಯಿ ಏರಿಕೆ)
100 ಗ್ರಾಂ: 7,30,700 ರೂಪಾಯಿ (18,000 ರೂಪಾಯಿ ಏರಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 89,300 ರೂಪಾಯಿ, ಮುಂಬೈ: 89,300 ರೂಪಾಯಿ, ನವದೆಹಲಿ: 89,300 ರೂಪಾಯಿ, ಕೋಲ್ಕತ್ತಾ: 89,300 ರೂಪಾಯಿ, ಹೈದರಾಬಾದ್: 89,300 ರೂಪಾಯಿ, ವಡೋದರಾ: 89,350 ರೂಪಾಯಿ, ಅಹಮದಾಬಾದ್: 89,350 ರೂಪಾಯಿ
ದೇಶದಲ್ಲಿಂದು ಬೆಳ್ಳಿ ದರ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,000 ರೂಪಾಯಿ (30 ರೂಪಾಯಿ ಏರಿಕೆ)
100 ಗ್ರಾಂ: 10,000 ರೂಪಾಯಿ (300 ರೂಪಾಯಿ ಏರಿಕೆ)
100 ಗ್ರಾಂ: 1,00,000 ರೂಪಾಯಿ (3,000 ರೂಪಾಯಿ ಏರಿಕೆ)