ಭಾರತವನ್ನಾಳಿದ್ದ ಬ್ರಿಟಿಷರ ಕಂಪನಿಯೇ ಖರೀದಿಸಿದ್ದ ರತನ್ ಟಾಟಾ!
ಕೋರಸ್ ಖರೀದಿ ಟಾಟಾ ಪಾಲಿಗೆ ದೊಡ್ಡ ಸಾಧನೆ ಜೊತೆಗೆ ದೇಶದ ಪಾಲಿಗೂ ಹೆಮ್ಮೆ ತಂದಿತ್ತು. ಆರಂಭಿಕ ಕೆಲ ವರ್ಷಗಳಲ್ಲಿ ಈ ಖರೀದಿ ಫಲ ಕೊಟ್ಟರೂ ಬಳಿಕ ದುಬಾರಿ ಎನ್ನಿಸಿತು. ಯುರೋಪ್ ದೇಶಗಳಲ್ಲಿ ಉಕ್ಕಿಗೆ ಬೇಡಿಕೆ ಕುಸಿತ, ವಿದೇಶಗಳಿಂದ ಅಗ್ಗದ ದರದ ಉಕ್ಕು ಆಮದು, ನಿರ್ವಹಣಾ ವೆಚ್ಚ ಹೆಚ್ಚಳ ಕಾರಣ, ಟಾಟಾ ಗ್ರೂಪ್ ಪಾಲಿಗೆ ಕೋರಸ್ ಬಿಳಿಯಾನೆ ಆಯಿತು.
![article_image1](https://static-gi.asianetnews.com/images/01j551yx2x42ja423sfp024m7b/asianet-news---2024-08-13t103146-283_380x214xt.jpg)
ದಶಕಗಳ ಹಿಂದೆಯೇ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದ ರತನ್ ಟಾಟಾ, ದೇಶೀಯವಾಗಿ ಉದ್ಯಮಗಳನ್ನು ವಿಸ್ತರಿಸುವ ಜೊತೆಗೆ ಜಾಗತಿಕವಾಗಿಯೂ ಟಾಟಾ ಗ್ರೂಪ್ ಹೆಜ್ಜೆ ಗುರುತು ಹೆಚ್ಚಿಸಲು ಹಲವು ಖ್ಯಾತನಾಮ ಕಂಪನಿಗಳನ್ನು ಖರೀದಿಸಿದ್ದರು. ಈ ಪೈಕಿ ಒಂದೊಮ್ಮೆ ಭಾರತವನ್ನು ಆಳಿದ್ದ ಬ್ರಿಟಿಷರಿಗೆ ಸೇರಿದ ಕೋರಸ್ ಸ್ಟೀಲ್ ಕೂಡಾ ಒಂದು. ಯುರೋಪ್‌ನಲ್ಲೇ ಎರಡನೇ ಅತ್ಯಂತ ದೊಡ್ಡ ಉಕ್ಕು ಉತ್ಪಾದನಾ ಕಂಪನಿಯಾಗಿದ್ದ ಕೋರಸ್ ಅನ್ನು 2002ರಲ್ಲಿ ಟಾಟಾ ಸ್ಟೀಲ್ ಖರೀದಿ ಮಾಡಿತು. ಇದಕ್ಕಾಗಿ ಕಂಪನಿ 55000 ಕೋಟಿ ರು. ಪಾವತಿ ಮಾಡಿತ್ತು.
![article_image2](https://static-gi.asianetnews.com/images/01j4h173vb4a4d2zrw5f8jtx4j/asianet-news---2024-08-05t155602-633_380x214xt.jpg)
ಕೋರಸ್ ಖರೀದಿ ಟಾಟಾ ಪಾಲಿಗೆ ದೊಡ್ಡ ಸಾಧನೆ ಜೊತೆಗೆ ದೇಶದ ಪಾಲಿಗೂ ಹೆಮ್ಮೆ ತಂದಿತ್ತು. ಆರಂಭಿಕ ಕೆಲ ವರ್ಷಗಳಲ್ಲಿ ಈ ಖರೀದಿ ಫಲ ಕೊಟ್ಟರೂ ಬಳಿಕ ದುಬಾರಿ ಎನ್ನಿಸಿತು. ಯುರೋಪ್ ದೇಶಗಳಲ್ಲಿ ಉಕ್ಕಿಗೆ ಬೇಡಿಕೆ ಕುಸಿತ, ವಿದೇಶಗಳಿಂದ ಅಗ್ಗದ ದರದ ಉಕ್ಕು ಆಮದು, ನಿರ್ವಹಣಾ ವೆಚ್ಚ ಹೆಚ್ಚಳ ಕಾರಣ, ಟಾಟಾ ಗ್ರೂಪ್ ಪಾಲಿಗೆ ಕೋರಸ್ ಬಿಳಿಯಾನೆ ಆಯಿತು.
ಅಸ್ವಸ್ಥ ಸಾಕುನಾಯಿ ಜತೆಗಿರಲು ಬ್ರಿಟನ್ ರಾಜನ ಪ್ರಶಸ್ತಿ ವಿತರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದ ರತನ್: ಪ್ರಾಣಿಪ್ರಿಯರಾಗಿದ್ದ ಅದರಲ್ಲೂ ನಾಯಿಗಳನ್ನು ಬಹುವಾಗಿ ಪ್ರೀತಿಸುತ್ತಿದ್ದ ರತನ್ ಟಾಟಾ, ಒಂದೊಮ್ಮೆ ಅನಾರೋಗ್ಯಪೀಡಿತವಾಗಿದ್ದ ತಮ್ಮ ಸಾಕುನಾಯಿಯೊಂದಿಗೆ ಇರಲು, ಲಂಡನ್‌ನಲ್ಲಿ ಬ್ರಿಟನ್ ರಾಜರೇ ನೀಡುತ್ತಿದ್ದ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಗೈರಾಗಿದ್ದರು!
2018ರ ಫೆ.6 ರಂದು ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ರತನ್ ಟಾಟಾ ಅವರಿಗಾಗಿ ಲೋಕೋಪಕಾರಿ ಜೀವಮಾನ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಈ ಪ್ರಶಸ್ತಿಯನ್ನು ಆಗಿನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಅವರು ಪ್ರದಾನ ಮಾಡಲಿದ್ದರು. ಕಾರ್ಯಕ್ರಮಕ್ಕೂ 2 ದಿನಗಳ ಮುನ್ನ ತಮ್ಮ ಸಾಕುನಾಯಿ ಅಸ್ವಸ್ಥವಾಗಿದ್ದರಿಂದ ಅದನ್ನು ಬಿಟ್ಟು ಹೋಗಲು ಮನಸ್ಸಿಲ್ಲದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಬಗ್ಗೆ ತಿಳಿದ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ‘ರತನ್ ಟಾಟಾ ನಿಜಾವಾದ ಮನುಷ್ಯ’ ಎಂದು ಹೊಗಳಿದ್ದರು.