ಪುಷ್ಪ-2 ಕ್ರೇಜ್: ಐನಾಕ್ಸ್, ಪಿವಿಆರ್ ಷೇರಿನಲ್ಲಿ ಭಾರಿ ಏರಿಕೆ
ಪುಷ್ಪ 2 ಕ್ರೇಜ್ ಷೇರು ಮಾರುಕಟ್ಟೆಯನ್ನು ಮುಟ್ಟಿದ್ದು, ಮುಂಗಡ ಬುಕಿಂಗ್‌ನಿಂದಾಗಿ ಷೇರು ಮಾರುಕಟ್ಟೆಯಲ್ಲೂ ಪುಷ್ಪಾ-2 ಕ್ರೇಜ್ ಪ್ರತಿಧ್ವನಿಸಿದೆ. ಥಿಯೇಟರ್ ಸಂಸ್ಥೆಯಾದ ಪಿವಿಆರ್ ಐನಾಕ್ಸ್ ಷೇರುಗಳಲ್ಲಿ ಸುಮಾರು 3% ರಷ್ಟು ಏರಿಕೆಯಾಗಿವೆ. ಇದರಿಂದಾಗಿ ಕೆಲವೇ ನಿಮಿಷಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 426 ಕೋಟಿ ರೂ. ಹೆಚ್ಚಾಗಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಡಿಸೆಂಬರ್ 5 ರಂದು ಈ ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಮುಂಗಡ ಬುಕಿಂಗ್ ಕೂಡ ಈಗಾಗಲೇ ಆರಂಭವಾಗಿದೆ.
ಡಿಸೆಂಬರ್ 30 ರಿಂದ ಆರಂಭವಾದ ಮುಂಗಡ ಬುಕಿಂಗ್ ಮೂಲಕ ನಿರ್ಮಾಪಕರು ಸುಮಾರು 25 ಕೋಟಿ ರೂ. ಗಳಿಸಿದ್ದಾರೆ. ಮೊದಲ ದಿನದಲ್ಲೇ ಮುಂಗಡ ಬುಕಿಂಗ್ ಮೂಲಕ 60 ಕೋಟಿ ರೂ. ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರಕ್ಕೆ ಆರಂಭದಲ್ಲೇ 150 ರಿಂದ 200 ಕೋಟಿ ರೂ. ವರೆಗೆ ಗಳಿಕೆ ಆಗಬಹುದು ಎಂದು ಊಹಿಸಲಾಗುತ್ತಿದೆ.
ಪುಷ್ಪ 2 ಮುಂಗಡ ಬುಕಿಂಗ್ ಷೇರು ಮಾರುಕಟ್ಟೆಯಲ್ಲೂ ಪ್ರತಿಧ್ವನಿಸಿದೆ. ಥಿಯೇಟರ್ ಕಂಪನಿಯಾದ ಪಿವಿಆರ್ ಐನಾಕ್ಸ್ ಷೇರುಗಳು ಸುಮಾರು 3% ರಷ್ಟು ಏರಿಕೆಯಾಗಿವೆ. ಇದರಿಂದಾಗಿ ಕೆಲವೇ ನಿಮಿಷಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 426 ಕೋಟಿ ರೂ. ಹೆಚ್ಚಾಗಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಮೂಡಿಸಿದೆ ಎಂಬುದು ಷೇರು ಮಾರುಕಟ್ಟೆಯ ಮೇಲಿನ ಪರಿಣಾಮದಿಂದ ಸ್ಪಷ್ಟವಾಗಿದೆ.
ಪುಷ್ಪ 2 ಚಿತ್ರವು ಹಲವಾರು ಜನರನ್ನು ಥಿಯೇಟರ್‌ಗೆ ಸೆಳೆಯುವ ಶಕ್ತಿ ಹೊಂದಿದೆ. ಇದರಿಂದ ಥಿಯೇಟರ್‌ಗಳು ಲಾಭ ಗಳಿಸಲು ಉತ್ತಮ ಅವಕಾಶವಿದೆ. ಆದಾಯ ಹೆಚ್ಚಾದರೆ, ಥಿಯೇಟರ್ ಕಂಪನಿಯ ಷೇರುಗಳು ಏರಿಕೆಯಾಗುತ್ತವೆ ಎಂದು ಷೇರುಪೇಟೆ ತಜ್ಞರು ಹೇಳುತ್ತಾರೆ.
ಮುಂಬೈ ಷೇರುಪೇಟೆ ಮಾಹಿತಿಯ ಪ್ರಕಾರ, ಕಳೆದ ಶುಕ್ರವಾರ ಪಿವಿಆರ್ ಐನಾಕ್ಸ್‌ನ ಷೇರುಗಳು 1540 ರೂ.ಗೆ ಮುಕ್ತಾಯಗೊಂಡವು. ಸೋಮವಾರ ಕಂಪನಿಯ ಷೇರುಗಳು 1,558 ರೂ.ಗೆ ಆರಂಭವಾಯಿತು. ನಂತರ ಸುಮಾರು 3% ರಷ್ಟು ಏರಿಕೆಯಾಗಿದೆ. ವಹಿವಾಟಿನ ಸಮಯದಲ್ಲಿ ಷೇರಿನ ಬೆಲೆ ಗರಿಷ್ಠ 1583.40 ರೂ. ತಲುಪಿತು. ಮಧ್ಯಾಹ್ನ 2 ಗಂಟೆಗೆ 2.25% ಏರಿಕೆಯೊಂದಿಗೆ 1,574.65 ರೂ.ಗೆ ವಹಿವಾಟು ನಡೆಯಿತು. ಕಳೆದ ವರ್ಷ ಡಿಸೆಂಬರ್ 18, 2023 ರಂದು, ಕಂಪನಿಯ ಷೇರುಗಳು 52 ವಾರಗಳ ಗರಿಷ್ಠ 1,829 ರೂ. ತಲುಪಿದ್ದವು.
ಈಗ, ಪುಷ್ಪ 2 ಚಿತ್ರದ ಮೂಲಕ ಪಿವಿಆರ್ ಐನಾಕ್ಸ್‌ನ ಷೇರುಗಳು ಹೊಸ ದಾಖಲೆ ಬರೆಯಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಪಿವಿಆರ್ ಐನಾಕ್ಸ್ ಷೇರುಗಳ ಬೆಲೆ ಏರಿಕೆಯಿಂದಾಗಿ, ಕಂಪನಿಯ ಮಾರುಕಟ್ಟೆ ಮೌಲ್ಯವೂ ಹೆಚ್ಚಾಗಿದೆ. ಶುಕ್ರವಾರ ಪಿವಿಆರ್ ಐನಾಕ್ಸ್‌ನ ಮಾರುಕಟ್ಟೆ ಮೌಲ್ಯ 15,122.79 ಕೋಟಿ ರೂ. ಇತ್ತು. ಸೋಮವಾರ ವಹಿವಾಟಿನ ಸಮಯದಲ್ಲಿ 15,548.97 ಕೋಟಿ ರೂ. ತಲುಪಿತು. ಅಂದರೆ ಕೆಲವೇ ನಿಮಿಷಗಳಲ್ಲಿ ಪಿವಿಆರ್ ಐನಾಕ್ಸ್‌ನ ಮಾರುಕಟ್ಟೆ ಮೌಲ್ಯ 426.18 ಕೋಟಿ ರೂ. ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಕಾಣಬಹುದು.