ಕಾಸಿಗೆ ಕಾಸು ಸೇರಿಸಿದವರಿಗೆ ಗುಡ್‌ನ್ಯೂಸ್; 2ನೇ ದಿನವೂ ಇಳಿಕೆಯಾದ ಚಿನ್ನದ ಬೆಲೆ
ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳು ದಿನದಿಂದ ದಿನಕ್ಕೆ ಏರಿಳಿತವಾಗುತ್ತಿವೆ. ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮೇಲೆ ಹೆಚ್ಚು ಕೇಂದ್ರಿಕರಿಸುತ್ತಿರುವುದರಿಂದ ಈ ಎರಡೂ ಲೋಹಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ.
- FB
- TW
- Linkdin
Follow Us
)
ಚಿನ್ನ ಖರೀದಿ ಮಾಡಬೇಕೆಂದು ಜನರು ಕಾಸಿಗೆ ಕಾಸು ಸೇರಿಸುತ್ತಿರುತ್ತಾರೆ. ತಮ್ಮ ಹಣಕ್ಕೆ ಹೆಚ್ಚು ಬಂಗಾರ ಬರಬೇಕೆಂದು ಬೆಲೆ ಇಳಿಕೆಯಾಗುತ್ತಿರೋದನ್ನು ಕಾಯುತ್ತಿರುತ್ತಾರೆ. ನೀವು ಸಹ ಚಿನ್ನ ಖರೀದಿಯ ಪ್ಲಾನ್ ಮಾಡ್ಕೊಂಡಿದ್ರೆ ಇಂದಿನ ಬೆಲೆಯನ್ನು ತಿಳಿದುಕೊಳ್ಳಿ.
ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ ಜಾಗತೀಕ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳು ಪರಿಣಾಮ ಬೀರುತ್ತಿರುತ್ತವೆ. ಆದ್ದರಿಂದ ಚಿನ್ನ ಮತ್ತು ಬೆಳ್ಳಿ ದರಗಳು ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿರುತ್ತವೆ. ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮೇಲೆ ಕೇಂದ್ರಿಕರಿಸುತ್ತಿದ್ದಾರೆ. ಹಾಗಾಗಿ ಈ ಎರಡೂ ಲೋಹಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,758 ರೂಪಾಯಿ
8 ಗ್ರಾಂ: 78,064 ರೂಪಾಯಿ
10 ಗ್ರಾಂ: 97,580 ರೂಪಾಯಿ
100 ಗ್ರಾಂ: 9,75,800 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,945 ರೂಪಾಯಿ
8 ಗ್ರಾಂ: 71,560 ರೂಪಾಯಿ
10 ಗ್ರಾಂ: 89,450 ರೂಪಾಯಿ
100 ಗ್ರಾಂ: 8,94,500 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,319 ರೂಪಾಯಿ
8 ಗ್ರಾಂ: 58,552 ರೂಪಾಯಿ
10 ಗ್ರಾಂ: 73,190 ರೂಪಾಯಿ
100 ಗ್ರಾಂ: 7,31,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 89,450 ರೂಪಾಯಿ, ಮುಂಬೈ: 89,450 ರೂಪಾಯಿ, ದೆಹಲಿ: 97,730 ರೂಪಾಯಿ, ಕೋಲ್ಕತ್ತಾ: 89,450 ರೂಪಾಯಿ, ಬೆಂಗಳೂರು: 89,450 ರೂಪಾಯಿ, ಅಹಮದಾಬಾದ್: 97,630 ರೂಪಾಯಿ, ವಡೋದರ: 97,630 ರೂಪಾಯಿ, ಹೈದರಾಬಾದ್: 89,450 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 1081 ರೂಪಾಯಿ
100 ಗ್ರಾಂ: 10,810 ರೂಪಾಯಿ
1000 ಗ್ರಾಂ: 1,08,100 ರೂಪಾಯಿ