ಜನಸಾಮನ್ಯರ ಜೇಬಿಗೆ ಮತ್ತಷ್ಟು ಹಗುರವಾದ ಚಿನ್ನ; ಬಂಗಾರ ಖರೀದಿಗೆ ಬಂದಿದೆ ಸಕಾಲ
Gold And Silver Price Today: ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಹೂಡಿಕೆದಾರರು ಕೈಗಾರಿಕೋದ್ಯಮದ ಸರಕುಗಳತ್ತ ಒಲವು ತೋರುತ್ತಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ದರದಲ್ಲಿಂದು ಇಳಿಕೆ ಕಂಡು ಬಂದಿದೆ. ನಿಧಾನವಾಗಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 80 ಸಾವಿರ ರೂ.ಗಳ ಆಸುಪಾಸಿನಲ್ಲಿ ಬರುತ್ತಿದೆ.
ಹೂಡಿಕೆದಾರರು ಕೈಗಾರಿಕೋದ್ಯಮದ ಸರಕುಗಳತ್ತ ಹೆಚ್ಚು ಒಲವು ತೋರುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆಯಿಂದಾಗಿ ಆಭರಣ ಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತಿರೋದರಿಂದ ದರ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಒಂದು ವೇಳೆ ದೊಡ್ಡಮಟ್ಟದ ಜಾಗತೀಕ ವಿದ್ಯಮಾನಗಳು ನಡೆದ್ರೆ ಮತ್ತೆ ಚಿನ್ನದ ಬೆಲೆ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,754 ರೂಪಾಯಿ
8 ಗ್ರಾಂ: 70,032 ರೂಪಾಯಿ
10 ಗ್ರಾಂ: 87,540 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,550 ರೂಪಾಯಿ
8 ಗ್ರಾಂ: 76,400 ರೂಪಾಯಿ
10 ಗ್ರಾಂ: 95,500 ರೂಪಾಯಿ
100 ಗ್ರಾಂ: 9,55,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,163 ರೂಪಾಯಿ
8 ಗ್ರಾಂ: 57,304 ರೂಪಾಯಿ
10 ಗ್ರಾಂ: 71,630 ರೂಪಾಯಿ
100 ಗ್ರಾಂ: 7,16,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,540 ರೂಪಾಯಿ, ಮುಂಬೈ: 87,540 ರೂಪಾಯಿ, ಬೆಂಗಳೂರು: 87,540 ರೂಪಾಯಿ, ದೆಹಲಿ: 87,690 ರೂಪಾಯಿ, ಹೈದರಾಬಾದ್: 87,540 ರೂಪಾಯಿ, ವಡೋದರಾ: 87,590 ರೂಪಾಯಿ, ಪುಣೆ: 87,540 ರೂಪಾಯಿ, ಅಹಮದಾಬಾದ್: 87,590 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 979 ರೂಪಾಯಿ
100 ಗ್ರಾಂ: 9,790 ರೂಪಾಯಿ
1000 ಗ್ರಾಂ: 97,900 ರೂಪಾಯಿ