ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ
ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ ಸಿಗಲಿದೆ. ವಿಶೇಷ ಅಂದರೆ ಕೇವಲ 1 ಸಾವಿರ ರೂೂಪಾಯಿಯಿಂದ ಖಾತೆ ಆರಂಭಿಸಲು ಸಾಧ್ಯವಿದೆ. ಏನಿದು ಟಿಡಿ ಖಾತೆ, ಬಡ್ಡಿ ಎಷ್ಟು, ರಿಟರ್ನ್ಸ್ ಹೇಗೆ?

ಪೋಸ್ಟ್ ಆಫೀಸ್ ಟಿಡಿ ಹೂಡಿಕೆ
ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆಗೆ ಹಲವು ಆಯ್ಕೆಗಳಿವೆ. ಇಷ್ಟೇ ಅಲ್ಲ ಯಾವುದೇ ಆತಂಕವಿಲ್ಲದೆ ಹೂಡಿಕೆ ಮಾಡಲು ಸಾಧ್ಯವಿದೆ. ಹೂಡಿಕೆ ಮಾಡಿದ ಹಣ ಭದ್ರವಾಗಿರಲಿದೆ. ಜೊತೆಗೆ ಉತ್ತಮ ಬಡ್ಡಿ ಕೂಡ ಸಿಗಲಿದೆ. ಹಲವರಗೆ ಪೋಸ್ಟ್ ಆಫೀಸ್‌ನಲ್ಲಿರುವ ಹೂಡಿಕೆ ಆಯ್ಕೆಗಳ ಬಗ್ಗೆ ಗೊತ್ತಿರುವುದಿಲ್ಲ. ಅದರಲ್ಲೂ ಹೆಚ್ಚಿನವರು ಟಿಡಿ ಖಾತೆ, ಟಿಡಿ ಡೆಪಾಸಿಟ್ ಕುರಿತು ಗಮನ ಹರಿಸಿರುವುದಿಲ್ಲ.
ಟಿಡಿ ಖಾತೆಯಲ್ಲಿ ಹಣ ಇಟ್ಟರೆ ಗ್ಯಾರೆಂಟಿ ರಿಟರ್ಸನ್
ಟೈಮ್ ಡೆಪಾಸಿಟ್ ಖಾತೆ ಅಥವಾ ಟಿಡಿ ಖಾತೆ. ಇದು ನಿಗಿದಿತ ಸಮಯಕ್ಕೆ ಇಡುವ ಫಿಕ್ಸೆಡ್ ಡೆಪಾಸಿಟ್. 1, 2,3,4,5 ವರ್ಷಗಳ ಟಿಡಿ ಡೆಪಾಸಿಟ್ ಲಭ್ಯವಿದೆ. ಖಾತೆ ತೆರೆಯುವಾಗ ನಿಮಗೆ ಎಷ್ಟು ವರ್ಷದ ಡೆಪಾಸಿಟ್ ಎಂದು ಮೊದಲೇ ನಿರ್ಧರಿಸಿ ಖಾತೆ ತೆರೆಯಬೇಕು. ಉದಾಹರಣೆ ಒಂದು ವರ್ಷಕ್ಕೆ 10,000 ರೂಪಾಯಿ ಡೆಪಾಸಿಟ್ ಅಥವಾ ಗರಿಷ್ಠ 5 ವರ್ಷದವರಗೆ ಡೆಪಾಸಿಟ್ ಮಾಡಲು ಅವಕಾಶವಿದೆ.
1000 ರೂಪಾಯಿ ಸಾಕು
ಟಿಡಿ ಖಾತೆ ಆರಂಭಿಸಲು ಕೇವಲ 1000 ರೂಪಾಯಿ ಸಾಕು. ಕನಿಷ್ಠ 1000 ರೂಪಾಯಿ ಗರಿಷ್ಠಕ್ಕೆ ಮಿತಿ ಇಲ್ಲ, ನಿಮ್ಮ ನಿರ್ಧಾರದಂತೆ ಮೊತ್ತವನ್ನು ಠೇವಣಿ ಇಟ್ಟು ನಿಗದಿತ ವರ್ಷಗಳ ಕಾಲ ಫಿಕ್ಸೆಡ್ ಡೆಪಾಸಿಟ್ ರೀತಿ ಬಿಡಬೇಕು. ಬಳಿಕ ಉತ್ತಮ ರಿಟರ್ಸನ್ ಸಿಗಲಿದೆ. 1 ರಿಂದ 5 ವರ್ಷಕ್ಕೆ ವಿವಿಧ ಬಡ್ಡಿ ರೇಟ್ ಲಭ್ಯವಿದೆ. ಶೇಕಡಾ 6.9 ರಿಂದ ಗರಿಷ್ಠ 7.5ರ ವರೆಗೆ ಬಡ್ಡಿ ಸಿಗಲಿದೆ.
ದುಪ್ಪಟ್ಟಾಗಲಿದೆ ನಿಮ್ಮ ಹಣ
ವಿಶೇಷ ಅಂದರೆ ನೀವು ಇಟ್ಟ ಹಣ ಇದರಲ್ಲಿ ದುಪ್ಪಟ್ಟಾಗಲಿದೆ. ಅಂದರೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ 2 ಲಕ್ಷ ರೂಪಾಯಿ ರಿಟರ್ನ್ಸ್ ಕೂಡ ಲಭ್ಯವಿದೆ. ಇದಕ್ಕೆ ತೆಗೆದುಕೊಳ್ಳುವ ಅವಧಿ 9 ವರ್ಷ 6 ತಿಂಗಳು. 6.90 ರಿಂದ ಬಡ್ಡಿ ಆರಂಭಗೊಂಡು, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಲಿದೆ. 5ನೇ ವರ್ಷಕ್ಕೆ 7.5ರಷ್ಟು ಬಡ್ಡಿ ಸಿಗಲಿದೆ.
1 ಲಕ್ಷ ರೂಪಾಯಿ ಇಟ್ಟರೆ 45 ಸಾವಿರ ರೂ ಬಡ್ಡಿ
1 ಲಕ್ಷ ರೂಪಾಯಿ ಹಣವನ್ನು ಟೈಮ್ ಡೆಪಾಸಿಟ್ ಖಾತೆಯಲ್ಲಿ 5 ವರ್ಷಗಳ ಅವಧಿಗೆ ಇಟ್ಟರೆ ಉತ್ತಮ ಬಡ್ಡಿಯೊಂದಿಗೆ 1,44,885 ರೂಪಾಯಿ ಬಡ್ಡಿ ಸಿಗಲಿದೆ. ವರ್ಷಗಳ ಅವಧಿಗೆ ಇಟ್ಟರೆ ಶೇಕಡಾ 7.5 ರಷ್ಟು ಬಡ್ಡಿ ಸಿಗಲಿದೆ.
ತೆರಿಗೆ ವಿನಾಯಿತಿ
ವಿಶೇಷ ಅಂದರೆ ಟೈಮ್ ಡೆಪಾಸಿಟ್ ಅಡಿಯಲ್ಲಿ ಹೂಡಿಕೆ ಮಾಡಿದರೆ 1961ರ ತೆರಿಗೆ ಕಾಯ್ದೆಯ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ. ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ. ಒಲ್ಡ್ ಟ್ಯಾಕ್ಸ್ ರಿಜಿಮ್ ಅಡಿಯಲ್ಲಿ ಐಟಿಆರ್ ಸಲ್ಲಿಕೆ ಮಾಡಿದರೆ ಈ ಸೌಲಭ್ಯ ಲಭ್ಯವಾಗಲಿದೆ.
ತೆರಿಗೆ ವಿನಾಯಿತಿ
ಯಾರು ಖಾತೆ ತೆರೆಯಬಹುದು?
ಸಿಂಗಲ್ ಖಾತೆ ತೆರೆಯಲು ವಯಸ್ಕರಾಗಿರಬೇಕು. ಇನ್ನು ಜಾಯಿಂಟ್ ಖಾತೆಗೆ ಇಬ್ಬರು ಅಥವಾ ಮೂವರು ವ್ಯಕ್ತಿಗಳ ಹೆಸರಿನಲ್ಲಿ ಖಾತೆ ತೆರೆಯಲು ಸಾಧ್ಯವಿದೆ. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಈ ಖಾತೆ ನಿರ್ವಹಣೆ ಮಾಡಬಹುದು.
ಯಾರು ಖಾತೆ ತೆರೆಯಬಹುದು?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

