ದಿನಕ್ಕೆ ₹50 ಉಳಿಸಿ, 35 ಲಕ್ಷ ರೂ. ಪಡೆಯಿರಿ – ಪೋಸ್ಟ್ ಆಫೀಸ್ ಯೋಜನೆಯ ಅದ್ಭುತ ಲಾಭ!
ಹಣಕಾಸು ತಜ್ಞರು ನೀವು ಜಾಸ್ತಿ ಸಂಪಾದನೆ ಮಾಡುವುದಕ್ಕಿಂತ ಎಷ್ಟು ಉಳಿತಾಯ ಮಾಡುತ್ತೀರಿ ಎನ್ನುವುದರ ಮೇಲೆ ದುಡಿಯುವ ವ್ಯಕ್ತಿಯ ಭವಿಷ್ಯದ ನಿರ್ಧಾರವಾಗುತ್ತದೆ ಎಂದು ಹೇಳುತ್ತಾರೆ. ಸಣ್ಣ ಮೊತ್ತದ ಉಳಿತಾಯ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಪೋಸ್ಟ್ ಆಫೀಸ್ ಯೋಜನೆ. ಪ್ರತಿದಿನ ಕೇವಲ 50 ರೂ. ಉಳಿಸಿದರೆ ಕೊನೆಗೆ 35 ಲಕ್ಷ ರೂ. ಹಣ ಪಡೆಯಬಹುದು.

ನಮ್ಮ ದುಡಿಮೆ ಅತ್ಯಂತ ಕಡಿಮೆಯಿದೆ ಎನ್ನುವವರು ಸಾಕಷ್ಟು ಜನರಿದ್ದಾರೆ. ಕುಟುಂಬ ನಿರ್ವಹಣೆಗೆ ಮಾತ್ರ ಹಣ ಸಾಕಾಗುತ್ತದೆ. ಉಳಿತಾಯ ಯೋಜನೆಗೆ ಸಾವಿರಾರು ರೂಪಾಯಿ ಹಣ ಎಲ್ಲಿಂದ ಕಟ್ಟಬೇಕು ಎನ್ನುವವರಿಗೆ ಈ ಸಣ್ಣ ಮಟ್ಟದ ಹಣ ಉಳಿತಾಯ ಯೋಜನೆ ಭಾರೀ ಆದಾಯ ಒದಗಿಸಲಿದೆ. ಅಂಥದ್ದೊಂದು ಯೋಜನೆ 'ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ' (Post Office Gram Surakhsa Scheme) ಆಗಿದೆ. ಕಡಿಮೆ ಹೂಡಿಕೆಯಲ್ಲೂ ಉತ್ತಮ ಲಾಭ ಪಡೆಯಬಹುದು.
ಗ್ರಾಮ ಸುರಕ್ಷಾ ಯೋಜನೆ (Gram Surakhsa Scheme):
ಈ ಯೋಜನೆಯು ಗ್ರಾಮೀಣ ಅಂಚೆ ಜೀವ ವಿಮೆ (Rural Postal life Insurance-RPLI) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸರ್ಕಾರದ ಯೋಜನೆಯಾಗಿದ್ದು, ನಿಮ್ಮ ಹೂಡಿಕೆಯ ಹಣ ಕೂಡ ಸುರಕ್ಷಿತವಾಗಿರುತ್ತದೆ. 19 ರಿಂದ 55 ವರ್ಷದೊಳಗಿನ ಯಾವುದೇ ಭಾರತೀಯರು ಕೂಡ ಈ ಯೋಜನೆಯ ಅವಕಾಶವನ್ನು ಪಡೆದುಕೊಳ್ಳಬಹುದು.
ಎಷ್ಟು ಹೂಡಿಕೆ ಮಾಡಬಹುದು?
ಈ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ವಾರ್ಷಿಕ ₹10,000 ರಿಂದ ₹10 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ಪ್ರೀಮಿಯಂ ಪಾವತಿಸಬಹುದು.
ದಿನಕ್ಕೆ 50 ರೂ. ಹೂಡಿಕೆ ಮಾಡಿದರೆ:
ಉದಾಹರಣೆಗೆ, ನೀವು 19 ವರ್ಷದವರಾಗಿದ್ದಾಗ ಈ ಯೋಜನೆಗೆ ಸೇರಿದ್ದೀರಿ ಎಂದು ಹೇಳೋಣ. ನೀವು ಪ್ರತಿ ದಿನ 50 ರೂ. ಮಾದರಿಯಲ್ಲಿ ತಿಂಗಳಿಗೆ 1515 ರೂ. ಹಣವನ್ನಿ ಈ ಯೋಜನೆಗೆ ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ, ನೀವು 55 ವರ್ಷ ವಯಸ್ಸಿನವರೆಗೆ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯ ಮೆಚ್ಯೂರಿಟಿ ಹಂತದಲ್ಲಿ ನೀವು 35 ಲಕ್ಷ ರೂ. ಹಣವನ್ನು ಒಟ್ಟಿಗೆ ಪಡೆಯಬಹುದು.
ಜೀವ ವಿಮೆ ಮತ್ತು ಬೋನಸ್ ಕೂಡ ಲಭ್ಯವಿದೆ:
ನಿಮ್ಮ ಹೂಡಿಕೆಯನ್ನು ಪಾವತಿಸುವುದು ಮಾತ್ರವಲ್ಲದೆ, ಸರ್ಕಾರವು ಬೋನಸ್ ಅನ್ನು ಸಹ ಪಾವತಿಸುತ್ತದೆ. ಇದು ಒಟ್ಟು ಲಾಭವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾರುಕಟ್ಟೆಯನ್ನು ಅವಲಂಬಿಸಿರುವ ಯೋಜನೆಗಳಿಗೆ ಹೋಲಿಸಿದರೆ ಇದು ಸ್ಥಿರವಾದ ಆದಾಯವನ್ನು ಒದಗಿಸುತ್ತದೆ. ಇದು ನಿಮಗೆ ಉಳಿತಾಯವನ್ನು ಒದಗಿಸುವುದಲ್ಲದೆ, ಜೀವ ವಿಮೆಯಂತಹ ಭದ್ರತೆಯನ್ನು ಸಹ ಒದಗಿಸುತ್ತದೆ. ದುರದೃಷ್ಟವಶಾತ್ ವ್ಯಕ್ತಿಯು ಯೋಜನೆ ಮುಕ್ತಾಯದ ಮೊದಲು ಮರಣ ಹೊಂದಿದರೆ, ಪೂರ್ಣ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ. ಇದು ಕುಟುಂಬಕ್ಕೆ ದೊಡ್ಡ ಭರವಸೆಯಾಗಲಿದೆ. ನೀವು ತಿಂಗಳಿಗೆ ಪಾವತಿಸುವ ಪ್ರೀಮಿಯಂ ಹೆಚ್ಚಾದಷ್ಟೂ ಲಾಭ ಹೆಚ್ಚಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ವಿವರಗಳನ್ನು ಪಡೆಯಬಹುದು.
ಅಗತ್ಯವಿರುವ ದಾಖಲೆಗಳು:
ಆಧಾರ್/ಐಡಿ ಪುರಾವೆ
ವಿಳಾಸ ಪುರಾವೆ
ಪಾಸ್‌ಪೋರ್ಟ್ ಗಾತ್ರದ ಫೋಟೋ