ಭಾರತದಲ್ಲಿ ಜೀವನ ದುಬಾರಿ, ಯಾರಿಗೆ ಹೇಳೋಣ ಪ್ಲಾಬ್ಲೆಮ್?
- ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, ಜನರ ಹಿಡಿ ಶಾಪ
- ಸತತ 5ನೇ ದಿನ ಏರಿಕೆ ಕಂಡ ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ
- ಭಾರತದಲ್ಲಿ ಜೀವನ ದುಬಾರಿ, ಜನ ಸಾಮಾನ್ಯರ ಮೇಲೆ ಬರೆ
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಾಮಾನ್ಯವಾಗಿದೆ. ಏರುತ್ತಲೇ ಇರುವ ಇಂಧನ ದರ ಇಳಿಕೆಯಾಗಿಲ್ಲ. ದರ ಇಳಿಕೆಯಾಗುವ ಯಾವ ಲಕ್ಷಣಗಳೂ ಇಲ್ಲ. ಇದೀಗ ಸತತ 5ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬಲೆ ಏರಿಕೆಯಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 37 ಪೈಸೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಏರಿಕೆ 35 ಪೈಸೆ ಆಗಿದೆ.
ಏರಿಕೆ ಪೈಸೆ ಲೆಕ್ಕದಲ್ಲಾದರೂ ಪ್ರತಿ ದಿನ ದುಬಾರಿಯಾಗುತ್ತಿರುವ ಇಂದನ ಜನಸಾಮಾನ್ಯರಿಗೆ ತೀವ್ರ ಹೊಡೆತ ನೀಡುತ್ತಿದೆ. ಏರಿಕೆ ಬಳಿಕ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 111.34 ರೂಪಾಯಿ ಆಗಿದೆ. ಇನ್ನೂ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 102.23 ರೂಪಾಯಿ ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 107.59 ರೂಪಾಯಿ ಆಗಿದೆ. ಇನ್ನೂ ಡೀಸೆಲ್ ಬೆಲೆ 96.32 ರೂಪಾಯಿ ಆಗಿದೆ. ಮುಂಬೈನಲ್ಲಿ ಇಂಧನ ಮತ್ತಷ್ಟು ದುಬಾರಿಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 113.46 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ104.38 ರೂಪಾಯಿ ಆಗಿದೆ.
ದೇಶದಲ್ಲಿ ಅತ್ಯಂತ ದುಬಾರಿ ಇಂಧನ ಪಟ್ಟಣ ಅನ್ನೋ ಕುಖ್ಯಾತಿಗೆ ರಾಜಸ್ಥಾನದ ಗಂಗಾನಗರ ಗುರಿಯಾಗಿದೆ. ಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 119.79 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 110.63 ರೂಪಾಯಿ ಆಗಿದೆ. ಇನ್ನುಳಿದ ನಗರ ಹಾಗೂ ರಾಜ್ಯಕ್ಕೆ ಹೋಲಿಸಿದರೆ ಗಂಗಾನಗರದಲ್ಲಿ ಇಂಧನ ಚಿನ್ನಕ್ಕಿಂತ ದುಬಾರಿಯಾಗಿದೆ.
ಇಂಧನ ಬೆಲೆ ಏರಿಕೆಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಸರಕು ಸಾಗಾಣೆ ದರ ದುಪ್ಪಟ್ಟಾಗಿದೆ. ಸಾರಿಗೆ ದುಬಾರಿಯಾಗಿದೆ. ಇದರಿಂದ ಜನರು ಹೈರಾಣಾಗಿದ್ದಾರೆ ದುಬಾರಿ ಭಾರತದಲ್ಲಿ ಬದುಕು ಕಷ್ಟವಾಗುತ್ತಿದೆ. ಕೇಂದ್ರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಹೆಚ್ಚಳವಾಗಿದೆ. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರೆಗೆಯಿಂದ ಜನ ಕಂಗಾಲಾಗಿದ್ದಾರೆ. ಇತ್ತ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಪ್ರಯತ್ನಗಳು ಕೈಗೂಡಿಲ್ಲ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವ ಯಾವುದೇ ಸೂಚನೆ ಇಲ್ಲ.