ಅಂಬಾನಿ ಮಕ್ಕಳಾದ ಅನಂತ್, ಆಕಾಶ್ ಇಶಾ ಮಧ್ಯೆ ಸ್ಪರ್ಧೆ ಇದ್ಯಾ: ಅನಂತ್ ಅಂಬಾನಿ ಹೇಳಿದ್ದೇನು?
ಮದ್ವೆ ಸಂಭ್ರಮದಲ್ಲಿರುವ ರಿಲಯನ್ಸ್ ಇಂಡಸ್ಟ್ರಿಯ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಜೊತೆ ಅಂಗ್ಲ ಮಾಧ್ಯಮವೊಂದು ಸಂದರ್ಶನ ನಡೆಸಿದ್ದು, ಈ ಸಂದರ್ಶನದಲ್ಲಿ ಅನಂತ್ ಅವರು ತಮ್ಮ ಕುಟುಂಬ ಸೋದರ ಸೋದರಿಯರ ನಡುವಿನ ಒಡನಾಟ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಮದ್ವೆ ಸಂಭ್ರಮದಲ್ಲಿರುವ ರಿಲಯನ್ಸ್ ಇಂಡಸ್ಟ್ರಿಯ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಜೊತೆ ಅಂಗ್ಲ ಮಾಧ್ಯಮವೊಂದು ಸಂದರ್ಶನ ನಡೆಸಿದ್ದು, ಈ ಸಂದರ್ಶನದಲ್ಲಿ ಅನಂತ್ ಅವರು ತಮ್ಮ ಕುಟುಂಬ ಸೋದರ ಸೋದರಿಯರ ನಡುವಿನ ಒಡನಾಟ ತಮ್ಮ ಬಾಲ್ಯ ಸೇರಿದಂತೆ ಹಲವು ವಿಚಾರಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ.
ನಿಮಗೆ ನಿಮ್ಮ ಸೋದರ ಆಕಾಶ್ ಅಂಬಾನಿ ಹಾಗೂ ಸೋದರಿ ಇಶಾ ಅಂಬಾನಿ ಅವರು ಸ್ನೇಹಿತರೇ ಅಥವಾ ಪ್ರತಿಸ್ಪರ್ಧಿಗಳೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನಂತ್ ಅಂಬಾನಿ ತಮ್ಮ ನಡುವೆ ಯಾವುದೇ ಸ್ಪರ್ಧೆ ಇಲ್ಲ, ನನ್ನ ಸೋದರ ಆಕಾಶ್ ಅಂಬಾನಿ ನನ್ನ ಉತ್ತಮ ಹಾಗೂ ನಿಜವಾದ ಸಲಹೆಗಾರ, ನಾನು ನನ್ನ ಸೋದರ ಹಾಗೂ ಸೋದರಿಯ ಪಾಲಿನ ಹನುಮಾನ್ ಅವರ ಅಣತಿಯಂತೆ ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅನಂತ್ ಅಂಬಾನಿ ಅರು ಈ ವರ್ಷದ ಜುಲೈನಲ್ಲಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಅನಂತ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್‌ನ ಕಿರಿಯ ವಾರಸುದಾರನಾಗಿರುವ ಅನಂತ್ ತಾವು ತಮ್ಮ ಸೋದರ ಸೋದರಿ ಜೊತೆ ವಿಶೇಷವೆನಿಸುವ ಅನುಬಂಧವನ್ನು ಹೊಂದಿದ್ದು, ನಮ್ಮ ಮಧ್ಯೆ ಸ್ಪರ್ಧೆ ಇಲ್ಲ, ಅವರಿಬ್ಬರ ಸಲಹೆಯಂತೆ ನಾನು ಜೀವನದುದ್ದಕ್ಕೂ ಮುನ್ನಡೆಯುತ್ತೇನೆ ಎಂದು ಹೇಳಿದರು.
ಆದರೆ ಅಂಬಾನಿ ಹಿಂದಿನ ತಲೆಮಾರಿನ ಸೋದರರಾದ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಮಧ್ಯೆ ಅಂತಹ ಒಡನಾಟವಿಲ್ಲ, ಈ ಬಗ್ಗೆ ಹೇಳಿದಾಗ ನಮ್ಮ ಮಧ್ಯೆ ಅಂತಹ ಸ್ಥಿತಿ ಬರುವುದಿಲ್ಲ, ಏಕೆಂದರೆ ನಮ್ಮ ಮಧ್ಯೆ ತುಂಬಾ ಆತ್ಮೀಯತೆ ಇದೆ ಎಂದು ಹೇಳಿದ್ದಾರೆ.
ಅವರಿಬ್ಬರೂ ನನಗಿಂತ ದೊಡ್ಡವರು. ನಾನು ಅವರ ಪಾಲಿನ ಆಂಜನೇಯ, ನನ್ನ ಸೋದರ ನನ್ನ ಪಾಲಿನ ರಾಮ, ಹಾಗೂ ನನ್ನ ಸೋದರಿ ನನಗೆ ತಾಯಿ ಇದ್ದಂತೆ ಅವರಿಬ್ಬರೂ ಸದಾ ನನ್ನ ರಕ್ಷಣೆ ಮಾಡುತ್ತಾರೆ. ನಮ್ಮ ಮಧ್ಯೆ ಯಾವ ಬೇಧವಾಗಲಿ, ಸ್ಪರ್ಧೆಯಾಗಲಿ ಇಲ್ಲ, ನಾವು ಫೆವಿಕ್ವಿಕ್ ರೀತಿ ಅಂಟಿಕೊಂಡೆ ಇರುತ್ತೇವೆ ಎಂದು ಹೇಳುತ್ತಾ ಅನಂತ್ ಅಂಬಾನಿ ನಕ್ಕಿದ್ದಾರೆ.
ತಮ್ಮ ಅಜ್ಜ ಧೀರುಭಾಯ್ ಅಂಬಾನಿ ಜೊತೆ ತಮ್ಮನ್ನು ಕೆಲವರು ಹೋಲಿಸುವುದಕ್ಕೆ ಪ್ರತಿಕ್ರಿಯಿಸಿದ ಅನಂತ್ ಅಂಬಾನಿ ಅದೊಂದು ನನಗೆ ಸಿಕ್ಕಿದ ದೊಡ್ಡ ಹೊಗಳಿಕೆ. ಆದರೆ ನಾನು ಆ ಮಟ್ಟಕ್ಕೆ ತಲುಪಿದ್ದೇನೆ ಎಂದು ಭಾವಿಸುತ್ತಿಲ್ಲ , ಆದರೆ ನಾನು ನನ್ನ ಅಜ್ಜನ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ ಅವರ ಶ್ರೀಮಂತ ಪರಂಪರೆಯನ್ನು ಮುಂದುವರಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ನಿಮಗೆ ಕುಟುಂಬದ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನನಗೆ ಯಾವುದೇ ಒತ್ತಡವಿಲ್ಲ, ನಾನು ಏನೇ ಮಾಡಿದರು ನನ್ನ ಹೃದಯದಿಂದ ಮಾತನಾಡುತ್ತೇನೆ. ಮತ್ತು ನಾನು ದೇವರು ಬಯಸಿದ್ದೆಲ್ಲಾ ಅಂತಿಮವಾಗಿ ಸಂಭವಿಸುತ್ತದೆ.
ನಿಮ್ಮ ಗುರಿಯನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ ನಾನು ನನ್ನ ತಂದೆಯ ದೂರದೃಷ್ಟಿಯನ್ನು ಅನುಸರಿಸುತ್ತೇನೆ ಅದು ನನಗೆ ಬೆಳೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನು ತಮ್ಮ ತಂದೆ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಅನಂತ್ ಅಂಬಾನಿ ಅವರು ನನಗೆ ಅವರೊಬ್ಬ ಶಿಸ್ತಿನಿಂದ ಕೂಡಿದ ಅಪ್ಪನಿಗಿಂತ ಹೆಚ್ಚಾಗಿ ಅವರೊಬ್ಬ ಉತ್ತಮ ಸ್ನೇಹಿತ ಎಂದು ಹೇಳಿದರು.
ಯಾವುದೇ ಸಂಪ್ರದಾಯಿಕ ಗುಜರಾತಿ ಕುಟುಂಬದಂತೆ ಅವರು ಎಂದಿಗೂ ಶಿಸ್ತಿನಿಂದ ಕೂಡಿದವರಾಗಿರಲಿಲ್ಲ, ನನಗೆ ಅವರ ಮೇಲೆ ತುಂಬಾ ಗೌರವವಿದೆ. ನಾನು ಇಂದು ಏನು ಮಾಡಿದ್ದರೂ ಅದಕ್ಕೆಲ್ಲಾ ನನ್ನ ತಂದೆಯ ಬೆಂಬಲವೇ ಕಾರಣ ಎಂದು ಹೇಳಿದ್ದಾರೆ.
ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಗುಜರಾತ್‌ನ ಜಮಾನಗರದಲ್ಲಿ ಜುಲೈನಲ್ಲಿ ಹಸೆಮಣೆಗೆ ಕಾಲಿಡಲಿದ್ದು, ಈಗಾಗಲೇ ವಿವಾಹ ಪೂರ್ವ ಕಾರ್ಯಗಳು ಭರದಿಂದ ಸಾಗಿದೆ. ವಿವಾಹದ ಭಾಗವಾಗಿ ಜಮಾನಗರದ 50 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರಿಗೆ ಅಂಬಾನಿ ಕುಟುಂಬವೂ ಅನ್ನದಾನ ಮಾಡಿದೆ.