ಮುಕೇಶ್ ಅಂಬಾನಿ ಬಿಲಿಯನೇರ್ ಆಗಲು ಇವ್ರೇ ಕಾರಣ; ಕೋಟಿಗಟ್ಟಲೆ ಬಿಸಿನೆಸ್ ಹಿಂದಿರೋ ರೈಟ್ ಹ್ಯಾಂಡ್!
ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ ಅದ್ಭುತವಾದ ವ್ಯವಹಾರ ಕೌಶಲ್ಯ ಮತ್ತು ಅನುಭವವನ್ನು ಹೊಂದಿದ್ದರೂ, ಅವರ ಯಶಸ್ಸಿಗೆ ಹಲವರು ಕೊಡುಗೆ ನೀಡಿದ್ದಾರೆ. ಅದರಲ್ಲಿ ಮುಕೇಶ್ ಅಂಬಾನಿಯ ರೈಡ್ ಹ್ಯಾಂಡ್ ಎಂದು ಕರೆಸಿಕೊಳ್ಳೋ ಈ ವ್ಯಕ್ತಿಯೂ ಒಬ್ಬರು.
ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. 75,9057 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಬಹಳ ಸಮಯದಿಂದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ ಅದ್ಭುತವಾದ ವ್ಯವಹಾರ ಕೌಶಲ್ಯ ಮತ್ತು ಅನುಭವವನ್ನು ಹೊಂದಿದ್ದರೂ, ಅವರ ಯಶಸ್ಸಿಗೆ ಹಲವರು ಕೊಡುಗೆ ನೀಡಿದ್ದಾರೆ.
ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಸ್ನೇಹಿತ ಆನಂದ್ ಜೈನ್, ಮಗಳು ಇಶಾ ಅಂಬಾನಿ ಮತ್ತು ಇತರರು ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಬಿಸಿನೆಸ್‌ಗೆ ಬೆಂಬಲ ನೀಡಿದ್ದಾರೆ. ಹೀಗೆ ಮುಕೇಶ್ ಅಂಬಾನಿಗೆ ಬಿಸಿನೆಸ್‌ನಲ್ಲಿ ನೆರವಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು, ಮನೋಜ್ ಮೋದಿ.
ಮುಕೇಶ್ ಅಂಬಾನಿ, ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದ ವ್ಯಕ್ತಿಗಳಲ್ಲಿ ಒಬ್ಬರು ಮನೋಜ್ ಮೋದಿ. ಮನೋಜ್ ಮೋದಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದ ಹತ್ತಿರದ ಸಹಾಯಕರಲ್ಲಿ ಒಬ್ಬರು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಅಂಗಸಂಸ್ಥೆಗಳಿಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅವರನ್ನು ಮುಕೇಶ್ ಅಂಬಾನಿಯ ಬಲಗೈ ಎಂದು ಕರೆಯಲಾಗುತ್ತದೆ.
ಮುಕೇಶ್ ಅಂಬಾನಿ, ಕಳೆದ ಕೆಲವು ವರ್ಷಗಳಿಂದ ಡಿಜಿಟಲ್ ತಂತ್ರಜ್ಞಾನಗಳ ಡೊಮೇನ್‌ನಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಾರೆ. ಇದರಲ್ಲಿ ಮನೋಕ್ ಮೋದಿ, ಅಂಬಾನಿ ಗ್ರೂಪ್‌ನ ಕೆಲವು ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಲು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಂಬಾನಿಯವರ ಸಂಪತ್ತಿಗೆ ಮನೋಜ್ ಮೋದಿ, ಹಲವಾರು ಬಿಲಿಯನ್ ಡಾಲರ್‌ಗಳನ್ನು ಸೇರಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಮೊದಲೇ ಹೇಳಿದಂತೆ, ಮನೋಜ್ ಮೋದಿ ಪ್ರಚಾರದಿಂದ ದೂರವಿರಲು ಆದ್ಯತೆ ನೀಡುತ್ತಾರೆ. 60ರ ಹರೆಯದವರಾದ ಮನೋಜ್ ಮೋದಿ ಅವರು ರಿಲಯನ್ಸ್ ರಿಟೇಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಕನಾಮಿಕ್ ಟೈಮ್ಸ್ ಪ್ರಕಾರ ಮನೋಜ್ ಮೋದಿ, ಸ್ಟಾರ್ಟ್‌ಅಪ್‌ಗಳೊಂದಿಗೆ ವ್ಯವಹರಿಸುವಾಗ ಪರೋಕ್ಷವಾಗಿ ಮಾತುಕತೆಗಳನ್ನು ನಿಯಂತ್ರಿಸಲು ಇಷ್ಟಪಡುತ್ತಾರೆ. ಮೋದಿ ಅವರು ಅಂಬಾನಿ ಕುಟುಂಬದೊಂದಿಗೆ ಸುಮಾರು 40 ವರ್ಷಗಳಿಂದ ಸಂಬಂಧ ಹೊಂದಿದ್ದಾರೆ.
1980ರ ದಶಕದಲ್ಲಿ ಮುಕೇಶ್ ಅಂಬಾನಿಯವರ ತಂದೆ ಧೀರೂಭಾಯಿ ಅಂಬಾನಿ ತೈಲ ಮತ್ತು ಪೆಟ್ರೋಕೆಮಿಕಲ್ಸ್ ದೈತ್ಯವನ್ನು ನಿರ್ಮಿಸುತ್ತಿದ್ದಾಗ ಅವರು ಕಂಪನಿಯನ್ನು ಸೇರಿದರು. ಮನೋಜ್ ಮೋದಿ ಮುಂಬೈನ ಕೆಮಿಕಲ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಮುಖೇಶ್ ಅಂಬಾನಿ ಅವರ ಬ್ಯಾಚ್‌ಮೇಟ್ ಆಗಿದ್ದರು.
ಬಿಸಿನೆಸ್‌ನಲ್ಲಿ ಮೋದಿಯವರ ಕೊಡುಗೆಯನ್ನು ಶ್ಲಾಘಿಸಲು, ಮುಕೇಶ್ ಅಂಬಾನಿ ಅವರಿಗೆ 1500 ಕೋಟಿ ರೂಪಾಯಿಗಳ ಕಟ್ಟಡವನ್ನು ಉಡುಗೊರೆಯಾಗಿ ನೀಡಿದರು. 22 ಅಂತಸ್ತಿನ ಕಟ್ಟಡವು ಮುಂಬೈನ ನೇಪಿಯನ್ ಸಮುದ್ರ ರಸ್ತೆಯ ಬಳಿಯಿದೆ.