10 ಸಾವಿರ ಹೂಡಿಕೆ, 50 ಸಾವಿರ ಲಾಭ: ಮಳೆಗಾಲದ 5 ಬ್ಯುಸಿನೆಸ್ ಐಡಿಯಾ
ಮಳೆಗಾಲದ ಬಿಸಿನೆಸ್ ಐಡಿಯಾಗಳು: ಮಳೆಗಾಲ ಕೇವಲ ಹವಾಮಾನ ಬದಲಾವಣೆ ತರುವುದಿಲ್ಲ, ದುಡ್ಡು ಮಾಡುವ ಚಾನ್ಸುಗಳನ್ನೂ ತರುತ್ತೆ. ಕೇವಲ 10,000 ರೂ. ಹೂಡಿಕೆ ಮಾಡಿ ತಿಂಗಳಿಗೆ 40-50 ಸಾವಿರ ಗಳಿಸಬಹುದು. ಮಳೆಗಾಲದಲ್ಲಿ ಭಾರಿ ಡಿಮ್ಯಾಂಡ್ ಇರುವ 5 ಐಟಂಗಳ ಬಗ್ಗೆ ತಿಳಿದುಕೊಳ್ಳಿ.
- FB
- TW
- Linkdin
Follow Us
)
1. ಛತ್ರಿ (Umbrella)
ಮಳೆ ಬಂದ್ರೆ ಎಲ್ಲರಿಗೂ ಛತ್ರಿ ಬೇಕೇ ಬೇಕು. ಆಫೀಸಿಗೆ ಹೋಗೋರಿಗೆ, ಮಾರ್ಕೆಟ್ ಗೆ ಹೋಗೋರಿಗೆ, ಎಲ್ಲರಿಗೂ ಛತ್ರಿ ಅತ್ಯಗತ್ಯ. 10,000 ರೂ.ಗೆ 8-10 ಲೋಕಲ್ ಛತ್ರಿ ತಂದು 200-300 ರೂ.ಗೆ ಮಾರಿ, 100-150 ರೂ. ಲಾಭ ಗಳಿಸಬಹುದು. ಬಸ್ ಸ್ಟಾಪ್, ಶಾಲಾ-ಕಾಲೇಜುಗಳ ಗೇಟ್, ರೈಲ್ವೆ ಸ್ಟೇಷನ್ ಗಳಲ್ಲಿ ಮಾರಿ ಚೆನ್ನಾಗಿ ದುಡಿಯಬಹುದು.
2. ರೇನ್ ಕೋಟ್ (Raincoat)
ಛತ್ರಿ ಬದಲು ರೇನ್ ಕೋಟ್ ತೊಡೋರು ಜಾಸ್ತಿ. ಬೈಕ್ ಸವಾರರು, ವಿದ್ಯಾರ್ಥಿಗಳಿಗೆ ರೇನ್ ಕೋಟ್ ಡಿಮ್ಯಾಂಡ್ ಜಾಸ್ತಿ. 150-200 ರೂ.ಗೆ ಸಿಗುವ ರೇನ್ ಕೋಟ್ ಗಳನ್ನ 10000 ರೂ.ಗೆ 5-6 ತಂದು 300-400 ರೂ.ಗೆ ಮಾರಿ ದಿನಕ್ಕೆ 800-1,000 ರೂ. ಲಾಭ ಗಳಿಸಬಹುದು.
3. ಶೂ ಕವರ್ (Waterproof Shoe Cover)
ಚಪ್ಪಲಿ, ಶೂ ಗಳನ್ನ ಮಳೆಯಿಂದ ರಕ್ಷಿಸಿಕೊಳ್ಳಲು ಶೂ ಕವರ್ ಗಳನ್ನ ಬಳಸುತ್ತಾರೆ. ವಿದ್ಯಾರ್ಥಿಗಳು, ಆಫೀಸ್ ಗೆ ಹೋಗುವವರು, ಫೀಲ್ಡ್ ವರ್ಕರ್ ಗಳಿಗೆ ಇದರ ಡಿಮ್ಯಾಂಡ್ ಜಾಸ್ತಿ. 60-80 ರೂ.ಗೆ ಸಿಗುವ ಶೂ ಕವರ್ ಗಳನ್ನ 1,000 ರೂ.ಗೆ 12-15 ತಂದು 120-180 ರೂ.ಗೆ ಮಾರಿ ದಿನಕ್ಕೆ 1,000 ರೂ.ಗಿಂತ ಹೆಚ್ಚು ಗಳಿಸಬಹುದು.
4. ಮೊಬೈಲ್ ಕವರ್ (Mobile Rain Cover)
ಮಳೆಯಲ್ಲಿ ಮೊಬೈಲ್ ಗೆ ನೀರು ಬೀಳದಂತೆ ರಕ್ಷಿಸಲು ಮೊಬೈಲ್ ರೇನ್ ಕವರ್ ಗಳನ್ನ ಬಳಸುತ್ತಾರೆ. 25-30 ರೂ.ಗೆ ಸಿಗುವ ಕವರ್ ಗಳನ್ನ 1000 ರೂ.ಗೆ 30-35 ತಂದು 60-80 ರೂ.ಗೆ ಮಾರಿ100% ಗಿಂತ ಹೆಚ್ಚು ಲಾಭ ಗಳಿಸಬಹುದು. ಮೊಬೈಲ್ ಅಂಗಡಿ, ಮಾಲ್, ರೈಲ್ವೆ ಸ್ಟೇಷನ್ ಗಳಲ್ಲಿ ಇದಕ್ಕೆ ಡಿಮ್ಯಾಂಡ್ ಜಾಸ್ತಿ.
5. ಬ್ಯಾಗ್ ಕವರ್ (Waterproof Bag Cover)
ಮಳೆಯಲ್ಲಿ ಬ್ಯಾಗ್ ಗಳನ್ನ ರಕ್ಷಿಸಲು ವಾಟರ್ ಪ್ರೂಫ್ ಬ್ಯಾಗ್ ಕವರ್ ಗಳನ್ನ ಬಳಸುತ್ತಾರೆ. ವಿದ್ಯಾರ್ಥಿಗಳು, ಆಫೀಸ್ ಗೆ ಹೋಗುವವರು, ಡೆಲಿವರಿ ಬಾಯ್ ಗಳಿಗೆ ಇದರ ಅವಶ್ಯಕತೆ ಹೆಚ್ಚು. 30-40 ರೂ.ಗೆ ಸಿಗುವ ಬ್ಯಾಗ್ ಕವರ್ ಗಳನ್ನ 1,000 ರೂ.ಗೆ 25-30 ತಂದು 70-100 ರೂ.ಗೆ ಮಾರಿ ದಿನಕ್ಕೆ 1500 ರೂ. ಗಳಿಸಬಹುದು. ತಿಂಗಳಿಗೆ 45-50 ಸಾವಿರ ಲಾಭ ಗಳಿಸುವ ಅವಕಾಶ.