ಮಾರುಕಟ್ಟೆಗೆ 'ಮೋದಿ ಇಡ್ಲಿ' ಎಂಟ್ರಿ, 10 ರೂಗೆ ಹೊಟ್ಟೆ ತುಂಬಿಸಿ! ವಿಶೇಷತೆ ಹೀಗಿದೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಪಸರಿಸಿದೆ. ಕೊರೋನಾತಂಕದ ನಡುವೆ ವಿಶ್ವದ ದಿಗ್ಗಜ ನಾಯಕರ ರೇಟಿಂಗ್ ಕುಸಿಯುತ್ತಿದ್ದರೆ, ಇತ್ತ ಮೋದಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದನ್ನೇ ಗಮನಿಸಿ ಈಗ ತಮಿಳುನಾಡಿನಲ್ಲಿ ಅವರ ಹೆಸರಿನಲ್ಲಿ ಇಡ್ಲಿ ಮಾರಾಟ ಮಾಡುವ ತಯಾರಿ ಆರಂಭವಾಗಿದೆ. ಇದಕ್ಕೆ 'ಮೋದಿ ಇಡ್ಲಿ' ಎಂದೂ ಹೆಸರಿಡಲಾಗಿದೆ.
ಇನ್ನು ಪ್ರಧಾನಿ ಮೋದಿ ಹೆಸರಿನ ಈ ಇಡ್ಲಿಯನ್ನು ತಮಿಳುನಾಡಿನ ಸೇಲಂನಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿನ ಸುಮಾರು 20 ರಿಂದ 25 ಅಂಗಡಿಗಳಲ್ಲಿ 'ಮೋದಿ ಇಡ್ಲಿ' ಸಿಗಲಿದೆ. ಇದಾದ ಬಳಿಕ ಈ ಇಡೀ ನಗರದಲ್ಲಿ ಮೋದದಿ ಹೆಸರಿನ ಇಡ್ಲಿ ಲಭ್ಯವಿರಲಿದೆ.
ಸೇಲಂ ನಗರಾದ್ಯಂತ ವಿವಿಧ ಕಡೆ ಪಿಎಂ ಮೋದಿ ಹೆಸರಿನ ಇಡ್ಲಿಯ ಈ ಪೋಸ್ಟರ್‌ಗಳನ್ನು ಹಾಕಲಾಗಿದೆ. ಪ್ರತಿಯೊಬ್ಬರೂ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇನ್ನು ಮೋದಿ ಹೆಸರಿನ ಈ ಇಡ್ಲಿ ಹತ್ತು ರೂಪಾಯಿಗೆ ನಾಲ್ಕು ಪೀಸ್ ಸಿಗಲಿದೆ. ಜೊತೆಗೆ ಸಾಂಬಾರ್ ಹಾಗೂ ಚಟ್ನಿ ಕೂಡಾ ನೀಡುತ್ತಾರೆ. ಅಂದರೆ ಹತ್ತು ರೂಪಾಯಿಗೆ ಹೊಟ್ಟೆ ತುಂಬುತ್ತದೆ ಎಂದರೆ ತಪ್ಪಾಗುವುದಿಲ್ಲ.
ಮೋದಿ ಹೆಸರಿನ ಇಡ್ಲಿ ಮಾರಾಟ ಮಾಡುವ ಐಡಿಯಾ ಇಲ್ಲಿನ ರಾಜ್ಯ ಬಿಜೆಪಿ ನಾಯಕ ಮಹೇಶ್ ಅವರದ್ದಾಗಿದೆ. ಅವರೇ ನಗರಾದ್ಯಂತ ಈ ಬಗ್ಗೆ ಪೋಸ್ಟರ್ ಹಾಕಿಸಿದ್ದು. ಸೋಶಿಯಲ್ ಮೀಡಿಯಾದಲ್ಲಿ ಪಿಎಂ ಮೋದಿ ಜೊತೆಗೆ ಇಡ್ಲಿಯ ಫೋಟೋ ಭಾರೀ ವೈರಲ್ ಆಗಿದೆ.
ಈ ಇಡ್ಲಿಯ ರುಚಿಯೇ ಇದರ ಬಹುದೊಡ್ಡ ವಿಶೇಷತೆ ಎಂಬುವುದು ಮಹೆಶ್ ಅವರ ಮಾತಾಗಿದೆ. ತಾಜಾ ಹಾಗೂ ಶುದ್ಧ ಸೊಪ್ಪಿನಿಂದ ಸಾಂಬಾರ್ ಮಾಡಲಾಗುತ್ತದೆ. ಇಲ್ಲಿ ಪ್ರತಿದಿನ ಸುಮಾರು 40 ಸಾವಿರ ಇಡ್ಲಿ ಮಾಡಲಾಗುತ್ತದೆ.