- Home
- Business
- ನೀವು ಅಂಬಾನಿಯಂತಾಗಬೇಕೇ? ಹಾಗಿದ್ರೆ ಈ ಸೀಕ್ರೆಟ್ ತಿಳಿದಿರಲಿ… ಇಲ್ಲಾಂದ್ರೆ ಶ್ರೀಮಂತರಾಗೋ ಕನಸು ಬರೀ ಕನಸಾಗಿ ಉಳಿಯುತ್ತೆ!
ನೀವು ಅಂಬಾನಿಯಂತಾಗಬೇಕೇ? ಹಾಗಿದ್ರೆ ಈ ಸೀಕ್ರೆಟ್ ತಿಳಿದಿರಲಿ… ಇಲ್ಲಾಂದ್ರೆ ಶ್ರೀಮಂತರಾಗೋ ಕನಸು ಬರೀ ಕನಸಾಗಿ ಉಳಿಯುತ್ತೆ!
ಅಂಬಾನಿಯಂತೆ ಜೀವನ ನಡೆಸಬೇಕೆಂದು ಬಯಸದವರು ಯಾರೂ ಇಲ್ಲ. ಆದರೆ ಯಶಸ್ವಿ ಮತ್ತು ಸಂತೋಷದ ಜೀವನಕ್ಕಾಗಿ, ನಿಮ್ಮಲ್ಲಿ ಕೆಲವು ಗುಣಗಳನ್ನು ಹೊಂದಿರುವುದು ಬಹಳ ಮುಖ್ಯ. ಅಂತಹ ಕೆಲವು ಪ್ರಮುಖ ತಂತ್ರಗಳನ್ನು ಮುಖೇಶ್ ಅಂಬಾನಿ ಅವರ ಜೀವನದಿಂದ ಕಲಿಯಬಹುದು. ಅವುಗಳನ್ನ ನಾವು ನಿಮಗೆ ಹೇಳ್ತೀವಿ.

ಮುಖೇಶ್ ಅಂಬಾನಿ (Mukesh Ambani) ಅವರ ಹೆಸರು ಭಾರತದಲ್ಲಿ ತಿಳಿಯದೇ ಇರುವವರು ಕಡಿಮೆಯೇ. ಧೀರೂಭಾಯಿ ಅಂಬಾನಿ ರಿಲಯನ್ಸ್ ಅನ್ನು ಸ್ಥಾಪಿಸಿರಬಹುದು, ಆದರೆ ಪ್ರಸ್ತುತ ಈ ಕಂಪನಿಯು ವಿಶ್ವಾದ್ಯಾಂತ ನಂ 1 ಆಗೋದಕ್ಕೆ ಮುಖೇಶ್ ಅಂಬಾನಿ ದೊಡ್ಡ ಪಾತ್ರ ವಹಿಸಿದ್ದಾರೆ. ಆದರೆ ಈ ವ್ಯಕ್ತಿಯು ಒಂದೆಡೆ ಹೇಗೆ ಸಂಪತ್ತನ್ನು ಗಳಿಸುತ್ತಿದ್ದಾರೆ ಹಾಗೂ ಮತ್ತೊಂದೆಡೆ, ತನ್ನ ವೈಯಕ್ತಿಕ ಜೀವನವನ್ನು ಹೇಗೆ ಇಷ್ಟೊಂದು ಎಂಜಾಯ್ ಮಾಡ್ತಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ ಅಂತ ನಿಮಗೂ ಅನಿಸಿರಬಹುದು ಅಲ್ವಾ? ಆ ಸೀಕ್ರೆಟ್ ಅನ್ನು ನಾವು ನಿಮಗೆ ಹೇಳ್ತೀವಿ.
ಜನರು ವೃತ್ತಿಜೀವನವನ್ನು ರೂಪಿಸುವಲ್ಲಿ ಎಷ್ಟು ಮಗ್ನರಾಗುತ್ತಾರೆ ಎಂದರೆ ಅವರು ತಮ್ಮ ವೈಯಕ್ತಿಕ ಜೀವನವನ್ನು (personal life)ತ್ಯಾಗ ಮಾಡುತ್ತಾರೆ, ಅಥವಾ ವೈಯಕ್ತಿಕ ಜೀವನಕ್ಕೆ ಗಮನ ನೀಡುವ ಪ್ರಕ್ರಿಯೆಯಲ್ಲಿ ಅವರು ತಮ್ಮ ಕನಸುಗಳನ್ನೇ ಕೊಂದು ಬಿಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಮುಖೇಶ್ ಅಂಬಾನಿಯಿಂದ ಕೆಲವು ತಂತ್ರಗಳನ್ನು ಕಲಿಯಬೇಕು, ಇದು ಸಂತೋಷದ ಜೀವನವನ್ನು ನಡೆಸಲು ಮತ್ತು ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ.
ನಾಚಿಗೆಯನ್ನು ಬಿಡಿ
ನೀವು ಮುಂದೆ ಸಾಗಲು ಬಯಸಿದರೆ, ನೀವು ನಾಚಿಗೆಯನ್ನು ಊರಾಚೆ ಬಿಡಬೇಕು. ಜನರು ಏನು ಯೋಚಿಸುತ್ತಾರೆ ಎಂಬ ಭಯದಿಂದ ನೀವು ಹೊರಬರಬೇಕು. ಅಂಬಾನಿ ಹೊಸ ಉದ್ಯಮಕ್ಕೆ ಕಾಲಿಡುವುದು ಅಥವಾ ಹೊಸ ವಿಷಯಗಳನ್ನು ಪ್ರಾರಂಭಿಸುವಂತಹ ಹೊಸ ನಿರ್ಧಾರವನ್ನು ತೆಗೆದುಕೊಂಡಾಗಲೆಲ್ಲಾ, ಅವರು ಹಲವು ಜನರಿಂದ ಟೀಕೆಗೆ ಒಳಗಾಗುತ್ತಾರೆ. ಹಾಗಂತ ಅವರು ನಿರ್ಧಾರ ತೆಗೆದುಕೊಳ್ಳೋದನ್ನೆ ಬಿಡುತ್ತಾರ? ಖಂಡಿತಾ ಇಲ್ಲ.
ಸಾಮಾನ್ಯ ಮನುಷ್ಯನನ್ನು ಅವನ ಸುತ್ತಲಿನ ಜನರು ಮಾತ್ರ ನಿರ್ಣಯಿಸುತ್ತಾರೆ, ಆದರೆ ಇಡೀ ಜಗತ್ತು ಮುಖೇಶ್ ಅಂಬಾನಿಯ ಪ್ರತಿಯೊಂದು ಹೆಜ್ಜೆಯನ್ನು ಅಳೆಯುತ್ತದೆ. ಅವರು ಕೆಲವು ನಿರ್ಧಾರಗಳಲ್ಲಿ ವೈಫಲ್ಯವನ್ನು ಎದುರಿಸಬೇಕಾಗಿ ಬಂದರೂ, ಭಾರತದ ಈ ಬಿಲಿಯನೇರ್ ನಾಚಿಕೆಪಟ್ಟುಕೊಂಡು ಸುಮ್ಮನಿರೋದನ್ನು ನೀವು ನೋಡಿರೋದಕ್ಕೆ ಸಾಧ್ಯ ಇಲ್ಲ. ಬದಲಾಗಿ, ಅವರು ತಮ್ಮ ತಪ್ಪು ನಿರ್ಧಾರದಿಂದ ಕಲಿಯುತ್ತಾರೆ ಮತ್ತು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ. ನೀವು ಕೂಡ ಮಾಡಬೇಕಾಗಿರೋದು ಆಷ್ಟೇ.
Mukesh Ambani
ಕಲಿಯಲು ಹಿಂಜರಿಯಬೇಡಿ
ಮುಖೇಶ್ ಅಂಬಾನಿಯಂತೆ ಉದ್ಯಮಿಯಾಗುವುದು ಸುಲಭವಲ್ಲ. ಧೀರೂಭಾಯಿ ಅಂಬಾನಿಯಂತಹ (Dhirubai Ambani) ಯಶಸ್ವಿ ಉದ್ಯಮಿಯ ಮಗನಾಗಿರುವುದರಿಂದ ಅವರು ಬಾಲ್ಯದಿಂದಲೂ ಅಂತಹ ಪಾಠಗಳನ್ನು ಪಡೆದಿರಬೇಕು, ಅದು ಯಶಸ್ಸಿಗೆ ಅವಶ್ಯಕವಾಗಿದೆ. ಮುಖೇಶ್ ಸಮಯದೊಂದಿಗೆ ರಿಲಯನ್ಸ್ ನ್ನು ದೊಡ್ಡಮಟ್ಟದಲ್ಲಿ ಬೆಳೆಸಲು ಏನು ಮಾಡಬೇಕು ಅನ್ನೋದನ್ನು ಕಲಿಯೋದಕ್ಕೆ ಮರೆಯಲಿಲ್ಲ.
ಅಂಬಾನಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಜಿಯೋ ಪ್ರಾರಂಭವಾಗುವ ಸಮಯದಲ್ಲಿ, ಈ ಯೋಜನೆಯ ಪರಿಕಲ್ಪನೆಯಲ್ಲಿ ತನಗೆ ಹೆಚ್ಚು ನಂಬಿಕೆ ಇರಲಿಲ್ಲ ಎಂದು ಹೇಳಿದ್ದರು. ಆವಾಗ ಮಗ ಅನಂತ್ ಅಂಬಾನಿ, ನಿಮಗೆ ಯುವ ಪೀಳಿಗೆಯ ಬಗ್ಗೆ ಗೊತ್ತಿಲ್ಲ ಎಂದರಂತೆ. ಇದರ ನಂತರ, ಜೂನಿಯರ್ ಅಂಬಾನಿ ಅವರನ್ನು ನಂಬಿ ಮುಕೇಶ್ ಮುಂದೆ ಸಾಗುವಂತೆ ಸಲಹೆ ನೀಡಿದರು. ಮುಕೇಶ್ ತನ್ನ ಮಗನಿಗೆ ವಿಧೇಯರಾಗಿದ್ದರು ಮತ್ತು ಜಿಯೋ ಯಶಸ್ಸಿನ ಪ್ರಯಾಣದಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿತರು. ಅದೇ ರೀತಿ ನೀವು ಸಹ ನಿಮ್ಮ ಸುತ್ತಲಿನವರು ಮತ್ತು ಅನುಭವಿ ಜನರಿಂದ ಯಾವಾಗಲೂ ಹೊಸ ವಿಷಯಗಳನ್ನು ಕಲಿಯಿರಿ. ಆಗ ಮಾತ್ರ ನೀವು ಯಾವಾಗಲೂ ಪ್ರಗತಿಯ ಹಾದಿಯಲ್ಲಿರಲು ಸಾಧ್ಯವಾಗುತ್ತದೆ.
ಭವಿಷ್ಯದ ಬಗ್ಗೆ ಆಲೋಚಿಸಿ, ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿ
ನೀವು ಯಶಸ್ವಿಯಾಗಲು ಬಯಸಿದರೆ, ನೀವು ರಿಸ್ಕ್ ತೆಗೆದುಕೊಳ್ಳಲು ಕಲಿಯಬೇಕು. ನೀವು ನಿಮ್ಮ ಆರಾಮ ವಲಯದಿಂದ ಹೊರ ಬಂದರೆ ಮಾತ್ರ ನಿಮ್ಮ ಯಶಸ್ಸಿನ ನಿಜವಾದ ಪ್ರಯಾಣವು ಪ್ರಾರಂಭವಾಗುತ್ತದೆ. ಮುಖೇಶ್ ಅಂಬಾನಿ ತಮ್ಮ ತಂದೆಯ ವ್ಯವಹಾರವನ್ನು ಯಥಾವತ್ತಾಗಿ ಮುಂದುವರಿಸಿದ್ದರೆ ಮತ್ತು ಹೊಸ ಕ್ಷೇತ್ರಗಳನ್ನು ಪ್ರವೇಶಿಸದಿದ್ದರೆ, ಅವರು ಇಂದು ರಿಲಯನ್ಸ್ ಅನ್ನು ಇಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿದ್ದರೇ?
ಯಾವಾಗಲೂ ಮುಂಬರುವ ಸಮಯದ ಬಗ್ಗೆ ಯೋಚಿಸಿ ಮತ್ತು ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳುವ ಮೂಲಕ ಮುಂದುವರಿಯಿರಿ. ನೀವು ಒಂದು ವಿಷಯದಲ್ಲಿ ಯಶಸ್ಸನ್ನು ಪಡೆದ ತಕ್ಷಣ, ನೀವು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಲು ಪ್ರಾರಂಭಿಸಿ, ಇದು ಯಶಸ್ಸನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಬ್ಯುಸಿನೆಸ್ ಮಾಡುವವರಿಗೆ ಮಾತ್ರವಲ್ಲದೆ 9 ರಿಂದ 5 ವಿಭಾಗದಲ್ಲಿ ಕೆಲಸ ಮಾಡುವ ಜನರಿಗೂ ಅನ್ವಯಿಸುತ್ತದೆ.
ನಿಮ್ಮ ಸಂಗಾತಿಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ
ಮದುವೆಯ ನಂತರವೂ, ನಿಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ನೀವು ಶ್ರಮಿಸಬೇಕು ಎನ್ನುವ ಯೋಚನೆ ನಿಮಗಿದ್ದರೆ, ನಿಮ್ಮನ್ನು ಬೆಂಬಲಿಸುವ ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ (selecting perfect partner) ಮಾಡುವುದು ಬಹಳ ಮುಖ್ಯ. ಮುಖೇಶ್ ಅಂಬಾನಿ ಅವರ ವ್ಯವಹಾರದಲ್ಲಿ ಅನೇಕ ಏರಿಳಿತಗಳು ಇರಬಹುದು, ಆದರೆ ನೀತಾ ಅಂಬಾನಿ ಯಾವಾಗಲೂ ಬಲವಾದ ಸ್ತಂಭದಂತೆ ಅವರ ಪಕ್ಕದಲ್ಲಿ ನಿಂತಿರೋದನ್ನ ನೀವು ಕಾಣಬಹುದು. ಆದ್ದರಿಂದ, ನಿಮ್ಮ ಸಂಗಾತಿಯನ್ನು ನೀವು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡುವುದು ಬಹಳ ಮುಖ್ಯ.
ಕರಿಯರ್ ಗಾಗಿ ನಿಮ್ಮ ಕುಟುಂಬವನ್ನು ತ್ಯಾಗ ಮಾಡಬೇಡಿ
ಮುಖೇಶ್ ಅಂಬಾನಿ ಜನಪ್ರಿಯ ಬ್ಯುಸಿನೆಸ್ ಮ್ಯಾನ್ ಹೌದು, ಆದರೆ ಅವರು ತಮ್ಮ ಮಕ್ಕಳು ಅಥವಾ ಇತರ ಕುಟುಂಬ ಸದಸ್ಯರ ಬಗ್ಗೆ ಗಮನ ಹರಿಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಅವರು ಆಕಾಶ್, ಇಶಾ ಮತ್ತು ಅನಂತ್ ಅವರನ್ನು ವ್ಯವಹಾರಕ್ಕಾಗಿ ರೆಡಿ ಮಾಡಿದರು. ಇಂದು ಪ್ರತಿಯೊಬ್ಬ ಮಕ್ಕಳು ಉನ್ನತ ಮಟ್ಟಕೇರಿದ್ದಾರೆ. ಮೂವರು ಮಕ್ಕಳು ಯಶಸ್ವಿ ಅವರು ತಮ್ಮ ಶಿಷ್ಟಾಚಾರಗಳು ಮತ್ತು ಡೌನ್ ಟು ಅರ್ಥ್ ನಡೆಗಾಗಿ ಹೆಸರುವಾಸಿಯಾಗಿದ್ದಾರೆ.
ವೃತ್ತಿಜೀವನ ಮತ್ತು ಯಶಸ್ಸಿಗಾಗಿ ನೀವು ಕುಟುಂಬವನ್ನು ತ್ಯಾಗ ಮಾಡುವ ಅಗತ್ಯವಿಲ್ಲ ಎಂಬುದಕ್ಕೆ ಮುಖೇಶ್ ಅಂಬಾನಿ ಪರ್ಫೆಕ್ಟ್ ಉದಾಹರಣೆ. ಇದಕ್ಕೆ ಬೇಕಾಗಿರುವುದು ಶಿಸ್ತುಬದ್ಧ ಮತ್ತು ರಚನಾತ್ಮಕ ಜೀವನ. ಇದರಿಂದ ನೀವು ಎಲ್ಲದಕ್ಕೂ ಸಮಯವನ್ನು ಹೊಂದಬಹುದು. ಇದನ್ನ ನೆನಪಿನಲ್ಲಿಟ್ಟರೆ ಯಶಸ್ಸಿ ಕರಿಯರ್ ಜೊತೆಗೆ ಸಂತೋಷದಿಂದ ತುಂಬಿದ ಕುಟುಂಬ ನಿಮ್ಮದಾಗುತ್ತೆ.
ಅಹಂ ಅನ್ನು ಬದಿಗಿಟ್ಟು ಜನರೊಂದಿಗೆ ಕನೆಕ್ಟ್ ಆಗಿ
ಇತರ ಶ್ರೀಮಂತರಲ್ಲಿ ಸಾಮಾನ್ಯವಾಗಿ ಕಂಡುಬರುವ ಅಸಭ್ಯ ವರ್ತನೆ ಮುಖೇಶ್ ಅಂಬಾನಿಯವರಲ್ಲಿ ಎಂದಿಗೂ ಕಂಡುಬರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರು ತಮ್ಮ ಸಣ್ಣ ಉದ್ಯೋಗಿಗಳಿಂದ ಹಿಡಿದು ದೇವಾಲಯದ ಪಂಡಿತರು, ಪಿಎಪಿಗಳು, ಉದ್ಯಮಿಗಳು, ಹಿರಿಯ ರಾಜಕಾರಣಿಗಳು ಮುಂತಾದವರನ್ನು ಅತ್ಯಂತ ಸುಲಭವಾಗಿ ಮತ್ತು ಸೌಮ್ಯತೆಯಿಂದ ಭೇಟಿಯಾಗುವುದನ್ನು ಕಾಣಬಹುದು. ಮತ್ತು ಇದು ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.
ಅಧಿಕಾರ ಮತ್ತು ಹಣ ಹೆಚ್ಚಾದ ಕೂಡಲೇ ನಿಮ್ಮ ಅಹಂ ಕೂಡ ಹೆಚ್ಚಾದರೆ ಅದು ನಿಮ್ಮ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿಸಲು ಪ್ರಾರಂಭಿಸಿದರೆ, ನಿಜವಾದ ಅರ್ಥದಲ್ಲಿ ಯಶಸ್ಸು ಮತ್ತು ಸಂತೋಷದ ಜೀವನವನ್ನು ಸಾಧಿಸಲು ನಿಮಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ನೀವು ಎಷ್ಟೇ ಎತ್ತರಕ್ಕೆ ಬೆಳೆಯಿರಿ, ಬಂದ ದಾರಿಯನ್ನು, ಸಂಸ್ಕಾರವನ್ನು ಎಂದಿಗೂ ಮರೆಯಬೇಡಿ.