72 ದಿನ ವ್ಯಾಲಿಡಿಟಿ ಸೂಪರ್ ಪ್ಲಾನ್ ನೀಡಿದ ಜಿಯೋ; ಹೆಚ್ಚುವರಿಯಾಗಿ ಸಿಗಲಿದೆ 20GB ಡೇಟಾ
ರಿಲಯನ್ಸ್ ಜಿಯೋದ 799 ರೂ. ಪ್ರೀಪೇಯ್ಡ್ ಪ್ಲಾನ್ 72 ದಿನಗಳ ವ್ಯಾಲಿಡಿಟಿ, 164GB ಡೇಟಾ, ಅನ್‌ಲಿಮಿಟೆಡ್ ಕರೆಗಳು ಮತ್ತು ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್‌ನೊಂದಿಗೆ ಬರುತ್ತದೆ.

ದೇಶದ ಟಾಪ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಪ್ರೀಪೇಯ್ಡ್ ಪ್ಲಾನ್‌ಗಳಿಂದ ಗ್ರಾಹಕರನ್ನ ಸೆಳೆಯುತ್ತಲೇ ಇದೆ. ನಿಮಗೆ ಒಳ್ಳೆ ವ್ಯಾಲಿಡಿಟಿ ಮತ್ತು ಡೇಟಾ ಬೇಕಂದ್ರೆ ಜಿಯೋದ ಹೊಸ 799 ರೂ. ಪ್ಲಾನ್ ನಿಮಗಾಗಿ ಪರ್ಫೆಕ್ಟ್.
ಜಿಯೋದ 799 ರೂ. ರಿಚಾರ್ಜ್ ಪ್ಲಾನ್‌ನ ಸ್ಪೆಷಾಲಿಟಿ ಅಂದ್ರೆ ಅದರ 72 ದಿನಗಳ ವ್ಯಾಲಿಡಿಟಿ. 28 ದಿನಗಳ ಪ್ಲಾನ್‌ಗಳಿಗಿಂತ ಇದು ತುಂಬಾ ಲಾಭದಾಯಕವಾಗಿದೆ. ಪ್ರತಿ ತಿಂಗಳು ರಿಚಾರ್ಜ್ ಮಾಡೋಕೆ ಆಗದವರಿಗೆ ಇದು ಒಳ್ಳೆಯ ಆಯ್ಕೆ.
72 ದಿನಗಳ ವ್ಯಾಲಿಡಿಟಿಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆಗಳು ಫ್ರೀ. ಪ್ರತಿದಿನ 2GB ಹೈಸ್ಪೀಡ್ ಡೇಟಾ ಸಿಗುತ್ತದೆ. 72 ದಿನಗಳಿಗೆ ಒಟ್ಟು 144GB ಡೇಟಾ ಜೊತೆಗೆ 20GB ಹೆಚ್ಚುವರಿ ಡೇಟಾ ಕೂಡ ಸಿಗುತ್ತೆ. ಹೀಗಾಗಿ ಒಟ್ಟು 164GB ಡೇಟಾ ಸಿಗುತ್ತೆ. ವಿಡಿಯೋ ಸ್ಟ್ರೀಮಿಂಗ್, ಗೇಮಿಂಗ್, ಆನ್‌ಲೈನ್ ಕೆಲಸಗಳಿಗೆ ಇಷ್ಟು ಡೇಟಾ ಸಾಕು. ಫ್ರೀ ಹಾಟ್‌ಸ್ಟಾರ್, ಜಿಯೋ ಟಿವಿ, ಕ್ಲೌಡ್ ಸ್ಟೋರೇಜ್ ಕೂಡ ಈ ಪ್ಲಾನ್‌ನಲ್ಲಿದೆ.
ಪ್ಲಾನ್‌ನ ಹೈಲೈಟ್ಸ್
90 ದಿನಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಸಬ್‌ಸ್ಕ್ರಿಪ್ಶನ್: ಸಿನಿಮಾ, ಸ್ಪೋರ್ಟ್ಸ್, ಟಿವಿ ಶೋಗಳನ್ನ ನೋಡಬಹುದು. ಜಿಯೋ ಟಿವಿ ಆಕ್ಸೆಸ್ ಕೂಡ ಸಿಗುತ್ತೆ.
50GB ಜಿಯೋ AI ಕ್ಲೌಡ್ ಸ್ಪೇಸ್: ಫೈಲ್‌ಗಳು, ಫೋಟೋಗಳು, ವೀಡಿಯೋಗಳನ್ನ ಸೇವ್ ಮಾಡಬಹುದು. ಡೇಟಾ ಬಳಕೆ ಜಾಸ್ತಿ ಇರೋರಿಗೆ ಈ ಪ್ಲಾನ್ ಸೂಕ್ತ.
ದಿನಾ 1.5GB ಗಿಂತ ಹೆಚ್ಚು ಡೇಟಾ ಬಳಸೋರಿಗೆ ಮತ್ತು ಪ್ರೀಮಿಯಂ ಎಂಟರ್‌ಟೈನ್‌ಮೆಂಟ್ ಬೇಕಾದವರಿಗೆ ಈ 799 ರೂ. ಪ್ಲಾನ್ ಒಳ್ಳೆಯದು. ಹೆಚ್ಚುವರಿ ಮಾಹಿತಿಗಾಗಿ ಮೈ ಜಿಯೋ ಆ್ಯಪ್ ಅಥವಾ ಜಿಯೋ ವೆಬ್‌ಸೈಟ್‌ನಲ್ಲಿ ಈ ಪ್ಲಾನ್ ಚೆಕ್ ಮಾಡಿ.