ಭಾರತೀಯ ಹಸುಗಳ ಸಗಣಿಗೆ ವಿದೇಶದಿಂದ ಬೇಡಿಕೆ; ₹50ಗೆ ಒಂದು ಕೆಜಿ!
ಭಾರತೀಯ ಹಸುವಿನ ಸಗಣಿಯಿಂದ ಭಾರೀ ಉಪಯೋಗಗಳಿವೆ. ಭಾರತದಲ್ಲಿ ಇದನ್ನು ಪವಿತ್ರ ಅಂತಾ ಭಾವಿಸ್ತಾರೆ. ಹಸುವಿನ ಸಗಣಿಯ ಉಪಯೋಗಗಳನ್ನ ಜಗತ್ತು ಅರ್ಥ ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಭಾರತದಿಂದ ಹಸುವಿನ ಸಗಣಿಯ ರಫ್ತು ಜಾಸ್ತಿ ಆಗುತ್ತಿದ್ದು, ಉತ್ತಮ ಬೆಲೆಯೂ ಸಿಗುತ್ತಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ಹಸುವಿನ ಸಗಣಿ ರಫ್ತು ಜೋರಾಗಿದೆ. ಹಲವು ದೇಶಗಳಿಗೆ ಹಸುವಿನ ಸಗಣಿ ರಫ್ತು ಆಗುತ್ತಿದೆ. ಈ ದೇಶಗಳು ಹಸುವಿನ ಸಗಣಿಯನ್ನು ಹಲವು ರೀತಿಯಲ್ಲಿ ಉಪಯೋಗಿಸುತ್ತಿವೆ. ಈ ದೇಶಗಳಲ್ಲಿ ಕುವೈತ್ ಮತ್ತು ಅರಬ್ ದೇಶಗಳು ಸೇರಿವೆ.
ಭಾರತದ ಗೋಮಯವನ್ನು ಅರಬ್ ದೇಶಗಳು ಹೇಗೆ ಉಪಯೋಗಿಸ್ತಾ ಇವೆ, ಎಷ್ಟು ಬೆಲೆ ಕೊಟ್ಟು ಕೊಳ್ಳುತ್ತಾರೆ ಅಂತಾ ನೋಡೋಣ.
ಹಸುವಿನ ಸಗಣಿ ಬಳಕೆ
ಹಸುವಿನ ಸಗಣಿ ಪುಡಿಯನ್ನು ಉಪಯೋಗಿಸಿದರೆ ಖರ್ಜೂರ ಹೆಚ್ಚು ಬೆಳೆಯುತ್ತದೆ. ಅಂತ ಈ ದೇಶಗಳ ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಿ ಕಂಡುಹಿಡಿದಿದ್ದಾರೆ.
ಖರ್ಜೂರ ಬೆಳೆಯಲ್ಲಿ ಹಸುವಿನ ಸಗಣಿ ಗೊಬ್ಬರವನ್ನು ಉಪಯೋಗಿಸಿದರೆ ಹಣ್ಣುಗಳು ದೊಡ್ಡದಾಗಿ ಬೆಳೆಯುತ್ತವೆ, ಉತ್ಪಾದನೆಯೂ ಜಾಸ್ತಿ ಆಗುತ್ತದೆ. ಖರ್ಜೂರ ಉತ್ಪಾದನೆಯನ್ನು ಹೆಚ್ಚಿಸಲು, ಕುವೈತ್ ಸೇರಿದಂತೆ ಅರಬ್ ದೇಶಗಳು ಭಾರತದಿಂದ ಹಸುವಿನ ಸಗಣಿಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತವೆ.
ಪೆಟ್ರೋಲಿಯಂ ತೈಲ ಮತ್ತು ಅನಿಲ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಅರಬ್ ದೇಶಗಳು ಖರ್ಜೂರ ಉತ್ಪಾದನೆಯನ್ನು ಹೆಚ್ಚಿಸಲು ಹಸುವಿನ ಸಗಣಿಯನ್ನು ಬಳಸುತ್ತಿವೆ. ಇತ್ತೀಚೆಗೆ ಕುವೈತ್ 192 ಮೆಟ್ರಿಕ್ ಟನ್ ಹಸುವಿನ ಸಗಣಿ ಭಾರತದಿಂದ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿದೆ.
ಭಾರತದಿಂದ ರಫ್ತಾಗುವ ಹಸುವಿನ ಸಗಣಿಯ ಬೆಲೆಯಿಂದಲೇ ಅದರ ಬೇಡಿಕೆ ಮತ್ತು ಉಪಯೋಗವನ್ನು ಅಂದಾಜು ಮಾಡಬಹುದು. ಈಗ ಒಂದು ಕೆಜಿಗೆ 30 ರಿಂದ 50 ರೂಪಾಯಿಗೆ ಹಸುವಿನ ಸಗಣಿ ರಫ್ತು ಆಗುತ್ತಿದೆ.
ಕೃಷಿಯನ್ನು ಮುಖ್ಯ ಉದ್ಯೋಗವನ್ನಾಗಿ ಹೊಂದಿರುವ ಭಾರತದಲ್ಲಿ ಜಾನುವಾರುಗಳ ಸಂಖ್ಯೆಯೂ ತುಂಬಾ ಜಾಸ್ತಿ. ಭಾರತದಲ್ಲಿ ಸುಮಾರು 30 ಕೋಟಿಗೂ ಅಧಿಕ ಜಾನುವಾರುಗಳಿವೆ ಅಂತಾ ಹೇಳಲಾಗುತ್ತದೆ. ಇವುಗಳಿಂದ ಪ್ರತಿದಿನ ಸುಮಾರು 30 ಲಕ್ಷ ಟನ್ ಹಸುವಿನ ಸಗಣಿ ಸಿಗುತ್ತದೆ.
ಭಾರತದಲ್ಲಿ ಹಸುವಿನ ಸಗಣಿ ಬಳಕೆ
ಭಾರತದಲ್ಲಿಯೇ ಹಸುವಿನ ಸಗಣಿಯನ್ನು ಹಲವು ರೀತಿಯಲ್ಲಿ ಉಪಯೋಗಿಸುತ್ತಾರೆ. ಕೃಷಿಯಲ್ಲಿ ಗೊಬ್ಬರವಾಗಿ ಬಳಸುತ್ತಾರೆ. ಇಂಧನವಾಗಿ ಬಳಸುವುದಲ್ಲದೆ, ನೈಸರ್ಗಿಕ ಅನಿಲ ತಯಾರಿಕೆಯಲ್ಲೂ ಹಸುವಿನ ಸಗಣಿ ಬಳಸ್ತಾರೆ. ಪರಿಸರಕ್ಕೆ ಹಾನಿಯಾಗದ ಹಲವು ವಸ್ತುಗಳನ್ನು ತಯಾರಿಸಲು ಹಸುವಿನ ಸಗಣಿಯನ್ನು ಉಪಯೋಗಿಸುತ್ತಾರೆ.