ಅಂಬಾನಿ, ಅದಾನಿಯನ್ನೂ ಮೀರಿಸಿ ದೇಶದ ದುಬಾರಿ ಫ್ಲಾಟ್ ಹೊಂದಿದ ಉದ್ಯಮಿ!
ಭಾರತದ ಅತಿ ದುಬಾರಿ ಅಪಾರ್ಟ್‌ಮೆಂಟ್ ಮಾಲೀಕರು ಗೌತಮ್ ಅದಾನಿ, ಮುಕೇಶ್ ಅಂಬಾನಿ ಅಥವಾ ಲಕ್ಷ್ಮಿ ಮಿತ್ತಲ್ ಅಲ್ಲ. ದೇಶದ ನಂಬರ್ ಒನ್ ಉದ್ಯಮಿಗಳನ್ನು ಮೀರಿಸುವಂತೆ ಅತ್ಯಂತ ದುಬಾರಿ ಫ್ಲ್ಯಾಟ್ ಹೊಂದಿದ ವ್ಯಕ್ತಿ ಇಲ್ಲಿದ್ದಾರೆ ನೋಡಿ..
ಭಾರತದ ಅತಿ ಐಷಾರಾಮಿ ಮನೆಗಳ ಬಗ್ಗೆ ಮಾತಾಡುವಾಗ ಮುಕೇಶ್ ಅಂಬಾನಿ ಅವರ ಆಂಟಿಲಿಯಾ ನೆನಪಿಗೆ ಬರುತ್ತದೆ. ಒಟ್ಟು 4,00,000 ಚದರ ಅಡಿ ವಿಸ್ತೀರ್ಣ, 27 ಮಹಡಿಗಳ ಆಂಟಿಲಿಯಾ ಬೆಲೆ 2023ರಲ್ಲಿ $4.7 ಬಿಲಿಯನ್. ಆದರೆ ಮುಂಬೈನಲ್ಲಿರುವ ಒಂದು ಹೊಸ ಆಸ್ತಿ ಈಗ ಭಾರತದ ಅತಿ ದುಬಾರಿ ಫ್ಲಾಟ್ ಆಗಿದೆ.
ಈ ಫ್ಲಾಟ್ ಬೆಲೆ ಸುಮಾರು 30 ರೋಲ್ಸ್ ರಾಯ್ಸ್ ಫ್ಯಾಂಟಮ್‌ಗಳ ಬೆಲೆಗೆ ಸಮವಾಗಿದೆ. ಮಲಬಾರ್ ಹಿಲ್‌ನಲ್ಲಿರುವ ಈ ಐಷಾರಾಮಿ ಫ್ಲಾಟ್ ಲೋಧಾ ಮಲಬಾರ್ ಸೂಪರ್ ಲಕ್ಷುರಿ ರೆಸಿಡೆನ್ಷಿಯಲ್ ಟವರ್‌ನಲ್ಲಿದೆ. 26, 27 ಹಾಗೂ 28ನೇ ಮಹಡಿಗಳನ್ನ ಆಕ್ರಮಿಸಿಕೊಂಡು, ಅದ್ಭುತ ಸೌಲಭ್ಯಗಳನ್ನ ಒದಗಿಸುತ್ತದೆ.
ಲೋಧಾ ಮಲಬಾರ್ ಸೂಪರ್ ಲಕ್ಷುರಿ ರೆಸಿಡೆನ್ಷಿಯಲ್: ಇದು 1.08 ಎಕರೆಗಳಲ್ಲಿ 27,160 ಚದರ ಅಡಿ ವಿಸ್ತೀರ್ಣದಲ್ಲಿದೆ. ಪ್ರಸಿದ್ಧ ವಾಸ್ತುಶಿಲ್ಪಿ ಹಫೀಜ್ ಕಾಂಟ್ರಾಕ್ಟರ್ ಹೊರಗೆ ವಿನ್ಯಾಸ ಮಾಡಿದ್ದಾರೆ. ಸ್ಟುಡಿಯೋ HBA ಈ ಫ್ಲ್ಯಾಟ್‌ನ ಒಳಗಿನ ವಿನ್ಯಾಸವನ್ನು ಮಾಡಿದೆ. ಇಲ್ಲಿಂದ ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ನೋಡಬಹುದಾಗಿದೆ.
ಈ ಅಪಾರ್ಟ್‌ಮೆಂಟ್ ಅನ್ನು ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಥವಾ ರತನ್ ಟಾಟಾ ಖರೀದಿಸಿಲ್ಲ. ಜೆ.ಪಿ. ತಪಾರಿಯಾ ಎಂಬ ಉದ್ಯಮಿ ಖರೀದಿಸಿದ್ದಾರೆ. ಫೆಮ್‌ಕೇರ್ ಸಂಸ್ಥಾಪಕ, ಆರೋಗ್ಯ ಕ್ಷೇತ್ರದಲ್ಲಿ, ವಿಶೇಷವಾಗಿ ಕಾಪರ್-ಟಿ ಉತ್ಪಾದನೆಯಲ್ಲಿ ಪ್ರಸಿದ್ಧರು.
ತಪಾರಿಯಾ ಐಷಾರಾಮಿ ರಿಯಲ್ ಎಸ್ಟೇಟ್‌ಗೆ ಹೊಸಬರಲ್ಲ. 2017ರಲ್ಲಿ, ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 60 ಕೋಟಿಗೆ 11,000 ಚದರ ಅಡಿ ಡ್ಯೂಪ್ಲೆಕ್ಸ್ ಖರೀದಿಸಿದ್ದರು. ಲೋಧಾ ಮಲಬಾರ್ ಟ್ರಿಪ್ಲೆಕ್ಸ್ ಐಷಾರಾಮಿ ಮಾತ್ರವಲ್ಲ, ವಿಶ್ವದ ಅತಿ ಬೆಲೆಬಾಳುವ ರಿಯಲ್ ಎಸ್ಟೇಟ್‌ನಲ್ಲಿ ಮುಂಬೈನ ಸ್ಥಾನವನ್ನೂ ಸೂಚಿಸುತ್ತದೆ.