ಮದ್ಯ ಸೇವನೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ 3ನೇ ಸ್ಥಾನ, ವಾರ್ಷಿಕ ಎಷ್ಟು ಲೀಟರ್ ಕುಡಿಯುತ್ತಾರೆ?
ಭಾರತ ವಿಶ್ವದಲ್ಲೇ ಅತೀ ಹೆಚ್ಚು ಮದ್ಯ ಸೇವನೆ ಮಾಡುವ 3ನೇ ದೇಶ. ಹಾಗಾದರೆ ವರ್ಷಕ್ಕೆ ಎಷ್ಟು ಲೀಟರ್ ಮದ್ಯ ಸೇವನೆ ಮಾಡುತ್ತಾರೆ. ಇದರಲ್ಲಿ ವೀಕೆಂಡ್, ಆಗೊಮ್ಮೆ-ಈಗೊಮ್ಮೆ ಸೇವಿಸುವವರ ಪಾಲೆಷ್ಟು?

ಭಾರತದಲ್ಲಿ ಮದ್ಯ ಸೇವನೆ ಇದೀಗ ಗೌಪ್ಯವಾಗಿ ನಡೆಯುತ್ತಿಲ್ಲ. ಹಲವರು ಮದ್ಯ ಸೇವಿಸುತ್ತಾರೆ. ಬಾರ್, ಪಬ್ ಕಲ್ಚರ್ ಹೆಚ್ಚಾಗುತ್ತಿದೆ. ಇನ್ನು ಆಯಾ ರಾಜ್ಯ ಸರ್ಕಾರಗಳು ಇದರ ಮೇಲೆ ಆಡಳಿತ ನಡೆಸುತ್ತಿದೆ. ಅತೀ ಹೆಚ್ಚು ಆದಾಯದ ಇಲಾಖೆಗಳ ಪೈಕಿ ಅಬಕಾರಿ ಇಲಾಖೆ ಕೂಡ ಒಂದಾಗಿದೆ. ಕೆಲ ವಿಶೇಷ ದಿನ, ರಜಾ ದಿನ, ವೀಕೆಂಡ್, ಹೊಸ ವರ್ಷ ಹೀಗೆ ಕೆಲ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮರಾಟವಾಗುತ್ತದೆ. ಈ ಮೂಲಕ ಅತೀ ಹೆಚ್ಚು ಮದ್ಯ ಸೇವನೆ ಮಾಡುವ ರಾಷ್ಟ್ರ ಪೈಕಿ ಭಾರತ 3ನೇ ಸ್ಥಾನದಲ್ಲಿದೆ
ಭಾರತದಲ್ಲಿ ಪ್ರತಿ ವರ್ಷ ಸರಾಸರಿ ಮದ್ಯ ಸೇವನೆ ಒಟ್ಟು 970 ಕೋಟಿ ಲೀಟರ್. ಇದು 2021ರ ಅಂಕಿ ಅಂಶ. ಇದೀಗ ಮೂಲಗಳ ಪ್ರಕಾರ 1500 ರಿಂದ 2000 ಕೋಟಿ ಲೀಟರ್ ಮದ್ಯ ಪ್ರತಿ ವರ್ಷ ಸೇವನೆ ಮಾಡಲಾಗುತ್ತಿದೆ ಎಂದು ಹೇಳುತ್ತಿದೆ. ಈ ಮೂಲಕ ಭಾರತ ವರ್ಷದಿಂದ ವರ್ಷಕ್ಕೆ ಮದ್ಯ ಸೇವನೆಯಲ್ಲಿ ಗಣನೀಯ ಏರಿಕೆಕಾಣುತ್ತಿದ ಅನ್ನೋದು ಸ್ಪಷ್ಟ.
2021ರಲ್ಲಿ ಭಾರತದಲ್ಲಿ ಮದ್ಯ ವಹಿವಾಟು 4.5 ಲಕ್ಷ ಕೋಟಿ ರೂಪಾಯಿ. ಇದೀಗ ಮದ್ಯದ ಬೆಲೆ ದುಬಾರಿಯಾಗಿದೆ. ಇನ್ನು ಸೇವನೆ, ಮಾರಾಟ ಕೂಡ ಹೆಚ್ಚಾಗಿದೆ. ಹೀಗಾಗಿ ಸದ್ಯ ಅಂದಾಜಿನ ಪ್ರಕಾರ 7 ರಿಂದ 8 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಬಿಹಾರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ ಒಟ್ಟಾರೆ ನೋಡಿದರೆ ಭಾರತ ಅತೀ ಹೆಚ್ಚು ಮದ್ಯ ಸೇವನೆ ದೇಶಗಳಲ್ಲಿ ಕಾಣಿಸಿಕೊಂಡಿದೆ.
ಭಾರತದಲ್ಲಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಹಲವು ಬ್ರ್ಯಾಂಡ್‌ಗಳು ಲಭ್ಯವಿದೆ. 2021ರಲ್ಲಿ ಭಾರತ 2,386.91 ಕೋಟಿ ರೂಪಾಯಿ ಮೊತ್ತದ ಭಾರತದ ಮದ್ಯ ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಇದೀಗ ಈ ಮೊತ್ತ 5,000 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.
ಭಾರತದ ಮದ್ಯ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ಲಕ್ಷ ಲಕ್ಷ ರೂೂಪಾಯಿ ವರೆಗಿನ ಮದ್ಯ ಲಭ್ಯವಿದೆ. ಪ್ರತಿ ದಿನ ಮದ್ಯ ಮಾರಾಟ ನಡೆಯುತ್ತೆದ. ಕೆಲ ವಿಶೇಷ ದಿನಗಳು, ಪವಿತ್ರ ದಿನಗಳು, ಚುನಾವಣೆ ಫಲಿತಾಂಶ, ನಿಷೇಧಾಜ್ಞೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ.