- Home
- Business
- ಮದ್ಯ ಪ್ರಿಯರಿಗೆ ಗುಡ್ ನ್ಯೂಸ್, ಫ್ರೀ ಟ್ರೇಡ್ ಒಪ್ಪಂದಿಂದ ವಿದೇಶಿ ಸ್ಕಾಚ್ ವಿಸ್ಕಿ ಅತೀ ಕಡಿಮೆ ಬೆಲೆಗೆ ಲಭ್ಯ
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್, ಫ್ರೀ ಟ್ರೇಡ್ ಒಪ್ಪಂದಿಂದ ವಿದೇಶಿ ಸ್ಕಾಚ್ ವಿಸ್ಕಿ ಅತೀ ಕಡಿಮೆ ಬೆಲೆಗೆ ಲಭ್ಯ
ಸ್ಕಾಚ್ ವಿಸ್ಕಿ ಪ್ರಿಯರಿಗೆ ಇದೀಗ ಗುಡ್ ನ್ಯೂಸ್. ಭಾರತ ಹಾಗೂ ಯುಕೆ ಇದೀಗ ಫ್ರೀ ಟ್ರೇಡ್ ಒಪ್ಪಂದ ಮಾಡಲಾಗಿದೆ. ಇದರ ಪರಿಣಾಮ ಯುಕೆ ಸ್ಕಾಚ್ ವಿಸ್ಕಿ, ಜಿನ್ ಅತೀ ಕಡಿಮೆ ಬೆಲೆಗೆ ಭಾರತದಲ್ಲಿ ಲಭ್ಯವಾಗುತ್ತಿದೆ.

ಭಾರತ ಹಾಗೂ ಬ್ರಿಟನ್ ನಡುವೆ ಫ್ರೀ ಟ್ರೇಡ್ ಅಗ್ರೀಮೆಂಟ್ ಮಾಡಲಾಗಿದೆ. ಇದು ವ್ಯಾಪಾರ ವಹಿವಾಟು ನಿಟ್ಟಿನಲ್ಲಿ ಅತೀ ದೊಡ್ಡ ಒಪ್ಪಂದವಾಗಿದೆ. ಈ ಮೂಲಕ ಭಾರತ ಸರ್ಕಾರ, ಯುಕೆ ವ್ಯಾಪಾರ ವಹಿವಾಟಿನಲ್ಲಿ ತೆರಿಗೆ ಕಡಿತಗೊಳಿಸಲು ನಿರ್ಧರಿಸಿದೆ. ಇದರಿಂದ ಶೇಕಡಾ 100, 150 ರಷ್ಟಿದ್ದ ತೆರಿಗೆಯನ್ನು ಈ ಒಪ್ಪಂದಿಂದ ಶೇಕಜಾ 40 ರಷ್ಟಕ್ಕೆ ಇಳಿಸಲಾಗಿದೆ. ಇದರಿಂದ ಪ್ರಮುಖವಾಗಿ ಬ್ರಿಟನ್ ಮದ್ಯಗಳು ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಅಂದರೆ ಭಾರತೀಯ ಮದ್ಯಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ಸದ್ಯ ಯುಕೆ ಸ್ಕಾಚ್ ವಿಸ್ಕಿ ಭಾರತಕ್ಕೆ ಆಮದು ಮಾಡುವಾಗ ಬರೋಬ್ಬರಿ ಶೇಕಡಾ 150 ರಷ್ಟು ತೆರಿಗೆ ವಿಧಿಸಾಲಗುತ್ತದೆ. ಆದರೆ ಭಾರತ-ಯುಕೆ FTA ಒಪ್ಪಂದಿಂದ ಈ ತೆರಿಗೆ ಶೇಕಡಾ 40 ರಷ್ಟು ಇಳಿಕೆ ಮಾಡಲಾಗಿದೆ. ಇದರಿಂದ ದುಬಾರಿ ಬೆಲೆ ಕೊಟ್ಟು ವಿದೇಶಿ ಮದ್ಯ ಖರೀದಿಸುವವರು ಇನ್ನು ಮುಂದೆ ವಿದೇಶಿದ ಸ್ಕಾಚ್ ವಿಸ್ಕಿ ಭಾರತೀಯ ಮದ್ಯಗಳಂತೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ಭಾರತದಲ್ಲಿ ಬ್ರಿಟನ್ ಸ್ಕಾಚ್ ವಿಸ್ಕಿ ಸರಾಸರಿ ಬೆಲೆ 5,000 ರೂಪಾಯಿ. ಆದರೆ ಫ್ರೀ ಟ್ರೇಡ್ ಒಪ್ಪಂದದಿಂದ ಈ ಬೆಲೆ 3,500 ರೂಪಾಯಿಗೆ ಇಳಿಕೆಯಾಗಲಿದೆ. ಇನ್ನು ಆರಂಭಿಕ ಹಂತದಲ್ಲಿ ಯುಕೆ ಸ್ಕಾಚ್ ವಿಸ್ಕಿ ಹಾಗೂ ಇತರ ಮದ್ಯಗಳು ಮಾರ್ಜಿನ್ ಕಡಿತಗೊಳಿಸಿ ಮಾರುಕಟ್ಟೆ ಹಿಡಿಯಲು ಪ್ರಯತ್ನಿಸುತ್ತವೆ. ಹೀಗಾಗಿ 3,500 ರೂಪಾಯಿ ಬೆಲೆ ಮತ್ತಷ್ಟು ಇಳಿಕೆಯಾಗಿ ಮದ್ಯ ಪ್ರಿಯರ ಕೈ ಸೇರಲಿದೆ.
ಭಾರತಕ್ಕೆ ಯುಕೆ ಸ್ಕಾಚ್ ವಿಸ್ಕಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ದುಬಾರಿ ಬೆಲೆಯಿಂದ ಈ ಪ್ರಮಾಣ ನಿಧಾನವಾಗಿತ್ತು. ಇದೀಗ ಹೊಸ ಟ್ರೇಡ್ ಒಪ್ಪಂದದಿಂದ ಮುಂದಿನ 5 ವರ್ಷದಲ್ಲಿ ಬರೋಬ್ಬರಿ 1 ಬಿಲಿಯನ್ ಸ್ಕಾಚ್ ವಿಸ್ಕಿ ಭಾರತಕ್ಕೆ ರಫ್ತು ಮಾಡಲು ಮುಂದಾಗಿದೆ. ಇಷ್ಟೇ ಅಲ್ಲ ಇದು ಉದ್ಯೋಗ ಅವಕಾಶವನ್ನು ಸೃಷ್ಟಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಕೆ ಪ್ರಧಾನಿ ಕೈರ್ ಸ್ಟಾರ್ಮರ್ ಇಬ್ಬರು ಫ್ರೀ ಟ್ರೇಡ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಭಯ ದೇಶಗಳ ನಡುವಿನ ಟ್ರೇಡ್ ಒಪ್ಪಂದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದೇ ವೇಳೆ ಹಲವು ಉತ್ಪನ್ನಗಳ ವ್ಯಾಪಾರ ವಿನಿಮಯ ಇದೀಗ ಸುಲಭವಾಗುತ್ತಿದೆ.
ಯುಕೆ ಜೊತೆಗಿನ ಫ್ರೀ ಟ್ರೇಡ್ ಒಪ್ಪಂದ ಭಾರತೀಯ ಮದ್ಯ ತಯಾರಿಕಾ ಕಂಪನಿಗಳು ಹಾಗೂ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಭಾರತದ ಮದ್ಯ ಬೆಲೆಯಲ್ಲಿ ವಿದೇಶಿ ಮದ್ಯ ಲಭ್ಯವಾಗುವ ಕಾರಣ ಹೆಚ್ಚಿನ ಜನರು ವಿದೇಶಿ ಮದ್ಯ ಖರೀದಿಸುತ್ತಾರೆ. ಇದರಿಂದ ಭಾರತೀಯ ಮದ್ಯದ ಬೇಡಿಕೆ ಕಡಿಮೆಯಾಗಲಿದೆ. ಜೊತೆಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.