ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಉದ್ಯೋಗಿಗಳ ಸರಾಸರಿ ಸಂಬಳ ಇಷ್ಟೊಂದಾ?
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಜಾಗತಿಕವಾಗಿ ಎಷ್ಟು ಸಂಪಾದಿಸುತ್ತಿದ್ದಾರೆ ಎಂಬುದು ಇಲ್ಲಿದೆ.
ಮೆಟಾ ಇಂದು ಜಾಗತಿಕವಾಗಿ ಅತಿದೊಡ್ಡ ಟೆಕ್ ಸಂಸ್ಥೆಗಳಲ್ಲಿ ಒಂದಾಗಿದೆ. ಮೆಟಾ ದೈತ್ಯದ ಮಕ್ಕಳು ನೀವು ಪ್ರತಿದಿನ ಸಾಕಷ್ಟು ಸಮಯ ವ್ಯಯಿಸುವ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ.
ಈ ಜಾಲತಾಣಗಳು ಮೊದಲು ಕೇವಲ ಸಮಯ ಹಾಳು ಮಾಡುತ್ತಿದ್ದವೆಂಬ ದೂರು ಹೊತ್ತಿದ್ದವು. ಈಗ ಇದರಲ್ಲಿ ಬೆಂಬಲಿಗರನ್ನು ಗಳಿಸಿ ರೀಲ್ಸ್ ಮಾಡಿ, ಜಾಹಿರಾತು ನೀಡಿ, ಇನ್ಫ್ಲುಯೆನ್ಸರ್ ಆಗಿ, ಸ್ವಂತ ಪೇಜ್ ಮಾಡಿಕೊಂಡು ಮುಂತಾದ ರೀತಿಯಲ್ಲಿ ಹಲವರಿಗೆ ಆದಾಯ ತರುತ್ತಿವೆ.
ಈ ಆ್ಯಪ್‌ಗಳನ್ನು ಬಳಸಿ ಆದಾಯ ಗಳಿಸುವುದೇ ಬೇರೆ, ಈ ಆ್ಯಪ್‌ಗಳಲ್ಲೇ ಉದ್ಯೋಗಿಗಳಾಗಿ ಸಂಬಳ ಪಡೆಯುವುದು ಬೇರೆ. ಈ Facebook, Instagram ಮತ್ತು WhatsApp ಉದ್ಯೋಗಿಗಳ ಸರಾಸರಿ ವೇತನ ಎಷ್ಟು ಗೊತ್ತಾ?
2023ರಲ್ಲಿ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ $ 24.4 ಮಿಲಿಯನ್ ಮೊತ್ತವನ್ನು ಪರಿಹಾರವಾಗಿ ಪಡೆದರು. ಮೆಟಾ ವಿಶ್ವಾದ್ಯಂತ ಸುಮಾರು 67000 ಜನರನ್ನು ನೇಮಿಸಿಕೊಂಡಿದೆ ಎಂದು ವರದಿಯು ಬಹಿರಂಗಪಡಿಸುತ್ತದೆ.
ಮಾಧ್ಯಮ ವರದಿಯ ಪ್ರಕಾರ, ಮೆಟಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸರಾಸರಿ ವೇತನವು ಸುಮಾರು $379,000 ಆಗಿದೆ. ಅಂದರೆ ಅಂದಾಜು ರೂ. 3,16,09,718.05.
ಸರಾಸರಿ ಆದಾಯದ ಆಧಾರದ ಮೇಲೆ, 50% Meta ಉದ್ಯೋಗಿಗಳು 2018ರಲ್ಲಿ $379,000 ಕ್ಕಿಂತ ಹೆಚ್ಚು ಗಳಿಸಿದ್ದಾರೆ. ಆದರೆ ಇತರ ಶೇ.50ರಷ್ಟು ಜನರ ಅದಾಯ ಇದಕ್ಕಿಂತ ಕಡಿಮೆ ಇದೆ.
ಇಲ್ಲಿ ಅತಿ ಕಡಿಮೆ ವಾರ್ಷಿಕ ಸಂಬಳ ಪಡೆಯುವುದು ರಿಸೆಪ್ಶನಿಸ್ಟ್. ಅವರ ವಾರ್ಷಿಕ ಆದಾಯ $40,000. ಅಂದರೆ ಸುಮಾರು 33,35,944 ರುಪಾಯಿಗಳು.
office work
office workಇಲಾಖೆಯ ಸರಾಸರಿ ಮೆಟಾ ವೇತನಗಳು ಇಂತಿವೆ: ಬಿಸ್ನೆಸ್ ಡೆವಲಪ್ಮೆಂಟ್ ವಿಭಾಗದ ಉದ್ಯೋಗಿಗಳ ಸಂಬಳ $112,477(94 ಲಕ್ಷ ರೂ.) , ಪ್ರಾಡಕ್ಟ್‌ನಲ್ಲಿ ಕೆಲಸ ಮಾಡುವವರ ಸಂಬಳ $212,017(ಒಂದುಮುಕ್ಕಾಲು ಕೋಟಿ), ಕಾನೂನು $204,180, ಮತ್ತು ಗ್ರಾಹಕ ಬೆಂಬಲ ಉದ್ಯೋಗಿಗಳ ವೇತನ $108,745 .