MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಚಿನ್ನ ಕೊಳ್ಳಾ.., ಮನೆ ಮಾರ..! ಅಜ್ಜನ ಕಾಲಕ್ಕೆ 79, ಅಪ್ಪನ ವಯಸ್ಸಿಗೆ 4,000 ಮಗಳ ಮದುವೆಗೆ 1.6 ಲಕ್ಷ!

ಚಿನ್ನ ಕೊಳ್ಳಾ.., ಮನೆ ಮಾರ..! ಅಜ್ಜನ ಕಾಲಕ್ಕೆ 79, ಅಪ್ಪನ ವಯಸ್ಸಿಗೆ 4,000 ಮಗಳ ಮದುವೆಗೆ 1.6 ಲಕ್ಷ!

How Gold Price Became 2000x Costlier in India From 1955 to 2026 ಅಜ್ಜನ ಕಾಲದಲ್ಲಿ ₹79ಕ್ಕೆ ಸಿಗ್ತಿದ್ದ ಚಿನ್ನ… ಈಗ ₹1.6 ಲಕ್ಷ! 70 ವರ್ಷಗಳಲ್ಲಿ ಗೋಲ್ಡ್ ಬೆಲೆ ಇಷ್ಟು ಏರಿದೆ ಅಂದ್ರೆ ಜನ ಶಾಕ್ ಆಗ್ತಿದ್ದಾರೆ!

2 Min read
Author : Sushma Hegde
Published : May 15 2026, 01:29 PM IST
Share this Photo Gallery
  • FB
  • TW
  • Linkdin
  • Whatsapp
14
ಏಳು ದಶಕಗಳಲ್ಲಿ ಚಿನ್ನದ ಬೆಲೆ ಕಂಡಿರುವ ಏರಿಕೆ
Image Credit : Getty

ಏಳು ದಶಕಗಳಲ್ಲಿ ಚಿನ್ನದ ಬೆಲೆ ಕಂಡಿರುವ ಏರಿಕೆ

1955ರಲ್ಲಿ ಕೇವಲ ₹79ಕ್ಕೆ ಸಿಗುತ್ತಿದ್ದ 10 ಗ್ರಾಂ ಚಿನ್ನ, ಇಂದು 2026ರಲ್ಲಿ ₹1.6 ಲಕ್ಷದ ಗಡಿ ತಲುಪಿದೆ. ಕಳೆದ ಏಳು ದಶಕಗಳಲ್ಲಿ ಚಿನ್ನದ ಬೆಲೆ ಕಂಡಿರುವ ಏರಿಕೆ ಭಾರತೀಯರನ್ನು ಅಚ್ಚರಿಗೆ ಗುರಿಮಾಡಿದೆ. ಒಮ್ಮೆ ಮದುವೆ, ಹಬ್ಬ-ಹರಿದಿನಗಳಿಗೆ ಸುಲಭವಾಗಿ ಖರೀದಿಸಲಾಗುತ್ತಿದ್ದ ಚಿನ್ನ, ಈಗ ಸಾಮಾನ್ಯ ಜನರಿಗೆ ದುಬಾರಿ ಯಾಗುತ್ತಿದೆ.

Add Asianetnews Kannada as a Preferred SourcegooglePreferred
24
 ಚಿನ್ನದ ಬೆಲೆ ನಿರಂತರವಾಗಿ ಏರಿಕೆ
Image Credit : Getty

ಚಿನ್ನದ ಬೆಲೆ ನಿರಂತರವಾಗಿ ಏರಿಕೆ

ಭಾರತದಲ್ಲಿ ಚಿನ್ನಕ್ಕೆ ಕೇವಲ ಆಭರಣದಷ್ಟೇ ಅಲ್ಲ, ಭಾವನಾತ್ಮಕ ಮತ್ತು ಆರ್ಥಿಕ ಮೌಲ್ಯವೂ ಇದೆ. ಸಂಕಷ್ಟದ ಸಮಯದಲ್ಲಿ ಸುರಕ್ಷಿತ ಹೂಡಿಕೆ ಎಂದು ಜನರು ಚಿನ್ನವನ್ನು ನಂಬುತ್ತಾರೆ. ಇದೇ ಕಾರಣಕ್ಕೆ ಜಾಗತಿಕ ಆರ್ಥಿಕ ಅಸ್ಥಿರತೆ, ಯುದ್ಧ ಭೀತಿ, ದುಬಾರಿ ದರ ಮತ್ತು ಷೇರು ಮಾರುಕಟ್ಟೆಯ ಏರಿಳಿತಗಳ ಸಮಯದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.

1955ರಲ್ಲಿ ₹79 ಇದ್ದ ಚಿನ್ನದ ಬೆಲೆ 1960ರ ದಶಕದಲ್ಲಿ ₹100 ದಾಟಿತು. ನಂತರ 1980ರ ವೇಳೆಗೆ ₹1,000 ಗಡಿ ತಲುಪಿತು. 2000 ನಂತರ ಜಾಗತಿಕ ಮಾರುಕಟ್ಟೆಯ ಪರಿಣಾಮದಿಂದ ಚಿನ್ನದ ದರ ವೇಗವಾಗಿ ಏರತೊಡಗಿತು. 2008ರ ಆರ್ಥಿಕ ಮಂದಿಯ ಬಳಿಕ ಹೂಡಿಕೆದಾರರು ಸುರಕ್ಷಿತ ಆಯ್ಕೆಯಾಗಿ ಚಿನ್ನದತ್ತ ಮುಖಮಾಡಿದರು. ಕೋವಿಡ್ ಮಹಾಮಾರಿ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ದಾಖಲಾಗಿತ್ತು.

2026ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹1.6 ಲಕ್ಷದ ಗಡಿ ತಲುಪಿರುವುದು ಹೂಡಿಕೆದಾರರ ಗಮನ ಸೆಳೆದಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆ, ಡಾಲರ್ ಮೌಲ್ಯದ ಏರಿಳಿತ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆ ಚಿನ್ನದ ದರವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

34
10 GRAMS OF GOLD
Image Credit : Getty

10 GRAMS OF GOLD

YEAR PRICE OF 10 GRAMS OF GOLD

1955 Rs 79

1960 Rs 111

1970 Rs 184

1980 Rs 1,330

1990 Rs 3,200

2000 Rs 4,400

2005 Rs 7,000

2010 Rs 18,500

2015 Rs 26,343

2020 Rs 48,651

2022 Rs 56,100

2023 Rs 61,100

2024 Rs 74,100

2025 Rs 1,13,000

2026 Rs 1,60,000+

44
ಮದುವೆ ಮತ್ತು ಹಬ್ಬದ ಖರೀದಿಗಳ ಮೇಲೂ ಪರಿಣಾಮ
Image Credit : Getty

ಮದುವೆ ಮತ್ತು ಹಬ್ಬದ ಖರೀದಿಗಳ ಮೇಲೂ ಪರಿಣಾಮ

ಚಿನ್ನದ ಬೆಲೆ ಏರಿಕೆಯಿಂದ ಮದುವೆ ಮತ್ತು ಹಬ್ಬದ ಖರೀದಿಗಳ ಮೇಲೂ ಪರಿಣಾಮ ಬಿದ್ದಿದೆ. ಹಲವರು ಕಡಿಮೆ ತೂಕದ ಆಭರಣಗಳತ್ತ ಮುಖಮಾಡುತ್ತಿದ್ದರೆ, ಕೆಲವರು ಡಿಜಿಟಲ್ ಗೋಲ್ಡ್ ಮತ್ತು ಗೋಲ್ಡ್ ETFಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲೂ ಚಿನ್ನದ ಬೆಲೆ ಸ್ಥಿರವಾಗುವ ಸಾಧ್ಯತೆ ಕಡಿಮೆ. ಜಾಗತಿಕ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಚಿನ್ನ ಮತ್ತಷ್ಟು ದುಬಾರಿಯಾಗಬಹುದು. ಆದರೂ ಭಾರತೀಯರ ದೃಷ್ಟಿಯಲ್ಲಿ ಚಿನ್ನ ಇನ್ನೂ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಹೂಡಿಕೆಯಾಗಿಯೇ ಉಳಿದಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಚಿನ್ನದ ಬೆಲೆ
ಚಿನ್ನ
ವ್ಯವಹಾರ

Latest Videos
Recommended Stories
Recommended image1
ಚಿನ್ನ ಖರೀದಿಗೆ ಕೇಂದ್ರದ ಹೊಸ ರೂಲ್ಸ್: ಎಷ್ಟು ಕೆಜಿ ಚಿನ್ನ ತಗೋಬಹುದು? ಅಕ್ರಮ ತಡೆಗೆ DGFT ಮಾಸ್ಟರ್ ಪ್ಲಾನ್!
Recommended image2
ದೇಶಾದ್ಯಂತ ಇಂಧನ ದರ ಏರಿಕೆ ಬಿಸಿ: ಬೆಂಗಳೂರಿನಲ್ಲಿ 106 ರೂ. ದಾಟಿದ ಪೆಟ್ರೋಲ್! ಬೆಲೆ ಏರಿಕೆಗೆ ಕಾರಣವೇನು?
Recommended image3
India News Live: ಸೂರ್ಯ ಈ ಅದ್ಭುತ ಫೋಟೋಗಾಗಿ 1.7 ಮಿಲಿಯನ್ ಕ್ಲಿಕ್ ಮಾಡಿದ ಅಸ್ಟ್ರೋಗ್ರಾಫರ್, ಇಲ್ಲಿದೆ ಫೋಟೋಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved