ಚಿನ್ನಕ್ಕೆ ಕಡಿಮೆಯಾದ ಡಿಮ್ಯಾಂಡ್, ದರದಲ್ಲಿ ಭಾರೀ ಬದಲಾವಣೆ!
ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕುಡಿಸಿದಿದೆ, ಹೀಗಿದ್ದರೂ ದರ ಏರಿಕೆ ಬಿಸಿ ಮಾತ್ರ ಕುಸಿದಿಲ್ಲ. ಹಳದಿ ಲೋಹದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದು ಬಂಗಾರ ಪ್ರಿಯರನ್ನು ಕಂಗಾಲಾಗಿಸಿದೆ. ಇಲ್ಲಿದೆ ನೋಡಿ ಸಪ್ಟೆಂಬರ್ 16ರ ಗೋಲ್ಡ್ ರೇಟ್
ಚಿನ್ನ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ? ಹೆಣ್ಮಕ್ಕಳು ಅದರಲ್ಲೂ ವಿಶೇಷವಾಗಿ ಭಾರತೀಯ ನಾರಿಯರಿಗೆ ಚಿನ್ನದ ಮೇಲೆ ವಿಶೇಷ ಪ್ರೀತಿ.
ಆದರೆ ಕೊರೋನಾ ಎಂಬ ಮಹಾಮಾರಿ ನೋಡ ನೋಡುತ್ತಲೇ ಎಲ್ಲವನ್ನೂ ಬದಲಾಯಿಸಿದೆ. ಜೀವನ ಶೈಲಿ ಬದಲಾಗಿದ್ದು ನಿಜ. ಆದರೆ ಇದರೊಂದಿಗೆ ಉದ್ಯಮವೂ ನೆಲ ಕಚ್ಚಿದೆ.
ಉದ್ಯಮಗಳು ನೆಲ ಕಚ್ಚಿದ ಪರಿಣಾಮವಾಗಿ ಅನೇಕ ಮಂದಿ ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿದ್ದಾರೆ.
ಇವೆಲ್ಲದರ ಪರಿಣಾಮವಾಗಿ ಚಿನ್ನದ ಬೇಡಿಕೆ ಕುಸಿದಿದ್ದರೂ ಬೆಲೆ ಮಾತ್ರ ಗಗನಕ್ಕೇರಿದೆ. ಇದ ಗ್ರಾಹಕರನ್ನು ಚಿಂತೆಗೀಡು ಮಾಡಿದೆ.
ಚಿನ್ನದ ಬೆಲೆ ಇಳಿಕೆಯಾಗಬಹುದೆಂದು ಕಾದವರಿಗೆಲ್ಲಾ ಆಘಾತವಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 100 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 49,100 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 110 ರೂಪಾಯಿ ಏರಿಕೆ ಕಂಡಿದ್ದು, 53,560 ರೂಪಾಯಿ ಆಗಿದೆ.
ಚಿನ್ನದೊಂದಿಗೆ ಏರಿಕೆಯಾಗುತ್ತಿದ್ದ ಬೆಳ್ಳಿ ದರದಲ್ಲಿ ಕೊಂಚ ಕುಸಿತವಾಗಿದೆ. ಒಂದು ಕೆ. ಜಿ ಬೆಳ್ಳಿಯ ಬೆಲೆ 500 ರೂ. ಇಳಿಕೆಯಾಗಿದೆ. ಈ ಮೂಲಕ 69,000 ರೂ ಆಗಿದೆ.
ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.