ಸತತ 5 ದಿನ ಏರಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆ, ಗ್ರಾಹಕರಿಗೆ ಖುಷಿ!
ಕೊರೋನಾತಂಕ ಜನರ ನೆಮ್ಮದಿ, ಜೀವನ ಶೈಲಿ ಹೀಗೆ ಎಲ್ಲವನ್ನೂ ಕಸಿದುಕೊಂಡಿದೆ. ಒಂದೆಡೆ ಜನರು ಹೊರಗೆ ನೆಮ್ಮದಿಯಿಂದ ಓಡಾಡಲಾಗದೆ ಕಷ್ಟ ಪಡುತ್ತಿದ್ದರೆ, ಮತ್ತೊಂದೆಡೆ ಉದ್ಯಮಗಳು ನೆಲಕಚ್ಚಿವೆ. ಹೀಗಿರುವಾಗ ಚಿನ್ನದ ದರವೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಬದಲಾವಣೆಯಾಗುತ್ತಿದೆ. ಉದ್ಯಮ ಕ್ಷೇತ್ರ ಚೇತರಿಸುತ್ತಿದೆ. ಹೀಗಿರುವಾಗ ಹಳದಿ ಲೋಹದ ಬೆಲೆಯೂ ಹಾವೇಣಿ ಆಟ ಆಡುತ್ತಿದೆ. ಇಲ್ಲಿದೆ ಅಕ್ಟೋಬರ್ 13ರ ಬಂಗಾರ ದರ.

ಹೌದು ಕೊರೋನಾ ಎಂಬ ಮಹಾಮಾರಿ ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ. ನೆಮ್ಮದಿಯಿಂದ ಹೊರಗೆ ಓಡಾಡುತ್ತಿದ್ದವರು ಇಂದು ಅಗತ್ಯವಿದ್ದರಷ್ಟೇ ಹೊರ ಹೋಗಿ, ಹೆಚ್ಚಿನ ಸಮಯ ಮನೆಯಲ್ಲೇ ಉಳಿಯುವಂತಾಗಿದೆ.

ಇನ್ನು ಈ ಕೊರೋನಾ ಕಾಲದಲ್ಲಿ ಉದ್ಯಮಗಳು ನೆಲ ಕಚ್ಚಿದ್ದು, ಅನೇಕ ಮಂದಿ ನಷ್ಟ ಅನುಭವಿಸಿದ್ದರೆ, ಇನ್ನು ಕೆಲ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ.

ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿದ್ದಾರೆ.

ಇದರ ಪರಿಣಾಮವೆಂಬಂತೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಕೊರೋನಾ ಸಂಕಷ್ಟ ಕಾಲದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

ಆದರೆ ದರ ಏರಿಕೆ ಮದುವೆ ಮೊದಲಾದ ಕಾರ್ಯಕ್ರಮ ಇಟ್ಟುಕೊಂಡವರನ್ನು ಕಂಗಾಲಾಗಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದ್ದು, ಉದ್ಯಮಗಳು ಮತ್ತೆ ಆರಂಭವಾಗಿದೆ. ಇತ್ತ ಚಿನ್ನ, ಬೆಳ್ಳಿ ದರ ಹಾವೇಣಿ ಆಟವಾಡುತ್ತಿದೆ.

ಸತತ ಐದು ದಿನಗಳಿಂದ ಏರುತ್ತಲೇ ಇದ್ದ ಚಿನ್ನ ಇಂದು ಮಂಗಳವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 150 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 48,000 ರೂಪಾಯಿ ಆಗಿದೆ.

ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 150 ರೂಪಾಯಿ ಇಳಿಕೆ ಕಂಡಿದ್ದು, 52,380 ರೂಪಾಯಿ ಆಗಿದೆ.

ಇನ್ನು ಇತ್ತ ಬೆಳ್ಳಿ ದರವೂ ಇಳಿಕೆಯಾಗಿದೆ. ಒಂದು ಕೆ. ಜಿ ಬೆಳ್ಳಿಯ ಬೆಲೆ 1,200ರೂ ಏರಿಕೆಯಾಗಿ 62,600ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.