ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ! ಇಂದು ಒಂದೇ ದಿನ ₹4300 ರುಪಾಯಿ ಇಳಿಕೆ
ಬೆಂಗಳೂರು: ಇರಾನ್-ಅಮೆರಿಕ ಯುದ್ದ ಭೀತಿಯ ನಡುವೆ ಜೂನ್ 10ರಂದು ಚಿನ್ನದ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಇದು ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ ಎನಿಸಿಕೊಂಡಿದ್ದು, ಆಭರಣ ಪ್ರಿಯರ ಪಾಲಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.

ಯುದ್ದ ಭೀತಿಯ ನಡುವೆಯೂ ಚಿನ್ನದ ಬೆಲೆಯಲ್ಲಿ ಕುಸಿತ
ಮಧ್ಯಪ್ರಾಚ್ಯದಲ್ಲಿ ಇದೀಗ ಮತ್ತೆ ಯುದ್ದ ಭೀತಿ ಎದುರಾಗಿದೆ. ಇದೆಲ್ಲದರ ನಡುವೆ ಜೂನ್ 10ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ಮೂಲಕ ಆಭರಣ ಪ್ರಿಯರು ಜ್ಯುವೆಲರಿ ಅಂಗಡಿಗೆ ದಾಪುಗಾಲಿಡಲಾರಂಭಿಸಿದ್ದಾರೆ.
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 4300 ರುಪಾಯಿ ಕುಸಿತ
ಹೌದು, ಬುಧವಾರವಾದ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 4300 ರುಪಾಯಿ ಇಳಿಕೆ ಕಂಡಿದೆ. ಇದು ಈ ತಿಂಗಳಿನಲ್ಲಿ ಭಾರೀ ಇಳಿಕೆ ಕಂಡಂತೆ ಆಗಿದೆ. ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,886 ರುಪಾಯಿಗಳಾಗಿದೆ.
ಜೂನ್ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ
ಈ ಮೊದಲು ಜೂನ್ 06ರಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 3000 ರುಪಾಯಿ ಇಳಿಕೆ ಕಂಡಿತ್ತು. ಆದರೆ ಇದೀಗ ಇಂದು 4300 ರುಪಾಯಿ ಇಳಿಕೆ ಕಂಡಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವವರ ಪಾಲಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 3950 ರುಪಾಯಿ ಕುಸಿತ
ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಮೇಲೂ ಭಾರೀ ಇಳಿಕೆಯಾಗಿದೆ. ಇಂದು ಒಂದೇ ದಿನ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 3950 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,645 ರುಪಾಯಿಗಳಾಗಿದೆ.
ಬೆಳ್ಳಿ ಬೆಲೆಯಲ್ಲಿ 10 ಸಾವಿರ ರುಪಾಯಿ ಕುಸಿತ
ಇದಷ್ಟೇ ಅಲ್ಲದೇ ಚಿನ್ನದ ಜತೆಜತೆಗೆ ಬೆಳ್ಳಿಯ ಬೆಲೆಯಲ್ಲೂ ಮಹಾ ಪತನವಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಕೆಜಿ ಬೆಳ್ಳಿ ಬೆಲೆ 2,50,000 ರುಪಾಯಿಗಳಾಗಿದೆ.
ಸಾಮಾನ್ಯ ವರ್ಗದ ಆಭರಣ ಪ್ರಿಯರಿಗೆ ಗುಡ್ ನ್ಯೂಸ್
ಒಟ್ಟಿನಲ್ಲಿ ಯುದ್ದ ಭೀತಿಯ ನಡುವೆಯೂ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿರುವುದು ಭಾರತೀಯ ಸಾಮಾನ್ಯ ವರ್ಗದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇನ್ನು ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಂಡರೂ ಅಚ್ಚರಿಯಿಲ್ಲ ಎಂದು ವರದಿಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

