ಚಿನ್ನ 2 ದಿನದಲ್ಲಿ ₹18000 ಬೆಳ್ಳಿ 60,000 ರು. ಕುಸಿತ! ದಿಢೀರ್ ಇಳಿಕೆಗೆ ಕಾರಣವೇನು?
Gold And Silver Price Down: ಸತತ ಎರಡನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಎರಡು ದಿನಗಳಲ್ಲಿ ಚಿನ್ನದ ಬೆಲೆ 18,000 ರೂ. ಹಾಗೂ ಬೆಳ್ಳಿ 60,000 ರೂ. ಇಳಿಕೆಯಾಗಿದೆ.

ಚಿನ್ನದ ಬೆಲೆ
ನವದೆಹಲಿ: ಸತತ ಏರಿಕೆ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆ ಸತತ 2ನೇ ದಿನ ಭಾರಿ ಕುಸಿತ ಕಂಡಿದೆ. ಶನಿವಾರ ಚಿನ್ನದ ಬೆಲೆ 10 ಗ್ರಾಂಗೆ 8620 ರು. ಇಳಿದರೆ, ಬೆಳ್ಳಿ ಬೆಲೆ 1 ಕೇಜಿಗೆ 45 ಸಾವಿರ ರು. ಇಳಿದಿದೆ. ಇದರೊಂದಿಗೆ 2 ದಿನದಲ್ಲಿ 18,000 ರು., ಹಾಗೂ ಬೆಳ್ಳಿ 60,000 ರು. ಇಳಿಕೆ ಆದಂತಾಗಿದೆ.
ಎಷ್ಟು ಇಳಿಕೆ?
ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನ 10 ಗ್ರಾಂಗೆ 7900 ರು. ಕುಸಿದು 1,47,200 ರು. ದಾಖಲಿಸಿದೆ. ಅದೇ ರೀತಿ 24 ಕ್ಯಾರಟ್ ಚಿನ್ನ 10 ಗ್ರಾಂಗೆ 8620 ರು. ಇಳಿದು 1,60,580 ರು. ಗೆ ಪತನವಾಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆಯು 45,000 ರು. ಭಾರಿ ಪತನದಿಂದ 3.50 ಲಕ್ಷ ರು.ಗೆ ಇಳಿದಿದೆ.
ದಿಲ್ಲಿಯಲ್ಲೂ ಇಳಿಕೆ:
ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನವು 10 ಗ್ರಾಂಗೆ 3500 ರು. ಕುಸಿದು 1,65,500 ರು.ಗೆ ಪತನವಾಗಿದೆ. ದೆಹಲಿಯಲ್ಲಿ 72,500 ರು. ಕುಸಿತದಿಂದ 3.12 ಲಕ್ಷ ರು.ಗೆ ಇಳಿಕೆಯಾಗಿದೆ. ಭಾರಿ ಪ್ರಮಾಣದಲ್ಲಿ ಲಾಭ ಹಿಂತೆಗೆತದ ಪರಿಣಾಮ ಕುಸಿತ ಆಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಉದ್ಯಮಿ ಸಿ ಜೆ ರಾಯ್ ವಿರುದ್ಧ ಐಟಿ ಅಧಿಕಾರಿಗಳು ಯಾವ ವಿಚಾರಕ್ಕೆ ಹಿಂದೆ ಬಿದ್ರು? ಅವರ ಮೇಲಿನ ಆರೋಪ ಏನು ಗೊತ್ತಾ?
ಕಾರಣ ಏನು?
ಚಿನ್ನ, ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಕಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದು, ಅಮೆರಿಕದ ಕೇಂದ್ರಿಯ ಬ್ಯಾಂಕ್‌ನ ನೂತನ ಮುಖ್ಯಸ್ಥರಾಗಿ ಹಣದುಬ್ಬರ ನಿಯಂತ್ರಣದ ಮೇಲೆ ಒಲವು ಹೊಂದಿರುವ ಕೆವಿನ್ ನೇಮಕದ ಕ್ರಮ, ಶಾರ್ಟ್‌ಸೆಲ್ಲರ್‌ಗಳಿಗೆ ಮಾರಾಟದ ಗಡುವು ಸಮೀಪಿಸಿದ್ದು ಮತ್ತು ಬೆಳ್ಳಿಯ ಮೇಲೆ ಅಧಿಪತ್ಯ ಕಡಿಮೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರುಕಟ್ಟೆಯಲ್ಲಿ ಆಡಿರುವ ಆಟ ಇದು ಎಂಬ ವಿಶ್ಲೇಷಣೆಗಳು ಇವೆ.
ಇದನ್ನೂ ಓದಿ: ಇತಿಹಾಸದಲ್ಲಿ ಎರಡನೇ ಸಲ ಇಂದು ಕೇಂದ್ರ ಸಂಡೇ ಬಜೆಟ್! ಸಾಮಾನ್ಯ ವರ್ಗಕ್ಕೆ ಸಿಗುತ್ತಾ ಸಿಹಿ ಸುದ್ದಿ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

