- Home
- Business
- ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ದಿಢೀರ್ ₹2 ಸಾವಿರ ಏರಿಕೆ! ಬೆಂಗಳೂರಲ್ಲಿಂದು ಚಿನ್ನದ ರೇಟ್ ಎಷ್ಟು?
ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ದಿಢೀರ್ ₹2 ಸಾವಿರ ಏರಿಕೆ! ಬೆಂಗಳೂರಲ್ಲಿಂದು ಚಿನ್ನದ ರೇಟ್ ಎಷ್ಟು?
ಬೆಂಗಳೂರು: ಈ ತಿಂಗಳ ಆರಂಭದಲ್ಲಿ ನಿರಂತರ ಕುಸಿತ ಕಂಡಿದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇದು 'ಚಿನ್ನ' ಎನ್ನುವ ಗ್ರಾಹಕರ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಬೆಳ್ಳಿ ದರವೆಷ್ಟು? ನೋಡೋಣ ಬನ್ನಿ.

ಚಿನ್ನ-ಬೆಳ್ಳಿ ಬೆಲೆಯಲ್ಲಿ ಸತತ ಎರಡು ದಿನಗಳಿಂದ ಏರಿಕೆ!
ಫೆಬ್ರವರಿ ತಿಂಗಳ ಆರಂಭದಿಂದ ನಿರಂತವಾಗಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕುಸಿತ ಕಾಣುತ್ತಾ ಸಾಗಿತ್ತು. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದವರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಶನಿವಾರದಿಂದ ಮತ್ತೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ನಿರಂತರ ಏರಿಕೆ ಕಂಡು ಬಂದಿದೆ.
ಶನಿವಾರದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆರಂಭ
ಕಳೆದ ಶನಿವಾರ ಅಂದರೆ ಫೆಬ್ರವರಿ 07ರಂದು 24 ಕ್ಯಾರಟ್ ಪ್ರತಿಗ್ರಾಮ್ ಚಿನ್ನದ ಬೆಲೆಯಲ್ಲಿ 289 ರುಪಾಯಿ ಹಾಗೂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿಗ್ರಾಮ್‌ಗೆ 265 ರುಪಾಯಿ ಏರಿಕೆ ಕಂಡಿತ್ತು. ಇನ್ನು ನಿನ್ನೆ ಭಾನುವಾರವಾಗಿದ್ದರಿಂದ ಅದೇ ಬೆಲೆ ಮುಂದುವರೆದಿತ್ತು.
24 ಕ್ಯಾರಟ್ 10 ಗ್ರಾಮ್ ಚಿನ್ನಕ್ಕೆ 2240 ರುಪಾಯಿ ಏರಿಕೆ
ಇದೀಗ ಸೋಮವಾರ ಮತ್ತೆ ಚಿನ್ನದ ಬೆಲೆಯಲ್ಲಿ ಕುಸಿತ ಕಾಣಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 224 ರುಪಾಯಿ ಏರಿಕೆ ಕಂಡಿದ್ದು, ಈ ಮೂಲಕ ಗ್ರಾಮ್‌ಗೆ 15,884 ರುಪಾಯಿಗಳಾಗಿವೆ. ಇನ್ನು 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಒಂದೇ ದಿನ ಬರೋಬ್ಬರೀ 2,240 ರುಪಾಯಿ ಏರಿಕೆಯಾಗಿದೆ.
ಇಂದು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್‌ಗೆ ₹2,050 ಏರಿಕೆ
ಇನ್ನು ಆಭರಣ ಚಿನ್ನವಾಗಿರುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ 205 ರುಪಾಯಿ ಏರಿಕೆ ಕಂಡಿದ್ದು, ಒಂದು ಗ್ರಾಮ್ ಚಿನ್ನಕ್ಕೆ 14,560 ರುಪಾಯಿಗಳಾಗಿವೆ. ಈ ಮೂಲಕ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ 2050 ರುಪಾಯಿ ಏರಿಕೆಯಾಗಿದೆ.
ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ
ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಕಳೆದ ಎರಡು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಫೆಬ್ರವರಿ 06ರಂದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2.75 ಸಾವಿರ ರುಪಾಯಿಗೆ ಇಳಿದಿತ್ತು. ಇದೀಗ ಮತ್ತೆ ಬೆಳ್ಳಿ ಬೆಲೆ ವೇಗವಾಗಿ ಮುನ್ನುಗ್ಗುತ್ತಿದೆ.
ಇಂದು ಬೆಳ್ಳಿ ಕೆಜಿಗೆ 15,000 ರುಪಾಯಿ ಏರಿಕೆ
ಶನಿವಾರ ಪ್ರತಿ ಕೆಜಿ ಬೆಳ್ಳಿ ದರದಲ್ಲಿ 10 ಸಾವಿರ ರುಪಾಯಿ ಏರಿಕೆ ಕಂಡು 2,85,000 ರುಪಾಯಿ ತಲುಪಿತ್ತು. ಇದೀಗ ಇಂದು ಕೂಡಾ ಬೆಳ್ಳಿಯ ದರದಲ್ಲಿ ಒಂದು ಕೆಜಿಗೆ 15,000 ರುಪಾಯಿ ಏರಿಕೆ ಕಂಡಿದ್ದು, ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 3 ಲಕ್ಷ ರುಪಾಯಿಗಳಾಗಿವೆ. ಚಿನ್ನ ಬೆಳ್ಳಿ ದರದಲ್ಲಿ ಇದೇ ರೀತಿ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

