ಕೈಗೆಟುಕುವ ದರಕ್ಕೆ ಇಳಿದ ಚಿನ್ನ: ಇತ್ತ ಬೆಳ್ಳಿ ಬೆಲೆಯಲ್ಲಿಯೂ ಗಣನೀಯ ಕುಸಿತ
Gold And Silver Price Down: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡುಬಂದಿದೆ. ಈ ಲೇಖನವು ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ನಿಖರ ದರ ಹಾಗೂ ಬೆಳ್ಳಿ ಬೆಲೆಯ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.

ಚಿನ್ನದ ಬೆಲೆಯಲ್ಲಿ ಕುಸಿತ
ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಹಾಗಾಗಿ ಇವತ್ತಿನ ದರ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆಯೂ ಗಣನೀಯವಾಗಿ ಕುಸಿತವಾಗಿದೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿ ದರದ ಮಾಹಿತಿ ಇಲ್ಲಿದೆ.
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,455 ರೂಪಾಯಿ
8 ಗ್ರಾಂ: 91,640 ರೂಪಾಯಿ
10 ಗ್ರಾಂ: 1,14,550 ರೂಪಾಯಿ
100 ಗ್ರಾಂ: 11,45,500 ರೂಪಾಯಿ
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,497 ರೂಪಾಯಿ
8 ಗ್ರಾಂ: 99,976 ರೂಪಾಯಿ
10 ಗ್ರಾಂ: 1,24,970 ರೂಪಾಯಿ
100 ಗ್ರಾಂ: 12,49,700 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,14,550 ರೂಪಾಯಿ, ಮುಂಬೈ: 1,14,555 ರೂಪಾಯಿ, ದೆಹಲಿ: 1,14,700 ರೂಪಾಯಿ, ಕೋಲ್ಕತ್ತಾ: 1,14,555 ರೂಪಾಯಿ, ಬೆಂಗಳೂರು: 1,14,550 ರೂಪಾಯಿ, ಹೈದರಾಬಾದ್: 1,14,550 ರೂಪಾಯಿ, ಪುಣೆ: 1,14,550 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಕಡಿಮೆಯಾಗಿದೆ. ಇಂದಿನ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
10 ಗ್ರಾಂ: 1,670 ರೂಪಾಯಿ (20 ರೂ. ಇಳಿಕೆ)
100 ಗ್ರಾಂ: 16,700 ರೂಪಾಯಿ (200 ರೂ. ಇಳಿಕೆ)
1000 ಗ್ರಾಂ: 1,67,000 ರೂಪಾಯಿ (2000 ರೂ. ಇಳಿಕೆ)
ಇದನ್ನೂ ಓದಿ: ನಿಮ್ಮ ಕನಸಿನ ಮನೆ ಖರೀದಿಸುವ ಮೊದಲು ಈ ವಿಷಯ ತಿಳಿದಿರಲಿ, ಇಲ್ಲದಿದ್ದರೆ ಹಣವೂ ಇಲ್ಲ, ಮನೆಯೂ ಇಲ್ಲ!
ಎಷ್ಟು ಇಳಿಕೆ?
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆ
18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆ
ಇನ್ನ 1 ಕೆಜಿ ಬೆಳ್ಳಿ ದರದಲ್ಲಿ 2,000 ರೂ. ಇಳಿಕೆಯಾಗಿದೆ.
ಇದನ್ನೂ ಓದಿ: ಬ್ಲ್ಯಾಕ್‌ಬಕ್ ಕಂಪನಿ ಬಳಿಕ ಬೆಳ್ಳಂದೂರಿಗೆ ಗುಡ್‌ಬೈ ಹೇಳಲಿರುವ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ!