ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ?
ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ? 2026ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದೆ. ಕೈಯಲ್ಲಿ ನಗದು ಹಣವಿದೆ, ಅಕೌಂಟ್‌ನಲ್ಲಿ ದುಡ್ಡಿದೆ ಎಂದು ಕೈಬೀಸಿ ಚಿನ್ನ ಖರೀದಿಸಲು ಹೋದರೆ ಸಾಧ್ಯವಿಲ್ಲ.

ನಿಮ್ಮಲ್ಲಿ ದುಡ್ಡಿದ್ದರು ದಾಖಲೆ ಇಲ್ಲದೆ ಚಿನ್ನ ಖರೀದಿ ಇಲ್ಲ
ಭಾರತದಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಬಂಗಾರ ಕೈಗೆಟುಕದ ಮಟ್ಟದಲ್ಲಿದೆ. ಪ್ರತಿ ದಿನ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಜನಸಾಮಾನ್ಯರು ಇದೀಗ ಚಿನ್ನ ಖರೀದಿಸು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಮದುವೆ ಸೇರಿದಂತೆ ಇತರ ವಿಶೇಷ ಸಂದರ್ಭದಲ್ಲಿ ಸಾಲ ಮಾಡಿಯಾದರೂ ಚಿನ್ನ ಖರೀದಿಸುವ ಅನಿವಾರ್ಯತೆ ಎದುರಾಗಲಿದೆ. ಆದರೆ ಚಿನ್ನ ಖರೀದಿಸುವಾಗ ಕೆಲ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ನಿಮ್ಮಲ್ಲಿ ದುಡ್ಡಿದ್ದರೂ ಜ್ಯುವೆಲ್ಲರಿಯಿಂದ ಚಿನ್ನ ಖರೀದಿಸಲು ಸಾಧ್ಯವಿಲ್ಲ.
ಪಾನ್ ಕಾರ್ಡ್, ಆಧಾರ್ ಕಾರ್ಡ್ ಕಡ್ಡಾಯ
ಚಿನ್ನ ಖರೀದಿಸುವಾಗ ಕೆಲ ನಿಯಮ ಪಾಲಿಸಬೇಕು. ಪ್ರಮುಖವಾಗಿ ನೀವು 2 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಚಿನ್ನ ಖರೀದಿಸುವಾಗ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಅದು ನಗದು ರೂಪದಲ್ಲಿ ಚಿನ್ನ ಖರೀದಿಸಿದರೂ ಸರಿ, ಅಥವಾ ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಚಿನ್ನ ಖರೀದಿಸಿದರೂ ಪಾನ್ ಹಾಗೂ ಆಧಾರ್ ಕಡ್ಡಾಯವಾಗಿದೆ.
ನಗದು 2 ಲಕ್ಷ ರೂಪಾಯಿಗೆ ಸೀಮಿತ
ನಗದು ಹಣದಲ್ಲಿ ಚಿನ್ನ ಖರೀದಿಸಲು ಕೆಲ ಮಿತಿಗಳಿವೆ. ಒಂದು ದಿನದಲ್ಲಿ ನಿಮ್ಮ ಚಿನ್ನ ಖರೀದಿ ಮೊತ್ತ 2 ಲಕ್ಷ ರೂಪಾಯಿ ನಗದು ಹಣ ದಾಟುವಂತಿಲ್ಲ. ಡಿಜಿಟಲ್ ಪೇಮೆಂಟ್ ಮೂಲಕ 2 ಲಕ್ಷ ರೂಪಾಯಿ ಮೇಲ್ಪಟ್ಟು ಖರೀದಿ ಸಾಧ್ಯವಿದೆ. ಆಧರೆ ನಗದು ರೂಪದಲ್ಲಿ ಸಾಧ್ಯವಿಲ್ಲ. ಈ 2 ಲಕ್ಷ ರೂಪಾಯಿ ಚಿನ್ನ ಖರೀದಿಸುವಾಗಲೂ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಾಗಿ ನೀಡಲೇಬೇಕು.
ನಗದು 2 ಲಕ್ಷ ರೂಪಾಯಿಗೆ ಸೀಮಿತ
ಶೇ.3ರಷ್ಟು ಚಿನ್ನ ಹಾಗೂ ಶೇ.5ರಷ್ಟು ಮೇಕಿಂಗ್ ಮೇಲೆ ಜಿಎಸ್‌ಟಿ
ಚಿನ್ನ ಖರೀದಿಸುವಾಗ ಜಿಎಸ್‌ಟಿ ಸೇರಿಕೊಳ್ಳುತ್ತದೆ. ಚಿನ್ನದ ಒಟ್ಟು ಮೌಲ್ಯದ ಮೇಲೆ ಶೇಕಡಾ 3 ರಷ್ಟು ಜಿಎಸ್‌ಟಿ ಪಾವತಿಸಬೇಕು. ಇಷ್ಟೇ ಅಲ್ಲ ಚಿನ್ನದ ಮೇಕಿಂಗ್ ಚಾರ್ಜಸ್ ಮೇಲೆ ಶೇಕಡಾ 5ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕು. ಅಂದರೆ ಒಟ್ಟು ಶೇಕಡಾ 8ರಷ್ಟು ಜಿಎಸ್‌ಟಿ ಪಾವತಿಸಬೇಕು. ಉದಾಹರಣೆ 1 ಲಕ್ಷ ರೂಪಾಯಿ ಚಿನ್ನದ ಬೆಲೆ, ಅದರ ಮೇಕಿಂಗ್ ಚಾರ್ಜಸ್ 10,000 ರೂಪಾಯಿ ಆಗಿದ್ದರೆ, ಚಿನ್ನದ ಮೇಲೆ 3,000 ರೂಪಾಯಿ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜಸ್ ಮೇಲೆ 500 ರೂಪಾಯಿ ಒಟ್ಟು 3,500 ರೂಪಾಯಿ ಜಿಎಸ್‌ಟಿ ರೂಪದಲ್ಲಿ ನೀಡಬೇಕು.
ಶೇ.3ರಷ್ಟು ಚಿನ್ನ ಹಾಗೂ ಶೇ.5ರಷ್ಟು ಮೇಕಿಂಗ್ ಮೇಲೆ ಜಿಎಸ್‌ಟಿ
ಚಿನ್ನ ಖರೀದಿಸುವಾಗ ಎಚ್ಚರ
ಚಿನ್ನ ಖರೀದಿಸುವಾಗ ಕೆಲ ಎಚ್ಚರಿಕೆ ವಹಿಸಬೇಕು. ಚಿನ್ನ ಖರೀದಿಯ ಬಿಲ್ ಸರಿಯಾಗಿ ಇಟ್ಟುಕೊಳ್ಳಬೇಕು. ಡಿಜಿಟಲ್ ಅಥವಾ ಪ್ರಿಂಟೆಡ್ ಇನ್‌ವಾಯ್ಸ್ ಅತೀ ಅಗತ್ಯ. ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ಇರುವ ಚಿನ್ನ ಪರಿಶೀಲಿಸಿ ಖರೀದಿಸಿ. ಇದೇ ವೇಳೆ ಕೆಲ ಆಫರ್, ಹಬ್ಬದ ಆಫರ್ ಇದ್ದಾಗ ಕೊಂಚ ಕಡಿಮೆ ಬೆಲೆಯಲ್ಲಿ ಚಿನ್ನ ಲಭ್ಯವಾಗಲಿದೆ.