MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಉದ್ಯಮಿಯಾಗಲು ಕ್ರಿಕೆಟ್‌ಗೆ ವಿದಾಯ ಹೇಳಿ, 100 ಕೋಟಿ ರೂ ಕಂಪೆನಿ ಕಟ್ಟಿದ ಆಟಗಾರ!

ಉದ್ಯಮಿಯಾಗಲು ಕ್ರಿಕೆಟ್‌ಗೆ ವಿದಾಯ ಹೇಳಿ, 100 ಕೋಟಿ ರೂ ಕಂಪೆನಿ ಕಟ್ಟಿದ ಆಟಗಾರ!

ಆತ ಪ್ರಸಿದ್ಧ ಕ್ರಿಕೆಟಿಗನಾಗಲು ಬಯಸಿ. ತನ್ನ ರಾಜ್ಯಕ್ಕೆ ಆಡಿದ ಐಪಿಎಲ್‌ ತಂಡಕ್ಕೂ ಆಯ್ಕೆಯಾದ. ಆದರೆ ಅದ್ಯಾಕೋ ಆತನಿಗೆ ಕ್ರಿಕೆಟ್‌ ಬಿಟ್ಟು ಉದ್ಯಮದ ಕಡೆ ಒಲವು ಜಾಸ್ತಿಯಾಗಿ ಈಗ 100 ಕೋಟಿ ಮೌಲ್ಯದ  ಕಂಪೆನಿಯ ಒಡೆಯನಾಗಿದ್ದಾನೆ.

2 Min read
Author : Gowthami K
Published : Nov 25 2023, 04:36 PM IST
Share this Photo Gallery
  • FB
  • TW
  • Linkdin
  • Whatsapp
110

ತಮಿಳುನಾಡಿನ ಮಾಜಿ ಕ್ರಿಕೆಟಿಗ ಸರ್ವೇಶ್ ಶಶಿ ಅವರು ಸೆಲೆಬ್ರಿಟಿ ಬೆಂಬಲಿತ ಯೋಗಪಟು ಮತ್ತು ಉದ್ಯಮಿಯಾಗಲು ಐಪಿಎಲ್ ಕನಸನ್ನು ತೊರೆದರು.100 ಕೋಟಿ ಮೌಲ್ಯದ ಕಂಪನಿಯನ್ನು ನಿರ್ಮಿಸಿದರು ಮತ್ತು ಆಲಿಯಾ ಭಟ್ ಮತ್ತು ಯಾಮಿ ಗೌತಮ್ ಅವರಂತಹ ವಿದ್ಯಾರ್ಥಿಗಳನ್ನು ಗಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಅವರ ಈ ಕೆಲಸಕ್ಕೆ ಬಾಲಿವುಡ್ ತಾರೆಯರಾದ ಮಲೈಕಾ ಅರೋರಾ, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ಕಪೂರ್ ಬೆಂಬಲ ನೀಡಿದ್ದಾರೆ. ಐಶ್ವರ್ಯಾ,  ರಜನಿಕಾಂತ್ ಮತ್ತು ಜಾಗತಿಕ ತಾರೆ ಜೆನ್ನಿಫರ್ ಲೋಫೆಜ್ ಸೇರಿದಂತೆ ಹಲವರು ಶಶಿ ಅವರ ಉದ್ಯಮದಲ್ಲಿ ಹೂಡಿಕೆ ಮಾಡಿರುವ ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ.
 

310

ಕಾಲೇಜು ಅರ್ಧದಲ್ಲಿಯೇ ಬಿಟ್ಟಿರುವ ಶಶಿ  ವೆಲ್‌ನೆಸ್‌ ಸಂಸ್ಥೆಗಳಾದ ಸರ್ವ ಮತ್ತು ದಿವ ಯೋಗದ ಸಂಸ್ಥಾಪಕ ಮತ್ತು CEO ಆಗಿದ್ದಾರೆ. Tracxn ನ ಮಾಹಿತಿಯ ಪ್ರಕಾರ ಸರ್ವಾ ಅವರ ಇತ್ತೀಚಿನ ಮೌಲ್ಯಮಾಪನವು $14.1 ಮಿಲಿಯನ್ ಡಾಲರ್‌ (ಸುಮಾರು 117 ಕೋಟಿ ರೂ.) ಆಗಿದೆ.

410
Sarvesh Shashi

Sarvesh Shashi

ಸರ್ವೇಶ್ ಶಶಿಯ ಯೋಗದ ಆಸಕ್ತಿಯು ಆಕಸ್ಮಿಕವಾಗಿ ಪ್ರಾರಂಭವಾಯಿತು, ಅವರ ತಂದೆ ಫೌಂಡೇಶನ್ ತರಗತಿಯನ್ನು ನಡೆಸುತ್ತಿದ್ದರು. ಆದರೆ  ಅದನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ, ಅವರು ಮಗನಿಗೆ  ಪಾಠಗಳನ್ನು ತೆಗೆದುಕೊಳ್ಳಲು ಹೇಳಿದರು. 

510

ಸರ್ವೇಶ್ ಅವರ ತಂದೆ ಶಶಿಕುಮಾರ್ ಚೆನ್ನೈ ಮೂಲದ ಉದ್ಯಮಿ ಮತ್ತು ಶಬರಿ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಪಾಠದಿಂದ ಹೆಚ್ಚಾಗಿ ಅವರ ಯೋಗ ಗುರುಗಳು ಜನರನ್ನು ಉತ್ತಮ ಆರೋಗ್ಯ ಮತ್ತು ಕ್ಷೇಮದತ್ತ ಕೊಂಡೊಯ್ಯಲು ಪ್ರೇರೇಪಿಸಿದರು.

610

ಆಧುನಿಕ ಜೀವನಶೈಲಿಯ ಒತ್ತಡವನ್ನು ನಿಭಾಯಿಸುವ ಸಾಧನವಾಗಿ ಯೋಗ-ಆಧಾರಿತ ಸ್ವಾಸ್ಥ್ಯವನ್ನು ಒದಗಿಸುವ ನಿಟ್ಟಿನಲ್ಲಿ ಚೆನ್ನೈನಲ್ಲಿನ ಮೂರು ಸ್ಟುಡಿಯೋಗಳೊಂದಿಗೆ ಇಬ್ಬರೂ ಯೋಗ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ಕಂಪನಿಯು ವರ್ಚುವಲ್ ಪಾಠಗಳಿಗಾಗಿ ಅಪ್ಲಿಕೇಶನ್ ಅನ್ನು ಸಹ ಹೊಂದಿದೆ ಮತ್ತು ಒಟ್ಟು 12.1 ಮಿಲಿಯನ್ ಡಾಲರ್‌ ಹಣವನ್ನು ಸಂಗ್ರಹಿಸಿದೆ.

710

ಸರ್ವೇಶ್ ಒಬ್ಬ ಅಭ್ಯಾಸ ಮಾಡುವ ನುರಿತ ಯೋಗ ಪಟುವಾಗಿದ್ದು, ಅಹಿಂಸೆ, ಮಾದಕತೆ ಇಲ್ಲದ ಬದುಕು, ಬ್ರಹ್ಮಚರ್ಯ, ಸತ್ಯನಿಷ್ಠೆ ಮತ್ತು ಮಾನಸಿಕ ಅಥವಾ ದೈಹಿಕ ಉದಾಸೀನತೆ ಇಲ್ಲದಿರುವುದು ಈ ಐದು ಪ್ರತಿಜ್ಞೆಗಳಿಗೆ ಬದ್ಧರಾಗಿದ್ದಾರೆ.

 

810

ತಮಿಳುನಾಡು ಪರ ಕ್ರಿಕೆಟ್ ಆಡಿದ ನಂತರ, ಸರ್ವೇಶ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಲು  ಕನಸು ಹೊಂದಿದ್ದರು. ಅವರನ್ನು 2 ಐಪಿಎಲ್ ತಂಡಗಳು ಆಹ್ವಾನಿಸಿತ್ತು ಎಂದು ವರದಿಯಾಗಿದೆ.  ಭದ್ರತೆಯಿಲ್ಲದ 5 ಲಕ್ಷ ಸಾಲದೊಂದಿಗೆ ಸರ್ವ ಕಂಪೆನಿ ಪ್ರಾರಂಭಿಸಲು ಅವರು ಐಪಿಎಲ್ ಪ್ರವೇಶವನ್ನು ತ್ಯಜಿಸಿದರು.  

 

910

ಅವರ ಸರ್ವ ಕಂಪನಿಯು 2013 ರಲ್ಲಿ ಪ್ರಾರಂಭವಾಯಿತು. ಕೇವಲ 3 ವರ್ಷಗಳ ನಂತರ ಅಂದರೆ 2016 ರಲ್ಲಿ   100 ಕೋಟಿ ಮೌಲ್ಯವನ್ನು ತಲುಪಿತು. 2023 ಅವರ ಸ್ವಂತ ನಿವ್ವಳ ಮೌಲ್ಯ 3 ಮಿಲಿಯನ್‌ ಡಾಲರ್‌ (25 ಕೋಟಿ). 

 

1010

ಅಪರಿಚಿತನಾಗಿದ್ದರಿಂದ, ಸರ್ವೇಶ್ ಡ್ವೇನ್ 'ದಿ ರಾಕ್' ಜಾನ್ಸನ್ ಮತ್ತು ನವೋಮಿ ಕ್ಯಾಂಪ್‌ಬೆಲ್‌ನಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸುತ್ತಾಡಿದರು. ಮಾತ್ರವಲ್ಲ ಜೆನ್ನಿಫರ್ ಲೋಪೆಜ್ ಅವರ ಸಂಗೀತ ಕಚೇರಿಯನ್ನು ನೋಡಲು ಲಾಸ್ ವೇಗಾಸ್‌ಗೆ ತಮ್ಮ ಖಾಸಗಿ ವಿಮಾನದಲ್ಲಿ ತೆರಳಿದ್ದರು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಐಪಿಎಲ್
ಮಲೈಕಾ ಅರೋರಾ
ಯೋಗ
 
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ದುಬಾರಿ ಮಾಲ್ ಬಿಟ್ಟು ಬೀದಿಬದಿ ಅಂಗಡಿಗೆ ಬಂದ ನೀತಾ ಅಂಬಾನಿ! ಮೊಮ್ಮಕ್ಕಳ ಜೊತೆ ಸ್ಟ್ರೀಟ್ ಶಾಪಿಂಗ್, ವಿಡಿಯೋ ವೈರಲ್
Recommended image2
ಭಾರತದಲ್ಲಿ ಆಪಲ್ ಕಂಪನಿ ಬರೀ ಮೂರೇ ತಿಂಗಳಲ್ಲಿ ಹೊಸ ದಾಖಲೆ! ಐಫೋನ್, ಮ್ಯಾಕ್ ಮಾರಾಟದಿಂದ ಗಳಿಸಿದ್ದೆಷ್ಟು?
Recommended image3
ನಟನೆಯಿಂದ ದೂರವಾದ ಹರಿಪ್ರಿಯಾ ಈಗ ಬಿಜಿನೆಸ್​ ವುಮೆನ್​: ಕನಸಿನ ಉದ್ಯಮಕ್ಕೆ ಕಾಲಿಟ್ಟ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved