ಬೆಲೆ ಏರಿಳಿತದ ಗೊಂದಲದಲ್ಲಿದ್ದೀರಾ? ಇಂದಿನ ಚಿನ್ನ-ಬೆಳ್ಳಿ ದರ ನೋಡಿ ಖರೀದಿಸಿ
Gold And Silver Price Today: ಅಂತರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀಯ ಅಂಶಗಳಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತಗಳುಂಟಾಗುತ್ತವೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿದುಕೊಳ್ಳಿ ಹಾಗೂ ನಿಮ್ಮ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಕಾರಣಗಳಿಂದಲೇ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರದ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಭಾರತದಲ್ಲಿಯೂ ಮಾರುಕಟ್ಟೆಯ ವಿವಿಧ ಕಾರಣಗಳಿಂದ ನಗರದಿಂದ ನಗರಕ್ಕೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವನ್ನು ಕಾಣಬಹುದು.
ಚಿನ್ನ ಖರೀದಿಗೂ ಮುನ್ನ ಇವತ್ತು ಬೆಲೆ ಇಳಿಕೆಯಾಗಿದೆಯಾ ಅಥವಾ ಏರಿಕೆಯಾಗಿದೆಯಾ ಎಂಬುದನನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾಗುತ್ತದೆ. 1 ಗ್ರಾಂ ಮೇಲೆ 100 ರೂ.ಗಳಷ್ಟು ವ್ಯತ್ಯಾಸ ಕಂಡು ಬಂದ್ರೆ ಅದು ನಿಮ್ಮ ಬಜೆಟ್ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇಂದು ಚಿನ್ನ ಮತ್ತು ಬೆಳ್ಳಿ ಕೇವಲ ಆಭರಣವಾಗದೇ ಹೂಡಿಕೆಯ ಒಂದು ಭಾಗವಾಗಿದೆ. ಇಂದು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,180 ರೂಪಾಯಿ
8 ಗ್ರಾಂ: 73,440 ರೂಪಾಯಿ
10 ಗ್ರಾಂ: 91,800 ರೂಪಾಯಿ
100 ಗ್ರಾಂ: 9,18,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,015 ರೂಪಾಯಿ
8 ಗ್ರಾಂ: 80,120 ರೂಪಾಯಿ
10 ಗ್ರಾಂ: 1,00,150 ರೂಪಾಯಿ
100 ಗ್ರಾಂ: 10,01,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,800 ರೂಪಾಯಿ, ಮುಂಬೈ: 91,800 ರೂಪಾಯಿ, ದೆಹಲಿ: 91,950 ರೂಪಾಯಿ, ಕೋಲ್ಕತ್ತಾ: 91,800 ರೂಪಾಯಿ, ಬೆಂಗಳೂರು: 91,800 ರೂಪಾಯಿ, ವಡೋದರ: 91, 850 ರೂಪಾಯಿ, ಪುಣೆ: 91,800 ರೂಪಾಯಿ, ಹೈದರಾಬಾದ್: 91,800 ರೂಪಾಯಿ, ಅಹಮದಾಬಾದ್: 91,850 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು 22 ಕ್ಯಾರಟ್ 10 ಗ್ರಾಂ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದ್ರೆ, ಬೆಳ್ಳಿ ದರ ಸ್ಥಿರವಾಗಿದೆ. ಭಾನುವಾರವೂ ಸಹ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,160 ರೂಪಾಯಿ
100 ಗ್ರಾಂ: 11,600 ರೂಪಾಯಿ
1000 ಗ್ರಾಂ: 1,16,000 ರೂಪಾಯಿ