MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • EPFO: ನಿವೃತ್ತಿ ಬಳಿಕ ಪ್ರತಿ ತಿಂಗಳು 7071ರೂ. ಪಿಂಚಣಿ ಪಡೆಯೋದು ಹೇಗೆ? ಇಪಿಎಫ್ಓ ಕ್ಯಾಲ್ಕುಲೇಟರ್ ಬಳಕೆ ಹೇಗೆ?

EPFO: ನಿವೃತ್ತಿ ಬಳಿಕ ಪ್ರತಿ ತಿಂಗಳು 7071ರೂ. ಪಿಂಚಣಿ ಪಡೆಯೋದು ಹೇಗೆ? ಇಪಿಎಫ್ಓ ಕ್ಯಾಲ್ಕುಲೇಟರ್ ಬಳಕೆ ಹೇಗೆ?

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿ ಮತ್ತು ನಿವೃತ್ತಿ ಬಳಿಕ ಪಡೆಯಬಹುದಾದ ಪಿಂಚಣಿ ಮೊತ್ತವನ್ನು ಇಪಿಎಫ್ ಕ್ಯಾಲ್ಕುಲೇಟರ್ ಮೂಲಕ ಲೆಕ್ಕ ಹಾಕಬಹುದು. 

2 Min read
Asianet News
Published : Sep 13 2025, 06:23 PM IST
Share this Photo Gallery
  • FB
  • TW
  • Linkdin
  • Whatsapp
19
ನಿವೃತ್ತಿ ಬಳಿಕ ಎಷ್ಟು ಪಿಂಚಣಿ?
Image Credit : Asianet News

ನಿವೃತ್ತಿ ಬಳಿಕ ಎಷ್ಟು ಪಿಂಚಣಿ?

ವೇತನ ಪಡೆಯುವ ಉದ್ಯೋಗಿಗಳು ಇಪಿಎಫ್ ಖಾತೆ ಹೊಂದಿರುತ್ತಾರೆ. ಈ ಖಾತೆಯಲ್ಲಿರುವ ಹಣಕ್ಕೆ ಎಷ್ಟು ಬಡ್ಡಿ ಸಿಕ್ಕಿದೆ? ನಿವೃತ್ತಿ ಬಳಿಕ ಎಷ್ಟು ಪಿಂಚಣಿ ಪಡೆಯಬಹುದು ಎಂಬ ಲೆಕ್ಕಾಚಾರವನ್ನು ಇಪಿಎಫ್ ಕ್ಯಾಲ್ಕುಲೇಟರ್ ಮೂಲಕ ಸುಲಭವಾಗಿ ಮಾಡಬಹುದು. ಹಾಗಾದ್ರೆ ಇಪಿಎಫ್ ಕ್ಯಾಲ್ಕುಲೇಟರ್ ಬಳಸಿ ಪಿಂಚಣಿ ಲೆಕ್ಕ ಹಾಕೋದು ಹೇಗೆ?

29
ಉದ್ಯೋಗಿಗಳ ಭವಿಷ್ಯ ನಿಧಿ
Image Credit : Asianet News

ಉದ್ಯೋಗಿಗಳ ಭವಿಷ್ಯ ನಿಧಿ

ಭವಿಷ್ಯ ಹಾಗೂ ನಿವೃತ್ತಿ ಬದುಕಿಗೆ ಒಂದಿಷ್ಟು ಕೂಡಿಡೋದು ಅಗತ್ಯ. ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಹೂಡಿಕೆ ಮಾಡಬೇಕು ಎಂಬ ಮಾಹಿತಿ ಇರೋದು ಕೂಡ ಅಗತ್ಯ. ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಆದರೆ, ಈ ಖಾತೆಯಲ್ಲಿರುವ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತದೆ? ಎಷ್ಟು ವರ್ಷಕ್ಕೆ ಎಷ್ಟು ರಿಟರ್ನ್ ಗಳಿಸಬಹುದು? ಮುಂತಾದ ಮಾಹಿತಿಗಳು ಬಹುತೇಕರಿಗೆ ತಿಳಿದಿರೋದಿಲ್ಲ. ನೀವು ಹೂಡಿಕೆ ಮಾಡಿದ ಹಣ ಎಷ್ಟು ಗಳಿಕೆ ಮಾಡಬಲ್ಲದು ಎಂಬುದನ್ನು ಲೆಕ್ಕ ಹಾಕೋದು ಅತ್ಯಗತ್ಯ. 

Related Articles

Related image1
EPFO 3.0 ಜಾರಿ: ಪಿಎಫ್ ಹಣವನ್ನು ATM ನಿಂದ ಡ್ರಾ ಮಾಡಿ! ಪಿಂಚಣಿ ಯೋಜನೆಗಳಿಗೂ ಲಿಂಕಿಂಗ್!
Related image2
ಜಾಬ್‌ ಬದಲಿಸಿದ್ರೆ ಇನ್ನು ಪಿಎಫ್‌ ಅಕೌಂಟ್‌ ವರ್ಗಾವಣೆ ಕೂಡ ಸುಲಭ ಮಾಡಿದ EPFO
39
ಪಿಎಫ್ ಕ್ಯಾಲ್ಕುಲೇಟರ್
Image Credit : Asianet News

ಪಿಎಫ್ ಕ್ಯಾಲ್ಕುಲೇಟರ್

ಪಿಎಫ್ ಕ್ಯಾಲ್ಕುಲೇಟರ್ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಹೀಗಾಗಿ ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಈ ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕಬಹುದು.

49
ಇಪಿಎಫ್ ಖಾತೆಗೆ ನಿಮ್ಮ ಕೊಡುಗೆ ಎಷ್ಟು?
Image Credit : Asianet News

ಇಪಿಎಫ್ ಖಾತೆಗೆ ನಿಮ್ಮ ಕೊಡುಗೆ ಎಷ್ಟು?

ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ.

59
ಏನಿದು ಇಪಿಎಫ್ ಕ್ಯಾಲ್ಕುಲೇಟರ್?
Image Credit : Asianet News

ಏನಿದು ಇಪಿಎಫ್ ಕ್ಯಾಲ್ಕುಲೇಟರ್?

ನೀವು ನಿವೃತ್ತಿಯಾದ ಬಳಿಕ ನಿಮ್ಮ ಇಪಿಎಫ್ ಖಾತೆಯಲ್ಲಿ ಒಟ್ಟು ಎಷ್ಟು ಹಣವಿದೆ ಎಂಬುದನ್ನು ಈ ಕ್ಯಾಲ್ಕುಲೇಟರ್ ತೋರಿಸುತ್ತದೆ. ಇದರ ಮೂಲಕ ನೀವು ನಿಮ್ಮ ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಅಂದ್ರೆ ನಿಮ್ಮ ಹಾಗೂ ಉದ್ಯೋಗದಾತ ಸಂಸ್ಥೆಯ ಕೊಡುಗೆ ಹಾಗೂ ಅದಕ್ಕೆ ಸಿಕ್ಕಿರುವ ಬಡ್ಡಿ ಎಲ್ಲವನ್ನೂ ಒಟ್ಟಿಗೆ ಲೆಕ್ಕ ಹಾಕಲು ಸಾಧ್ಯವಾಗುತ್ತದೆ.

69
ಇಪಿಎಫ್ ಸೂತ್ರ (Formula)
Image Credit : Asianet News

ಇಪಿಎಫ್ ಸೂತ್ರ (Formula)

ನಿಮ್ಮ ವಯಸ್ಸು, ಮೂಲ ಮಾಸಿಕ ವೇತನ, ಪಿಎಫ್ ಕೊಡುಗೆ ಶೇಕಡವಾರು, ಸಂಸ್ಥೆಯ ಕೊಡುಗೆ ಶೇಕಡವಾರು, ಅಂದಾಜು ಸರಾಸರಿ ವಾರ್ಷಿಕ ವೇತನ ಏರಿಕೆ ಶೇಕಡವಾರು, ನಿವೃತ್ತಿ ವಯಸ್ಸು ಹಾಗೂ ಬಡ್ಡಿದರ ಇಷ್ಟು ಮಾಹಿತಿಗಳನ್ನು ನೀಡಿದ ಬಳಿಕ ನೀವು ನಿವೃತ್ತಿಗೆ ಎಷ್ಟು ಹಣ ಉಳಿತಾಯ ಮಾಡಬಹುದು ಎಂಬುದನ್ನು ಪರಿಶೀಲಿಸಬಹುದು.

79
ಮೂಲವೇತನ ಹಾಗೂ ದಿನ ಭತ್ಯೆ
Image Credit : FREEPIK

ಮೂಲವೇತನ ಹಾಗೂ ದಿನ ಭತ್ಯೆ

ಉದ್ಯೋಗಿ ತನ್ನ ಇಪಿಎಫ್ ಖಾತೆಗೆ ಮೂಲವೇತನ ಹಾಗೂ ದಿನ ಭತ್ಯೆಯ ಗರಿಷ್ಠ ಶೇ.12ರಷ್ಟನ್ನುಕೊಡುಗೆಯಾಗಿ ನೀಡಬಹುದು. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟು ಕೊಡುಗೆ ನೀಡುತ್ತದೆ. ಇದರಲ್ಲಿ ಶೇ. 8.33 ಇಪಿಎಸ್ ಗೆ ಹಾಗೂ ಶೇ.3.67 ಉದ್ಯೋಗಿ ಇಪಿಎಫ್ ಖಾತೆಗೆ ಹೋಗುತ್ತದೆ.

89
ಇಪಿಎಸ್ ಪಿಂಚಣಿ ಸೂತ್ರ = ಪಿಂಚಣಿ ವೇತನ X ಪಿಂಚಣಿ ಸೇವೆ /70
Image Credit : PR

ಇಪಿಎಸ್ ಪಿಂಚಣಿ ಸೂತ್ರ = ಪಿಂಚಣಿ ವೇತನ X ಪಿಂಚಣಿ ಸೇವೆ /70

ಒಂದು ವೇಳೆ ನೀವು ಅಧಿಕ ಪಿಂಚಣಿ ಪಡೆಯಲು ನಿರ್ಧರಿಸಿದ್ರೆ ನಿವೃತ್ತಿ ದಿನಾಂಕದ ಆಧಾರದಲ್ಲಿ ಈ ಹಿಂದಿನ 60 ತಿಂಗಳ ಸರಾಸರಿ ಪಿಂಚಣಿ ವೇತನ ಬಳಸಿಕೊಂಡು ಇಪಿಎಸ್ ಪಿಂಚಣಿ ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ ನೀವು 25ನೇ ವಯಸ್ಸಿಗೆ ಇಪಿಎಸ್ ಪ್ರಾರಂಭಿಸಿದ್ರೆ 58ನೇ ವಯಸ್ಸಿಗೆ ನಿವೃತ್ತಿಯಾಗುವಾಗ ನಿಮಗೆ ಮಾಸಿಕ 7071 ರೂ. ಪಿಂಚಣಿ ಬರುತ್ತದೆ [(Rs. 1500033)/70].

ಇದನ್ನೂ ಓದಿ: ಉದ್ಯೋಗಿಗಳಿಗೆ ಮತ್ತೊಂದು ಬಂಪರ್‌ ನ್ಯೂಸ್‌ ನೀಡಿದ ಇಪಿಎಫ್‌ಓ, ಪಿಂಚಣಿ ಹಣಕ್ಕೆ 58 ವರ್ಷ ಕಾಯಬೇಕಂತಿಲ್ಲ!

99
ಇಪಿಎಫ್ ಖಾತೆ
Image Credit : FREEPIK

ಇಪಿಎಫ್ ಖಾತೆ

ಕನಿಷ್ಠ 20 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಇಪಿಎಫ್ ಖಾತೆಗಳನ್ನು ತೆರೆಯಬೇಕು. ಕೆಲವು ಸಂಸ್ಥೆಗಳು 20ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದರೂ ಇಪಿಎಫ್ ಖಾತೆ ತೆರೆಯಲು ಉದ್ಯೋಗಿಗಳಿಗೆ ಸೂಚಿಸುತ್ತವೆ.

ಇದನ್ನೂ ಓದಿ: UAN ನಂಬರ್‌ ಮೂಲಕ ಇಪಿಎಫ್‌ನಲ್ಲಿ ಹಣ ಎಷ್ಟಿದೆ ಎಂದು ತಿಳಿದುಕೊಳ್ಳೋದು ಹೇಗೆ?

About the Author

AN
Asianet News
Asianet News is a trusted name in Indian journalism, known for delivering accurate, timely, and impactful news. With decades of experience, we excel in covering regional, national, and international stories, ensuring our readers stay informed about the topics that matter most.Whether through breaking news, investigative features, or nuanced opinion pieces, Asianet News remains your reliable source for comprehensive and credible content.Stay connected with Asianet News for stories that matter
ನೌಕರರ ಭವಿಷ್ಯ ನಿಧಿ ಸಂಸ್ಥೆ
ಪಿಂಚಣಿ
ಹಣ (Hana)
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved