ಎಲ್ಲಾ ದಾಖಲೆ ಮುರಿದ ಬಂಗಾರ ಬೆಲೆ, ಮದುವೆ ಸೀಸನ್‌ನಲ್ಲೇ ದುಬಾರಿಯಾದ ಚಿನ್ನ
ಚಿನ್ನದ ಬೆಲೆ ಪ್ರತಿ ದಿನ ದಾಖಲೆ ಬರೆಯುತ್ತಿದೆ. ಎಪ್ರಿಲ್ 18 ರಂದು ಈ ಹಿಂದಿನ ಎಲ್ಲಾ ದಾಖಲೆ ಮುರಿದಿದೆ. ಮದುವೆ ಸೀಸನ್‌ನಲ್ಲೇ ಚಿನ್ನ ಇಷ್ಟೊಂದು ದುಬಾರಿಯಾಗಿರುವುದು ಹಲವರ ಆತಂಕ ಹೆಚ್ಚಿಸಿದೆ. ಇಂದಿನ ಚಿನ್ನದ ಎಷ್ಟಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ,ಇಂಧನ ಬೆಲೆ ಏರಿಕೆ, ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಬೆಲೆ ಏರಿಕೆ ಬಿಸಿ ಜನಸಾಮಾನ್ಯರನ್ನು ತಟ್ಟುತ್ತಿದೆ. ಇದರ ನಡುವೆ ಚಿನ್ನ ಇದೀಗ ಕೈಗೆಟುಕದ ವಸ್ತುವಾಗಿ ಪರಿಣಮಿಸಿದೆ. ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ, ಡೋನಾಲ್ಡ್ ಟ್ರಂಪ್ ತೆರಿಗೆ ನೀತಿ ಸೇರಿದಂತೆ ಹಲವು ಕಾರಣಗಳಿಂದ ಚಿನ್ನದ ಬೆಲೆ ಪ್ರತಿ ದಿನ ಏರಿಕೆಯಾಗುತ್ತಿದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 95 ಸಾವಿರ ರೂಪಾಯಿ ಗಡಿ ದಾಟಿದೆ.
ಬೆಂಗಳೂರಿನಲ್ಲಿ ಇಂದು(ಏ.18) ರಂದು 10 ಗ್ರಾಂ ಚಿನ್ನದ ದರ 95,310 ರೂಪಾಯಿ. ಇದೇ ಮೊದಲ ಬಾರಿಗೆ ಚಿನ್ನ 95 ಸಾವಿರ ರೂಪಾಯಿ ಗಡಿ ದಾಟಿದೆ. ಇದೇ ವೇಗದಲ್ಲಿ ಸಾಗಿದರೆ 1 ಲಕ್ಷ ರೂಪಾಯಿ ದಿನ ದೂರವಿಲ್ಲ. ಒಂದೆಡೆ ತೆರಿಗೆ ಯುದ್ಧ, ಮತ್ತೊಂದೆಡೆ ಆರ್ಥಿಕ ಹಿಂಜರಿತ ಭೀತಿ, ಮದುವೆ ಸೀಸನ್ ಕಾರಣಗಳಿಂದ ಚಿನ್ನಕ್ಕೆ ಹೆಚ್ಚಾದ ಬೇಡಿಕೆ ಸೇರಿದಂತೆ ಹಲವು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಚಿನ್ನ 95 ಸಾವಿರ ರೂಪಾಯಿ ಗಡಿ ದಾಟಿದರೆ ಬೆಳ್ಳಿ ಬೆಲೆಯಲ್ಲೂ ದಾಖಲೆ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಇಂದು (ಏ.18) 1 ಕೆಜೆ ಚಿನ್ನದ ಬೆಲೆ 95,310 ರೂಪಾಯಿ ಆಗಿದೆ. ಪ್ರತಿಯೊಂದು ವಸ್ತುಗಳ ಬೆಲೆ ಏರಿಯಾಗುತ್ತಿದೆ. ಇದರ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆ ಕೈಗೆಟುಕುದ ರೀತಿ ಏರಿಕೆಯಾಗಿದೆ. ಜನಸಾಮಾನ್ಯರು ಇದೀಗ ಚಿನ್ನ ಬೆಳ್ಳಿಯಿಂದ ದೂರ ಸರಿಯುವಂತಾಗಿದೆ.
ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 95,080 ರೂಪಾಯಿ ಆಗಿದೆ.ಎಪ್ರಿಲ್ 11 ರಂದು ಇದೇ 10 ಗ್ರಾಂ ಚಿನ್ನದ ಬೆಲೆ 94,010 ರೂಪಾಯಿ ಆಗಿತ್ತು. ಕೇವಲ 7 ದಿನಳಳಲ್ಲಿ ಭಾರಿ ವ್ಯತ್ಯಾಸವಾಗಿದೆ. ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 95,070 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ 10 ಗ್ರಾಂ ಚಿನ್ನದ ಬೆಲೆ 95, 240 ರೂಪಾಯಿ ಆಗಿದ್ದರೆ, 1 ಕೆಜಿ ಬೆಳ್ಳಿ ಬೆಲೆ 95,240 ರೂಪಾಯಿಗೆ ಏರಿಕೆಯಾಗಿದೆ.
ಚೆನ್ನೈನಲ್ಲಿ 10 ಗ್ರಾಂ ಚಿನ್ನದ ಬೆಲೆ 95,520 ರೂಪಾಯಿಗೆ ಏರಿಕೆಯಾಗಿದೆ. ಇನ್ನು 1 ಕೆಜಿ ಬೆಳ್ಳಿ ಬೆಲೆ 95,520 ರೂಪಾಯಿ ಆಗಿದೆ. ಇನ್ನು ಕೋಲ್ಕಾತದಲ್ಲಿ 10 ಗ್ರಾಂ ಚಿನ್ನದ ಬೆಲೆ 95,110 ರೂಪಾಯಿ ಆಗಿದ್ದರೆ, 1 ಕೆಜಿ ಬೆಳ್ಳಿ ಬೆಲೆ 95,110 ರೂಪಾಯಿ ಆಗಿದೆ. ಹೈದರಾಬಾದ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ 95,390 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 95,390 ರೂಪಾಯಿ ಆಗಿದೆ.