ಉದ್ಯೋಗಿಗೆ ಬರೋಬ್ಬರಿ 4.3 ಕೋಟಿ ರೂ. ಸಂಬಳ ನೀಡುತ್ತೆ ಭಾರತದ ಈ ದಿಗ್ಗಜ ಐಟಿ ಕಂಪೆನಿ!
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಭಾರತದ ಅತಿದೊಡ್ಡ ಐಟಿ ಕಂಪನಿಯಾಗಿದೆ. ಇಂಥಾ ಐಟಿ ಕಂಪನಿಗೆ ಸಿಇಒ ಆಗೋದು ಸುಲಭದ ಕೆಲಸವಲ್ಲ. ಎಲ್ಲವನ್ನೂ ಎದುರಿಸಿ ಕಂಪೆನಿಯನ್ನು ಲಾಭದಲ್ಲಿ ಕೊಂಡೊಯ್ಯಬೇಕು. ಟಾಟಾ ಕನ್ಸಲ್ಟೆನ್ಸಿಯ ಸಿಇಒ ಸ್ಯಾಲರಿಯೆಷ್ಟು ಗೊತ್ತಾ?
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) 12,31,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಭಾರತದ ಅತಿದೊಡ್ಡ ಐಟಿ ಕಂಪನಿಯಾಗಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಗ್ರಾಹಕರಿಂದ ಟಾಟಾ ಮೆಚ್ಚುಗೆಯನ್ನು ಗಳಿಸಿದೆ. ಆದರೆ ಈ ದೊಡ್ಡ ಕಂಪನಿಯನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ.
ಟಿಸಿಎಸ್ ಹಗರಣಕ್ಕೆ ತುತ್ತಾದಾಗ ಅದನ್ನು ಸಮರ್ಥವಾಗಿ ನಿಭಾಯಿಸಿದ ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಕೆ.ಕೃತಿವಾಸನ್. ಐಐಟಿ ಹಳೆಯ ವಿದ್ಯಾರ್ಥಿ, ಕೃತಿವಾಸನ್ ಅವರು ಟಿಸಿಎಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಭಾರತದ ಅತಿದೊಡ್ಡ ಐಟಿ ಕಂಪನಿಗೆ ಸಿಇಒ ಆಗಿದ್ದು ಸುಲಭದ ಪಯಣವಾಗಿರಲ್ಲಿಲ್ಲ.
ಇಂಜಿನಿಯರ್ ಆಗಿದ್ದ ಕೃತಿವಾಸನ್ ಸಿಇಒ ಆಗಿ ನೇಮಕಗೊಂಡಾಗ, ಐಟಿ ಮೇಜರ್‌ನಲ್ಲಿ ಉದ್ಯೋಗ ಹಗರಣವು ಹೊರಹೊಮ್ಮಿತು. ಆದರೆ ಕೃತಿವಾಸನ್ ಕಂಪನಿಯನ್ನು ಆ ಕಳಂಕದಿಂದ ಹೊರತಂದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ್ನು ಯಶಸ್ವಿಯಾಗಿ ಮುನ್ನಡೆಸಿದರು. ಕೃತಿವಾಸನ್ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಅಧಿಕಾರಿಗಳಲ್ಲಿ ಒಬ್ಬರು.
ವರದಿಯ ಪ್ರಕಾರ, ಕೃತಿವಾಸನ್ ಅವರ ಮೂಲ ವೇತನವು ತಿಂಗಳಿಗೆ 10 ಲಕ್ಷ ಅಥವಾ ವರ್ಷಕ್ಕೆ 1.2 ಕೋಟಿ ರೂ. ಆಗಿತ್ತು. ಪ್ರಸ್ತುತ ಸಿಇಒ ವೇತನವು ತಿಂಗಳಿಗೆ 16 ಲಕ್ಷ ಅಥವಾ ಸುಮಾರು 1.90 ಕೋಟಿ ರೂ ಆಗಿದೆ.
ಕೃತಿವಾಸನ್ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ಬಿಸಿನೆಸ್ ಗ್ರೂಪ್‌ನ ಜಾಗತಿಕ ಮುಖ್ಯಸ್ಥರಾಗಿದ್ದರು . ಗ್ರಾಹಕ ಸಂಬಂಧಗಳು, ಮಾರುಕಟ್ಟೆ ಸ್ಥಾನೀಕರಣವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ನಂತರ, ಕೆ.ಕೃತಿವಾಸನ್, ಕಂಪನಿಯ ಪುನರ್ರಚನೆಯನ್ನು ಮಾಡಿದ್ದಾರೆ. ಪ್ರಪಂಚದಾದ್ಯಂತ ಕೃತಕ ಬುದ್ಧಿಮತ್ತೆಯ ನಿಯೋಜನೆಯಿಂದ ಉಂಟಾಗುವ ಸಾಮರ್ಥ್ಯವನ್ನು ನಿಯಂತ್ರಿಸಲು ಹೊಸ ಟೀಮ್‌ನ್ನು ರಚಿಸಿದೆ.
3 ದಶಕಗಳಿಂದ TCSನೊಂದಿಗೆ ಗ್ರಾಹಕರ ಬೆಳವಣಿಗೆ ಮತ್ತು ಪರಿವರ್ತನೆಯ ಪ್ರಯಾಣಗಳು ಮತ್ತು ತಂತ್ರಜ್ಞಾನದ ತಂತ್ರಗಳಿಗೆ ಸಹಾಯ ಮಾಡುತ್ತಿದ್ದಾರೆ.
ಕೃತಿವಾಸನ್ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಐಐಟಿ ಕಾನ್ಪುರದಿಂದ ಕೈಗಾರಿಕಾ ಮತ್ತು ನಿರ್ವಹಣಾ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಅತ್ಯಾಸಕ್ತಿಯ ಓದುಗ ಮತ್ತು ಫಿಟ್ನೆಸ್ ಉತ್ಸಾಹಿ ಕೂಡ.