EPFO ಸದಸ್ಯರಿಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್, 7 ಲಕ್ಷ ರೂ ವಿಮೆ ಸೌಲಭ್ಯ!
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರ EPFO (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸದಸ್ಯರಿಗೆ ಬಂಪರ್ ಬೋನಸ್ ನೀಡಿದೆ. ಇದೀಗ ಇಪಿಎಫ್ಒ ಸದಸ್ಯರಿಗೆ ವಿಮಾ ಸೌಲಭ್ಯ ವಿಸ್ತರಿಸಲಾಗಿದ್ದು, 7 ರೂಪಾಯಿ ವರೆಗೆ ವಿಶೇಷ ಸೌಲಭ್ಯ ಸಿಗಲಿದೆ.
EPFO EDLI ಯೋಜನೆ 2024
EPFO EDLI ಯೋಜನೆ 2024: ದೀಪಾವಳಿ ಹಬ್ಬದ ಸಂಭ್ರಮದಲ್ಲಿ EPFO ಖಾತೆದಾರರಿಗೆ ಮತ್ತು ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀಪಾವಳಿಗೆ ಮುನ್ನ 6 ಕೋಟಿ EPFO ಸದಸ್ಯರಿಗೆ ದೊಡ್ಡ ಉಡುಗೊರೆ ನೀಡಿದೆ. ಉದ್ಯೋಗಿ ಠೇವಣಿ ಲಿಂಕ್ಡ್ ವಿಮಾ ಅಂದರೆ EDLI ಯೋಜನೆಯ ಹಿಂದಿನ ದಿನಾಂಕವನ್ನು ಏಪ್ರಿಲ್ 28, 2024 ರಿಂದ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ, ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮಾ (EDLI) ಯೋಜನೆಯಡಿ EPFO ನ ಎಲ್ಲ ಸದಸ್ಯರಿಗೂ ಹೆಚ್ಚಿನ ವಿಮಾ ಸೌಲಭ್ಯ ವಿಸ್ತರಿಸಲು ನಿರ್ಧರಿಸಿದ್ದಾರೆ. 6 ಕೋಟಿಗೂ ಹೆಚ್ಚು EPFO ಸದಸ್ಯರಿಗೆ 7 ಲಕ್ಷ ರೂಪಾಯಿ ವರೆಗಿನ ಜೀವ ವಿಮಾ ಸೌಲಭ್ಯ ಸಿಗಲಿದೆ.
EDLI ಯೋಜನೆ ಅಂದ್ರೇನು?
EDLI ಯೋಜನೆ 1976 ರಲ್ಲಿ ಆರಂಭವಾಯಿತು. EPFO ಸದಸ್ಯರೊಬ್ಬರು ಮೃತಪಟ್ಟರೆ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಸಿಗುವಂತೆ ಈ ಯೋಜನೆ ರೂಪಿಸಲಾಗಿದೆ. ಸದಸ್ಯರ ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಾರದು ಎಂಬುದು ಇದರ ಉದ್ದೇಶ. ಇದೀಗ ಈ ಮೊತ್ತವನ್ನು 7 ಲಕ್ಷ ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ.
ಯೋಜನೆಯ ಲಾಭ ಪಡೆಯುವುದು ಹೇಗೆ?
ಏಪ್ರಿಲ್ 2021 ರವರೆಗೆ, ಉದ್ಯೋಗಿ ಮೃತಪಟ್ಟರೆ ಅವರ ಕಾನೂನುಬದ್ಧ ವಾರಸುದಾರರಿಗೆ ಗರಿಷ್ಠ 6 ಲಕ್ಷ ರೂಪಾಯಿ ಸಿಗುತ್ತಿತ್ತು. ನಂತರ EDLI ಯೋಜನೆಯಡಿ ಕನಿಷ್ಠ ಮತ್ತು ಗರಿಷ್ಠ ಪರಿಹಾರವನ್ನು ಏಪ್ರಿಲ್ 27, 2024 ರವರೆಗೆ 3 ವರ್ಷಗಳ ಕಾಲ ವಿಸ್ತರಿಸಲಾಯಿತು. ಕನಿಷ್ಠ ಪರಿಹಾರ 2.5 ಲಕ್ಷ ರೂ. ಮತ್ತು ಗರಿಷ್ಠ 7 ಲಕ್ಷ ರೂ.
ಒಂದು ಕಂಪನಿಯಲ್ಲಿ 12 ತಿಂಗಳು ಸೇವೆ ಸಲ್ಲಿಸಬೇಕೆಂಬ ನಿಯಮವನ್ನು ಸಡಿಲಿಸಲಾಗಿದೆ. ಈ ಅವಧಿಯಲ್ಲಿ ಕೆಲಸ ಬದಲಾಯಿಸುವ ಉದ್ಯೋಗಿಗಳಿಗೂ ಈ ಯೋಜನೆ ಅನ್ವಯವಾಗುತ್ತದೆ. ಏಪ್ರಿಲ್ 28, 2024 ರಿಂದ ಉದ್ಯೋಗಿಗಳಿಗೆ 7 ಲಕ್ಷ ರೂ. ಜೀವ ವಿಮಾ ಸೌಲಭ್ಯ ಸಿಗಲಿದೆ.