ಠಕ್ಕರ್ ಕೊಟ್ಟಿದ್ದ ಜಿಯೋ, ಏರ್‌ಟೆಲ್‌ಗೆ 1095GB ಡೇಟಾ ಪ್ಲಾನ್ ಘೋಷಿಸಿ ಶಾಕ್ ನೀಡಿದ BSNL
ಒಂದು ವರ್ಷದ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು BSNL ಪರಿಚಯಿಸಿದೆ. ಈ ಮೂಲಕ ಟಕ್ಕರ್ ಕೊಟ್ಟಿದ್ದ ಜಿಯೋ ಮತ್ತು ಏರ್‌ಟೆಲ್‌ಗೆ ಬಿಎಸ್ಎನ್ಎಲ್ ಶಾಕ್ ನೀಡಿದೆ.
BSNL
ಭಾರತದಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಖಾಸಗಿ ಕಂಪನಿಗಳು ದೂರಸಂಪರ್ಕ ಸೇವೆಯನ್ನು ಒದಗಿಸುತ್ತಿವೆ. ಈ ಎಲ್ಲಾ ಕಂಪನಿಗಳು ಇತ್ತೀಚೆಗೆ ಮಾಸಿಕ, ವಾರ್ಷಿಕ ಶುಲ್ಕವನ್ನು ಹೆಚ್ಚಿಸುತ್ತಿವೆ. ಇದರಿಂದಾಗಿ ಗ್ರಾಹಕರು ಸರ್ಕಾರಿ ದೂರಸಂಪರ್ಕ ಇಲಾಖೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕಡೆಗೆ ಒಲವು ತೋರುತ್ತಿದ್ದಾರೆ.
BSNL ನೂತನ ಯೋಜನೆ
ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು 4G ಇಂಟರ್ನೆಟ್ ಸೇವೆ, 5G ಇಂಟರ್ನೆಟ್ ಸೇವೆ ಎಂದು ಮುಂದುವರೆದಿದ್ದರೂ, BSNL ಇನ್ನೂ 4G ಸೇವೆಯನ್ನು ಪ್ರಾರಂಭಿಸಿಲ್ಲ. ಆದರೂ BSNL ಗ್ರಾಹಕರಲ್ಲಿ ಜನಪ್ರಿಯತೆ ಹೆಚ್ಚಾಗಲು ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುತ್ತಿರುವುದೇ ಕಾರಣ.
BSNL ರೀಚಾರ್ಜ್ ಯೋಜನೆ
BSNL ಈಗ ಒಂದು ಸೂಪರ್ ಆಫರ್ ಅನ್ನು ಪರಿಚಯಿಸಿದೆ. ಅದೇ ಒಂದು ವರ್ಷದ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ. 2,999 ರೂ. ಬೆಲೆಯ ಈ ಯೋಜನೆಯು ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯ ಪ್ರಕಾರ ನಿಮಗೆ ಒಟ್ಟು 1095GB ಡೇಟಾ ಸಿಗುತ್ತದೆ.
BSNL ಯೋಜನೆ
ಈ ಯೋಜನೆಯ ಪ್ರಕಾರ ಪ್ರತಿದಿನ 3GB ಡೇಟಾ ಸಿಗುತ್ತದೆ. ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವೂ ಲಭ್ಯವಿದೆ. ಇದಲ್ಲದೆ ಪ್ರತಿದಿನ 100 ಉಚಿತ SMS ಸೌಲಭ್ಯವನ್ನೂ ಪಡೆಯಬಹುದು. ಈ ಯೋಜನೆಯಲ್ಲಿ 3GB ಡೇಟಾ ಮುಗಿದರೂ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ದೈನಂದಿನ ಡೇಟಾ ಮುಗಿದರೂ 40Kbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾ ಸೇವೆಯನ್ನು ಪಡೆಯಬಹುದು.
ಈ 2,999 ರೂ. ಯೋಜನೆಯ ಪ್ರಮುಖ ಅಂಶವೆಂದರೆ ಇದು ಕಡಿಮೆ ಬೆಲೆಯದ್ದಾಗಿದೆ. ಇದೇ ರೀತಿಯ ಒಂದು ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು 3,500 ರೂ.ಗಿಂತ ಹೆಚ್ಚು ಶುಲ್ಕ ವಿಧಿಸುತ್ತಿವೆ.
BSNL ರೀಚಾರ್ಜ್
BSNL ಪರಿಚಯಿಸಿರುವ ಈ 2,999 ರೂ. ಯೋಜನೆಯಲ್ಲಿ ದೈನಂದಿನ ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್, ಉಚಿತ SMS ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯಗಳನ್ನು ಘೋಷಿಸಿಲ್ಲ. ಒಂದು ವರ್ಷಕ್ಕೆ ರೀಚಾರ್ಜ್ ಸೇವೆಯನ್ನು ಬಳಸುವವರಿಗೆ ಇದು ವರದಾನವಾಗಿದೆ. ಹೊಸ ವರ್ಷ ಬರುತ್ತಿರುವ ಸಂದರ್ಭದಲ್ಲಿ BSNLನ ಈ ಪ್ರಿಪೇಯ್ಡ್ ಯೋಜನೆಯನ್ನು ರೀಚಾರ್ಜ್ ಮಾಡಿ ನೀವು ವರ್ಷಪೂರ್ತಿ ಆನಂದಿಸಬಹುದು.