BSNL ಹೊಸ ವರ್ಷದ ಕೊಡುಗೆ, 150 ದಿನ ವ್ಯಾಲಿಟಿಡಿ, ಪ್ರತಿ ದಿನ 2ಜಿಬಿ ಡೇಟಾ, ಉಚಿತ ಕಾಲ್!
ಹೊಸ ವರ್ಷಕ್ಕೆ ಬಿಎಸ್‌ಎನ್‌ಎಲ್ ಹೊಸ ಕೊಡುಗೆ ಪ್ರಕಟಿಸಿದೆ. ಈ ಪ್ಲಾನ್‌ನಲ್ಲಿ 150 ದಿನ ವ್ಯಾಲಿಟಿಡಿ ಸಿಗಲಿದೆ. ಪ್ರತಿ ದಿನ 2ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಎಸ್ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳು ಕಡಿಮೆ ಬೆಲೆಗೆ ಲಭ್ಯವಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇದೀಗ ಹೊಸ ವರ್ಷದ ಕೊಡುಗೆ ಘೋಷಿಸಿದೆ. ಬಿಎಸ್‌ಎನ್‌ಎಲ್ ಈಗಾಗಲೇ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಇದರ ಜೊತೆಗೆ ಇದೇ ತಿಂಗಳಲ್ಲಿ 5ಜಿ ಸೇವೆ ಆರಂಭದ ದಿನಾಂಕ ಕೂಡ ಘೋಷಣೆಯಾಗಲಿದೆ. ಈ ಮೂಲಕ ಬಳಕೆದಾರರಿಗೆ ದೇಶಾದ್ಯಂತ ಸಂಪೂರ್ಣ ನೆಟ್‌ವರ್ಕ್ ಹಾಗೂ ಹೈಸ್ಪೀಡ್ ಡೇಟಾ ನೀಡಲು ಸಜ್ಜಾಗಿದೆ.
ಬಿಎಸ್‌ಎನ್‌ಎಲ್ ಹೊಸ ವರ್ಷದ ಪ್ಲಾನ್ ಬೆಲೆ 397 ರೂಪಾಯಿ. ಆದರೆ ಇದರ ವ್ಯಾಲಿಟಿಡಿ 150 ದಿನ. ಅಂದರೆ ಬರೋಬ್ಬರಿ 5 ತಿಂಗಳುಗಳ ಕಾಲ ಯಾವುದೇ ಆತಂಕವಿಲ್ಲದೆ, ರೀಚಾರ್ಚ್ ತಲೆಬಿಸಿ ಇಲ್ಲದೆ ಈ ಪ್ಲಾನ್ ಬಳಕೆ ಮಾಡಬಹುದು. ಸದ್ಯ ಲಭ್ಯವಿರುವ ಟೆಲಿಕಾಂ ಆಪರೇಟರ್‌ಗಳ ಪೈಕಿ ಅತೀ ಕಡಿಮೆ ಬೆಲೆಯ ಕೈಗೆಟುಕುವ ಪ್ಲಾನ್ ಇದಾಗಿದೆ.
397 ರೂಪಾಯಿ ರೀಚಾರ್ಜ್ ಪ್ಲಾನ್ ಮಾಡಿದ ಗ್ರಾಹಕರಿಗೆ ಕೆಲ ಪ್ರಮುಖ ಸೌಲಭ್ಯಗಳು ಲಭ್ಯವಾಗಲಿದೆ. ಆರಂಭಿಕ 30 ದಿನ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಸೌಲಭ್ಯವಿದೆ. ಗ್ರಾಹಕರು ಮಿತಿ ಇಲ್ಲದೆ ಕರೆಗಳನ್ನು ಮಾಡಬಹುಗು. ಇನ್ನು ದೇಶಾದ್ಯಂತ ಎಲ್ಲೇ ಹೋದರು ಫ್ರೀ ರೋಮಿಂಗ್ ಇರಲಿದೆ. ರೋಮಿಂಗ್ ಶುಲ್ಕ ಇರುವುದಿಲ್ಲ.
ಪ್ರತಿ ದಿನ 2 ಜಿಬಿಯಿಂತೆ ಹೈಸ್ಪೀಡ್ ಡೇಟಾ ಸಿಗಲಿದೆ. ಆದರೆ ಆರಂಭಿಕ 30 ದಿನಗಳ ವರೆಗೆ ಪ್ರತಿ ದಿನ 2ಜಿಬಿ ಉಚಿತ ಡೇಟಾದಂತೆ ಒಟ್ಟು 60 ಜಿಬಿ ಡೇಟಾ ಸಿಗಲಿದೆ. ಆರಂಭಿಕ 30 ದಿನಗಳಲ್ಲಿ ಪ್ರತಿ ದಿನ 100 ಎಸ್ಎಂಎಸ್ ಗ್ರಾಹಕರು ಉಚಿತವಾಗಿ ಬಳಕೆ ಮಾಡಬಹುದು. ಆರಂಭಿಕ 30 ದಿನಗಳ ಬಳಿಕ ಈ ಪ್ಲಾನ್ ರೀಚಾರ್ಜ್ ಮಾಡಿಕೊಂಡ ಗ್ರಾಹಕರಿಗೆ ವ್ಯಾಲಿಟಿಡಿ ಇರಲಿದೆ. ಆದರೆ ಇತರ ಸೌಲಭ್ಯಗಳು ಚಾರ್ಜ್ ಆಗಲಿದೆ. ಇದಕ್ಕ ಹೆಚ್ಚುವರಿ ಆ್ಯಡ್ ಆನ್ ಪ್ಲಾನ್ ಹಾಕಿಕೊಳ್ಳಬಹುದು.
2025ರ ಹೊಸ ವರ್ಷದಲ್ಲಿ ಬಿಎಸ್‌ಎನ್‌ಎಲ್ ಹಲವು ಕೊಡುಗೆಗಳನ್ನು ಘೋಷಿಸುತ್ತಿದೆ. ವಿಶೇಷ ಅಂದರೆ ಇದೇ ವರ್ಷ ಆರಂಭಿಕ ದಿನಗಳಲ್ಲೇ ಬಿಎಸ್‌ಎನ್‌ಎಲ್ 5ಜಿ ಸೇವೆ ಆರಂಭಿಸುತ್ತಿದೆ. ಇದು ಜಿಯೋ, ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ನೆಟ್‌ವರ್ಕ್‌ಗಳಿಗೆ ಭಯ ಹುಟ್ಟಿಸಿದೆ. ಇತ್ತ ಪ್ರತಿ ದಿನ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.