147 ರೂಗೆ 30 ದಿನ ಅನ್‌ಲಿಮಿಟೆಡ್ ಕಾಲ್ ಸೇರಿ ಹಲವು ಆಫರ್, BSNL ಹೊಸ ಪ್ಲಾನ್ ಲಾಂಚ್
ಬಿಎಸ್ಎನ್ಎಲ್ ರೀಚಾರ್ಜ್ ಪ್ಲಾನ್ ಯಾವತ್ತೂ ಕೈಗೆಟುಕುವ ದರದಲ್ಲೇ ಇರಲಿದೆ. ಇದೀಗ ಹೊಸ ಪ್ಲಾನ್ ಘೋಷಿಸಿದೆ. ಬೆಲೆ ಕೇವಲ 147 ರೂಪಾಯಿ. ಆದರೆ 1 ತಿಂಗಳು ಯಾವುದೇ ತಲೆನೋವಿಲ್ಲ. ಈ ಹೊಸ ಪ್ಲಾನ್‌ನಲ್ಲಿರುವ ಸೌಲಭ್ಯವೇನು?

ಬಿಎಸ್ಎನ್ಎಲ್ ಇದೀಗ ಹೊಸ ಆಫರ್ ಮೂಲಕ ಮತ್ತೆ ಟೆಲಿಕಾಂ ಪ್ರತಿಸ್ಪರ್ಧಿಗಳಿಗೆ ಠಕ್ಕರ್ ನೀಡಿದೆ. ಈ ಬಾರಿ ಬಿಎಸ್ಎನ್ಎಲ್ ಅತೀ ಕಡಿಮೆ ಬೆಲೆಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಇದರ ಬೆಲೆ ಕೇವಲ 147 ರೂಪಾಯಿ. ಆದರೆ ಉಪಯೋಗ ಹೆಚ್ಚು. ಕಾರಣ ಒಮ್ಮೆ ರೀಚಾರ್ಜ್ ಮಾಡಿದರೆ 30 ದಿನ ಯಾವುದೇ ತಲೆನೋವಿಲ್ಲ. ಆರಾಮವಾಗಿ ಬಳಕೆ ಮಾಡಬಹುದು.
147 ರೂಪಾಯಿ ರೀಚಾರ್ಜ್ ಮಾಡಿದರೆ 30 ದಿನಗಳ ವ್ಯಾಲಿಟಿಡಿ ಸಿಗಲಿದೆ. ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸೌಲಭ್ಯ ಇರಲಿದೆ. ಇದರ ಜೊತೆಗೆ ಉಚಿತ ಎಸ್ಎಂಎಸ್ ಸೌಲಭ್ಯವೂ ಸಿಗಲಿದೆ. ಮುಖ್ಯವಾಗಿ ಫೀಚರ್ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ಈ ಆಫರ್ ನೀಡಲಾಗಿದೆ.
phone
147 ರೂಪಾಯಿ ಪ್ಲಾನ್ ಜೊತೆಗೆ 319 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ಬಿಎಸ್ಎನ್ಎಲ್ ಘೋಷಿಸಿದೆ. ಈ ಪ್ಲಾನ್ ರೀಚಾರ್ಜ್ ಮಾಡಿದರೆ 65 ದಿನ ವ್ಯಾಲಿಟಿಡಿ ಸಿಗಲಿದೆ. ಇದರ ಜೊತೆಗೆ ಯಾವುದೇ ನೆಟ್ ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್, ಜೊತೆಗೆ ಉಚಿತ ಎಸ್ಎಂಎಸ್ ಸೌಲಭ್ಯವೂ ಗ್ರಾಹಕರಿಗೆ ಸಿಗಲಿದೆ. ಈ ಮೂಲಕ ಎರಡು ತಿಂಗಳಗೂ ಹೆಚ್ಚು ಕಾಲ ನಿಶ್ಚಂತೆಯಿಂದ ಇರಬಹುದು.
ಟ್ರಾಯ್ ಇತ್ತೀಚೆಗೆ ಹೊರಡಿಸಿದ ಹೊಸ ಆದೇಶಕ್ಕೆ ಅನುಗುಣವಾಗಿ ಬಿಎಸ್ಎನ್ಎಲ್ ಈ ಪ್ಲಾನ್ ಘೋಷಣೆ ಮಾಡಿದೆ. ಟ್ರಾಯ್ ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಬಳಕೆ ಮಾಡುವ ಗ್ರಾಹಕರಿಗಾಗಿ ಟ್ರಾಯ್ ಹೊಸ ಪ್ಲಾನ್ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿತ್ತು. ಇದರಿಂದ ಈಗಾಗಲೇ ಎಲ್ಲಾ ಟೆಲಿಕಾಂ ಘೋಷಣೆ ಮಾಡಿದೆ. ಆದರೆ ಬಿಎಸ್ಎನ್ಎಲ್ ಅತೀ ಕಡಿಮೆ ಬೆಲೆಯಲ್ಲಿ ಈ ಪ್ಲಾನ್ ಘೋಷಿಸಿದೆ.
ಇತ್ತೀಚೆಗೆ ಬಿಎಸ್ಎನ್ಎಲ್ ಇದೇ ಕ್ಯಾಟಗರಿಯಲ್ಲಿ ಕೇವಲ 99 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ಘೋಷಿಸಿದೆ. ಇದಲ್ಲಿ 17 ದಿನ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್ ಹಾಗೂ 300 ಎಸ್ಎಂಎಸ್ ಸೌಲಭ್ಯ ಸಿಗಲಿದೆ. ಇವೆಲ್ಲವೂ ಟ್ರಾಯ್ ಇತ್ತೀಚಿನ ಸೂಚನೆಯಿಂದ ಹೊಸದಾಗಿ ಆರಂಭಿಸಿರುವ ರೀಚಾರ್ಜ್ ಪ್ಲಾನ್ ಆಗಿದೆ.
ಇದೇ ವಿಭಾಗದಲ್ಲಿ 90 ದಿನಗಳು ಅಂದರೆ 3 ತಿಂಗಳ ವ್ಯಾಲಿಟಿಡಿ ಪ್ಲಾನ್ ಬೇಕಿದ್ದರೆ ಗ್ರಾಹಕರು 439 ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲಾನ್ ಕೂಡ ಅನ್‌ಲಿಮಿಟೆಡ್ ಕಾಲ್ ಹಾಗೂ 300 ಎಸ್ಎಂಎಸ್ ಉಚಿತವಾಗಿ ನೀಡುತ್ತಿದೆ. ಪ್ರಮುಖವಾಗಿ ಹಲವು ಹಿರಿಯರು, ಪೋಷಕರು ಫೀಚರ್ ಫೋನ್ ಬಳಕೆ ಮಾಡುತ್ತಾರೆ. ಇವರಿಗೆ ಕರೆ ಮಾಡಲು ಹಾಗೂ ಸರ್ಕಾರಿ ದಾಖಲೆಗಳ ಎಸ್ಎಂಎಸ್ ದೃಢೀಕರಣಕ್ಕೆ ಮಾತ್ರ ಫೋನ್ ಬಳಕೆಯಾಗುತ್ತದೆ. ಇವರಿಗೆ ಈ ರೀಚಾರ್ಜ್ ಉಪಯುಕ್ತವಾಗಿದೆ.