ದೇಶಾದ್ಯಂತ ಮಾರ್ಚ್ 22, 23, 24, 25 ಬ್ಯಾಂಕ್ ರಜೆ! ಯಾಕೆ ಗೊತ್ತಾ?
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮಾರ್ಚ್ 24, 25 ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ಸತತ ನಾಲ್ಕು ದಿನ ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗಲಿದೆ.

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಇದರಲ್ಲಿ ಎಂಟು ಲಕ್ಷ ಉದ್ಯೋಗಿಗಳು ಭಾಗವಹಿಸುತ್ತಿರುವುದರಿಂದ ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗಲಿದೆ. ಈಗಾಗಲೇ ಈ ವೀಕೆಂಡ್ ಎರಡು ದಿನ ಬ್ಯಾಂಕುಗಳಿಗೆ ರಜೆ ಇದೆ. ಇದಕ್ಕೆ ಈ ಮುಷ್ಕರದ ರಜೆ ಕೂಡ ಸೇರಿಕೊಳ್ಳುತ್ತಿದೆ.
ಆರ್ಥಿಕ ವರ್ಷದ ಕೊನೆಯಲ್ಲಿ ಹೀಗೆ ಸತತ ರಜೆಗಳು, ಉದ್ಯೋಗ ಸಂಘಗಳ ಮುಷ್ಕರ ಬ್ಯಾಂಕಿಂಗ್ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ತಿಂಗಳ ಕೊನೆಯಲ್ಲಿ ಯುಗಾದಿ, ರಂಜಾನ್ ಹಬ್ಬಗಳು ಬರುತ್ತಿವೆ. ಅದಕ್ಕೂ ಮುಂಚೆ ಈ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಪೂರ್ಣಗೊಳಿಸಬೇಕೆಂದು ಅಂದುಕೊಂಡಿರುವ ಬ್ಯಾಂಕುಗಳಿಗೆ ಉದ್ಯೋಗಿಗಳ ಮುಷ್ಕರ ಆತಂಕ ತಂದಿದೆ. ಆದರೆ ಈ ಮುಷ್ಕರದಲ್ಲಿ ಕೆಲವು ಬ್ಯಾಂಕುಗಳ ಉದ್ಯೋಗಿಗಳು ಮಾತ್ರ ಭಾಗವಹಿಸುತ್ತಿದ್ದಾರೆ.
ಸರ್ಕಾರಿ, ಖಾಸಗಿ, ವಿದೇಶಿ ಬ್ಯಾಂಕುಗಳ ಉದ್ಯೋಗಿಗಳು ಈ ಯುಎಫ್‌ಬಿಐನಲ್ಲಿ ಪ್ರಾತಿನಿಧ್ಯ ಹೊಂದಿದ್ದಾರೆ. ಹೀಗೆ ಒಟ್ಟಾರೆಯಾಗಿ ಎಂಟು ಲಕ್ಷ ಉದ್ಯೋಗಿಗಳು ಈ ಯೂನಿಯನ್‌ನಲ್ಲಿದ್ದಾರೆ. ಇವರೆಲ್ಲಾ ಮಾರ್ಚ್ 24, 25 (ಸೋಮ, ಮಂಗಳವಾರ) ನಡೆಯುವ ಮುಷ್ಕರದಲ್ಲಿ ಭಾಗವಹಿಸುತ್ತಾರೆ. ಅದಕ್ಕೂ ಮೊದಲು ಎರಡು ದಿನ ಅಂದರೆ ಮಾರ್ಚ್ 22, 23 (ಶನಿ, ಭಾನುವಾರ) ಬ್ಯಾಂಕುಗಳೆಲ್ಲಾ ರಜೆ ಇವೆ. 22 ರಂದು ನಾಲ್ಕನೇ ಶನಿವಾರ ಆಗಿರುವುದರಿಂದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹೀಗೆ ಸತತವಾಗಿ ಮಾರ್ಚ್ 22,23,24,25 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
Bank Holidays in 2025: ಕರ್ನಾಟಕದಲ್ಲಿ ಹಾಲಿ ವರ್ಷ ಬ್ಯಾಂಕ್ ರಜೆಗಳು ಯಾವಾಗ? ಇಲ್ಲಿದೆ ಡೀಟೇಲ್ಸ್..
ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳು ಪೂರೈಸುವಂತೆ ಆಗ್ರಹ
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಗ್ರಾಹಕರಿಗೆ ತಕ್ಕಂತೆ ಉದ್ಯೋಗಿಗಳನ್ನು ನೇಮಿಸದಿರುವುದೇ ಇದಕ್ಕೆ ಕಾರಣ. ಆದ್ದರಿಂದ ಈ ಬ್ಯಾಂಕುಗಳಲ್ಲಿ ಉದ್ಯೋಗ ನೇಮಕಾತಿಗಳನ್ನು ಕೈಗೊಳ್ಳಬೇಕು. ಹೊರಗುತ್ತಿಗೆ ಅಥವಾ ಕಾಂಟ್ರಾಕ್ಟ್ ಪದ್ಧತಿಯಲ್ಲಿ ನೇಮಿಸದೆ ಶಾಶ್ವತ ಉದ್ಯೋಗಿಗಳನ್ನು ನೇಮಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಆರ್‌ಬಿಐ ಸೇರಿದಂತೆ ಒಟ್ಟು ಆರ್ಥಿಕ ರಂಗ ಐದು ದಿನಗಳ ಕೆಲಸದ ವಿಧಾನವನ್ನು ಅನುಸರಿಸುತ್ತಿದೆ. ಇದೇ ವಿಧಾನವನ್ನು ಬ್ಯಾಂಕುಗಳಿಗೂ ಅನ್ವಯಿಸಬೇಕು. ಅಂದರೆ ಬ್ಯಾಂಕ್ ಉದ್ಯೋಗಿಗಳಿಗೂ ವಾರದಲ್ಲಿ ಕೇವಲ ಐದು ದಿನ ಮಾತ್ರ ಕೆಲಸ ಇರಬೇಕು. ಎರಡು ದಿನ ರಜೆ ನೀಡಬೇಕೆಂದು ಕೇಳುತ್ತಿದ್ದಾರೆ.
ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳ ಮೇಲೆ ದಾಳಿ ತಡೆಯುವಂತೆ ಕ್ರಮ ತೆಗೆದುಕೊಳ್ಳಬೇಕೆಂದು UFBU ಬೇಡಿಕೆ ಇಟ್ಟಿದೆ.ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರ ಕನಿಷ್ಠ 51 ಪ್ರತಿಶತ ಷೇರು ಉಳಿಸಿಕೊಳ್ಳಬೇಕೆಂದು ಬೇಡಿಕೆ ಇರಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ದೇಶದ ಬ್ಯಾಂಕ್‌ಗಳಿಂದ 16.35 ಲಕ್ಷ ಕೋಟಿ ಸಾಲ Write Off: ಸಂಸತ್ತಿಗೆ ಕೇಂದ್ರದ ಮಾಹಿತಿ!