ಆಷಾಢ ಬಂಪರ್ ಆಫರ್: ಕೊನೆಗೂ ಇಳಿಕೆಯಾದ ಚಿನ್ನದ ಬೆಲೆ, 1 ಗ್ರಾಂ ದರ ಎಷ್ಟಿದೆ?
Gold And Silver Price Today: ಕಳೆದ ಐದು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿಯಿರಿ.

ಕಳೆದ ಐದು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಕೊನೆಗೂ ಇಳಿಕೆಯಾಗಿದೆ. ಚಿನ್ನ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ರೆ ಇಂದು ಖರೀದಿಸಬಹುದು. ಬೆಲೆ ಇಳಿಕೆಯಾಗಿದ್ದಾಗಲೇ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಬೇಕು.
ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗಿರುತ್ತದೆ. ಇಂದು ದರ ಇಳಿಕೆಯಾಗಿದ್ದು, 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,145 ರೂಪಾಯಿ
8 ಗ್ರಾಂ: 73,160 ರೂಪಾಯಿ
10 ಗ್ರಾಂ: 91,450 ರೂಪಾಯಿ
100 ಗ್ರಾಂ: 9,14,500 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,977 ರೂಪಾಯಿ
8 ಗ್ರಾಂ: 79,816 ರೂಪಾಯಿ
10 ಗ್ರಾಂ: 99,770 ರೂಪಾಯಿ
100 ಗ್ರಾಂ: 9,97,700 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,450 ರೂಪಾಯಿ, ಮುಂಬೈ: 91,450 ರೂಪಾಯಿ, ದೆಹಲಿ: 91,600 ರೂಪಾಯಿ, ಕೋಲ್ಕತ್ತಾ: 91,450 ರೂಪಾಯಿ, ಬೆಂಗಳೂರು: 91,450 ರೂಪಾಯಿ, ಅಹಮದಾಬಾದ್: 91,500 ರೂಪಾಯಿ, ಪುಣೆ: 91,450 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಬೆಲೆ ಇಳಿಕೆಯಾಗಿದ್ರೆ ಬೆಳ್ಳಿ ದರ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 4,000 ರೂ.ವರೆಗೆ ಏರಿಕೆಯಾಗಿದೆ.
10 ಗ್ರಾಂ: 1,190 ರೂಪಾಯಿ
100 ಗ್ರಾಂ: 11,900 ರೂಪಾಯಿ
1000 ಗ್ರಾಂ: 1,19,000 ರೂಪಾಯಿ