Asianet Suvarna News Asianet Suvarna News

Post Office Schemes: ಪ್ರತಿದಿನ 133 ರೂಪಾಯಿ ಹೂಡಿಕೆ ಮಾಡಿ ಲಕ್ಷಾಧಿಪತಿಗಳಾಗಿ

ಶ್ರೀಮಂತರಾಗ್ಬೇಕು ಅಂದ್ರೆ ಕೈನಲ್ಲಿ ಹಣವಿರಬೇಕು ಅಂತಾ ನಾವು ಭಾವಿಸ್ತೇವೆ. ನಿಮ್ಮ ಬಳಿ ಹೆಚ್ಚಿಗೆ ಹಣವಿರಬೇಕು ಎಂದೇನೂ ಇಲ್ಲ. ನೀವು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿದ್ರೆ ಶ್ರೀಮಂತರಾಗ್ಬಹುದು. ಅದಕ್ಕೆ ಅಂಚೆ ಕಚೇರಿ ಅವಕಾಶ ಮಾಡಿಕೊಟ್ಟಿದೆ.
 

Post Office Scheme You Will Become A Millionaire With An Investment Of Rs Hundred Thirty Three Per Day roo
Author
First Published Jul 12, 2023, 4:22 PM IST

ನಮ್ಮ ಹಾಗೂ ನಮ್ಮ ಕುಟುಂಬದ ಮುಂದಿನ ಭವಿಷ್ಯ ಚೆನ್ನಾಗಿ ಇರಬೇಕು ಎನ್ನುವ ಕಾರಣಕ್ಕೆ ನಾವು ಶಕ್ತಿಮೀರಿ ದುಡಿಯುತ್ತೇವೆ. ಭವಿಷ್ಯದಲ್ಲಿ ಹಣದ ಅವಶ್ಯಕತೆ ಬೀಳುತ್ತದೆ ಎಂಬ ಕಾರಣಕ್ಕೆ ದುಡಿದ ಹಣವನ್ನು ಉಳಿತಾಯ ಮಾಡ್ತೇವೆ ಅಥವಾ ಇನ್ನೊಂದು ಕಡೆ ಅದನ್ನು ಹೂಡಿಕೆ ಮಾಡ್ತೇವೆ. ಹೀಗೆ ಉಳಿತಾಯ ಮಾಡಿದ ಹಣ ಭವಿಷ್ಯದಲ್ಲಿ ನಮಗೆ ಊರುಗೋಲಾಗುತ್ತದೆ. ಹಣ (Money) ವನ್ನು ಉಳಿತಾಯ (Savings) ಮಾಡಲು ಅನೇಕ ರೀತಿಯ ಯೋಜನೆಗಳಿವೆ. ಅನೇಕ ಪ್ರೈವೇಟ್ ಹಾಗೂ ಗವರ್ನಮೆಂಟ್ ಸಂಘ ಸಂಸ್ಥೆಗಳು ವಿವಿಧ ಬಡ್ಡಿ ದರದಲ್ಲಿ ಹಣವನ್ನು ಹೂಡಿಕೆ ಮಾಡಿಕೊಳ್ಳುತ್ತವೆ. ಮಧ್ಯಮ ವರ್ಗದವರು ಮತ್ತು ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಅವರು ಚಿಕ್ಕ ಮೊತ್ತದ ಹಣವನ್ನು ಹೂಡಿಕೆ ಮಾಡುವತ್ತ ಹೆಚ್ಚು ಗಮನ ಹರಿಸುತ್ತಾರೆ. ಹೀಗೆ ಸಣ್ಣ ಮೊತ್ತದ ಹಣವನ್ನು ಉಳಿತಾಯ ಮಾಡುವವರಿಗಾಗಿ ಭಾರತೀಯ ಅಂಚೆ ಕಛೇರಿ (Post office) ಅನೇಕ ರೀತಿಯ ಉಳಿತಾಯ ಯೋಜನೆಗಳನ್ನು ಜಾರಿಗೊಳಿಸಿದೆ.

ಮರುಕಳಿಸುವ ಠೇವಣಿ ಯೋಜನೆ (RD) : ಪೋಸ್ಟ್ ಆಫೀಸಿನಲ್ಲಿ ಈಗಾಗಲೇ ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಎಸ್ ಸಿ ಎಸ್ ಎಸ್ ಮುಂತಾದ ಹಲವು ಯೋಜನೆಗಳಿವೆ. ಅಂಚೆ ಕಛೇರಿಯ ಇಂತಹ ಯೋಜನೆಗಳನ್ನು ದೇಶದ ಕಾರ್ಮಿಕ ವರ್ಗ ಮತ್ತು ಮದ್ಯಮ ವರ್ಗದವರು ಹೆಚ್ಚು ಬಳಸಿಕೊಳ್ಳುತ್ತಾರೆ. ಇದು ಸುರಕ್ಷಿತ ಹೂಡಿಕೆಯಾಗಿದ್ದು ಯಾವುದೇ ಅಂಜಿಕೆಯಿಲ್ಲದೇ ಇದರಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಮರುಕಳಿಸುವ ಠೇವಣಿ ಯೋಜನೆ ಅಥವಾ ರಿಕರಿಂಗ್ ಡಿಪೋಸಿಟ್ ಯೋಜನೆಯಲ್ಲಿಯೂ ಹೆಚ್ಚಿನ ಲಾಭವನ್ನು ಗಳಿಸಬಹುದು. ಇದರಲ್ಲಿ ನೀವು 100 ರೂಪಾಯಿಗಳ ಹೂಡಿಕೆಯಿಂದ ಆರಂಭಿಸಿ 1,41,983 ರೂಗಳನ್ನು ಮರಳಿ ಪಡೆಯಬಹುದಾಗಿದೆ.

ಐಟಿಆರ್ ಸಲ್ಲಿಕೆ ಮಾಡಿದ್ದೀರಾ? ರೀಫಂಡ್ ಬಂದಿದೆಯೋ, ಇಲ್ಲವೋ ಪರಿಶೀಲಿಸಲು ಹೀಗೆ ಮಾಡಿ..

ಸದ್ಯ ಸರ್ಕಾರ ರಿಕರಿಂಗ್ ಡಿಪೋಸಿಟ್ ಯೋಜನೆಗೆ ಶೇಕಡಾ 6.2ರಷ್ಟು ಇದ್ದ ಬಡ್ಡಿದರವನ್ನು ಶೇಕಡಾ 6.5ಕ್ಕೆ ಏರಿಸಿದೆ. ಇದ್ರಲ್ಲಿ ವಿವಿಧ ಮಾಸಿಕ ಠೇವಣಿಗೆ ಮೆಚ್ಯುರಿಟಿ ಮೊತ್ತ ಭಿನ್ನವಾಗಿದೆ. ಹೂಡಿಕೆದಾರರು 5 ವರ್ಷದ ಮರುಕಳಿಸುವ ಠೇವಣಿ ಯೋಜನೆಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ ಮುಕ್ತಾಯದ ವೇಳೆಗೆ 1,41,983 ರೂಪಾಯಿಗಳನ್ನು ಪಡೆಯಬಹುದು.  ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆಯಂತೆ ಒಂದು ವರ್ಷದ ಹೂಡಿಕೆಗೆ 24,000 ರೂಪಾಯಿ ಸಿಗುತ್ತದೆ. ಉದ್ಯೋಗಿಗಳು ಪ್ರತಿ ತಿಂಗಳು 3000 ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ 5 ವರ್ಷದ ನಂತರ ನಿಮಗೆ 2,12,971 ರೂಪಾಯಿಗಳು ದೊರಕುತ್ತದೆ. ಒಮ್ಮೆ ನೀವು ಪ್ರತಿ ತಿಂಗಳು 4000 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ ನಿಮ್ಮ ಹಣದ ಮೊತ್ತ 48000 ರೂಪಾಯಿಗಳಾಗುತ್ತದೆ ಹಾಗೂ 5 ವರ್ಷದಲ್ಲಿ ಅದು 2,83,968 ರೂಪಾಯಿ ಆಗುತ್ತದೆ.

GOOD NEWS: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ರಿಕರಿಂಗ್ ಡೆಪೋಸಿಟ್ ಯೋಜನೆಯಲ್ಲಿ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುತ್ತದೆ. ಹೂಡಿಕೆದಾರರ ಹಣವು ಇಲ್ಲಿ ಭದ್ರವಾಗಿರುತ್ತದೆ ಮತ್ತು ಹೂಡಿಕೆದಾರರು ಸ್ಥಿರವಾದ ಹಣವನ್ನು ಬಡ್ಡಿಯ ರೂಪದಲ್ಲಿ ಪಡೆಯಬಹುದಾಗಿದೆ. ಇದರಿಂದ ಜನರು ನಿಗದಿತ ಮೊತ್ತ ಮತ್ತು ಸ್ಥಿರ ಆದಾಯ ಗಳಿಸಬಹುದಾಗಿದೆ. ಅಂಚೆ ಕಛೇರಿಯ ಉಳಿತಾಯ ಯೋಜನೆಗಳು ಅಪಾಯಮುಕ್ತ ಹೂಡಿಕೆಯಾಗಿದೆ. ದೇಶದಾದ್ಯಂತ ಸುಮಾರು 1.54 ಲಕ್ಷ ಪೋಸ್ಟ್ ಆಪೀಸ್ ಗಳು ಇಂತಹ ಹಲವಾರು ಯೋಜನೆಗಳನ್ನು ಒಳಗೊಂಡಿದೆ.

ಎಷ್ಟೋ ಮಂದಿ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಯಾವುದೋ ಖಾಸಗಿ ಸಂಸ್ಥೆಯಲ್ಲಿ ತೊಡಗಿಸಿ ಮೋಸ ಹೋಗುವುದಕ್ಕಿಂತ ಅಂಚೆ ಕಛೇರಿಯ ಅಡಿಯಲ್ಲಿ ಬರುವ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಕೇಂದ್ರ ಸರ್ಕಾರದ ಬೆಂಬಲಿತವಾಗಿರುವುದರಿಂದ  ಯಾವುದೇ ಭಯವಿಲ್ಲದೇ ಹಣವನ್ನು ತೊಡಗಿಸಬಹುದಾಗಿದೆ.

Follow Us:
Download App:
  • android
  • ios