ಸಾಲದಲ್ಲಿ ಮುಳುಗಿದ ಅನಿಲ್ ಅಂಬಾನಿ ಬಂಗಲೆ ಇದು, ಮಾರಿದ್ರೆ ಸಿಗುತ್ತೆ 5 ಸಾವಿರ ಕೋಟಿ!
ದೀರ್ಘ ಕಾಲದಿಂದ ಸಾಲದಲ್ಲಿ ಮುಳುಗಿರುವ ಅನಿಲ್ ಅಂಬಾನಿ ತನ್ನ ಕಂಪನಿಗಳನ್ನು ಮಾರಿದ್ದಾರೆ. Yes Bank ಸಾಲ ಪವತಿಸದ ಕಾರಣ ರಿಲಯನ್ಸ್ ಗ್ರೂಪ್‌ನ ಸಾಂತಾಕ್ರೂಜ್‌ನಲ್ಲಿರುವ ಮುಖ್ಯ ಕಚೇರಿಯನ್ನು ವಶಪಡಿಸಿಕೊಂಡಿದೆ. ಇನ್ನು ಅವರು ಬ್ಯಾಂಕ್ ಸಾಲ ತೀರಿಸದಿದ್ದಲ್ಲಿ, ಅವರ ಉಳಿದ ಆಸ್ತಿಯೂ ಸೀಜ್ ಆಗುವ ಸಾಧ್ಯತೆಗಳಿವೆ. ಇವರ ವಿರುದ್ಧ ಒಟ್ಟು 3.2 ಮಿಲಿಯನ್ ಡಾಲರ್ ಅಂದರೆ 22000 ಕೋಟಿ ರೂ. ಸಾಲವಿದೆ. ಇದರಲ್ಲಿ ಕೊಂಚ ಮೊತ್ತ ಅವರು ಈಗಾಗಲೇ ಪಾವತಿಸಿದ್ದಾರೆ. ಇನ್ನು ಸಾಲದಿಂದ ಮುಕ್ತರಾಗಲು ಅವರು ತಮ್ಮ ಮನೆಯನ್ನು ಮಾರಿದರೂ ಐದು ಸಾವಿರ ಕೋಟಿ ಸಿಗಲಿದೆ.
ಮುಂಬೈನ ಪಾಲಿಹಿಲ್‌ನಲ್ಲಿ ಅನಿಲ್ ಅಂಬಾನಿ ನಿವಾಸವಿದೆ. ಅವರ ಬಂಗಲೆಯ ಮೌಲ್ಯ 5 ಸಾವಿರ ಕೋಟಿ. ಇದು ವಿಶ್ವದ ಅತ್ಯಂತ ದುಬಾರಿ ಕಟ್ಟಡಗಳಲ್ಲಿ ಒಂದು.
ಅನಿಲ್ ಅಂಬಾನಿ ಮನೆ 66 ಮೀಟರ್ ಎತ್ತರವಿದೆ ಹಾಗೂ 16 ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಈ ಬಂಗಲೆಯ ಹೆಸರು ದ ಸೀ ವಿಂಡ್ ಎಂದಿದೆ.
ಅಂಬಾನಿಯ ಮನೆಯಲ್ಲಿ ಜಿಮ್, ಸ್ವಿಮಿಂಗ್ ಪೂಲ್ಸೇರಿ ಎಲ್ಲಾ ಸೌಲಭ್ಯಗಳಿವೆ. ಅಲ್ಲದೇ ಮನೆ ಮಹಡಿ ಮೇಲೆ ಹೆಲಿಪ್ಯಾಡ್ ಕೂಡಾ ನಿರ್ಮಿಸಲಾಗಿದೆ.
17 ಫ್ಲೋರ್‌ಗಗಳ ಈ ಮನೆಯಲ್ಲಿ ಅನಿಲ್ ಅಂಬಾನಿ, ಪತ್ನಿ ಟೀನಾ ಅಂಬಾನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಿಬ್ಬಂದಿಯೂ ಇರುತ್ತಾರೆ.
ಅನಿಲ್ ಹಾಗೂ ಟೀನಾ ಅಂಬಾನಿಗೆ ಆರ್ಟ್ಸ್ ಹಾಗೂ ಪೇಂಟಿಗ್‌ನಲ್ಲಿ ಆಸಕ್ತಿ ಇದೆ.
ಅನಿಲ್ ಅಂಬಾನಿ ನೋಡಲು ಸೂಟ್ ಕೋಟ್ ಧರಿಸುತ್ತಿದ್ದರೂ ಆರ್ಥಿಕವಾಗಿ ಅವರು ಭಾರೀ ಕುಸಿದಿದ್ದಾರೆ. ಅವರ ಅನೇಕ ಕಂಪನಿಗಳು ಬ್ಯಾಂಕ್ ಸಾಲದಲ್ಲಿ ಮುಳುಗಿವೆ. ಇನ್ನು ಅನಿಲ್ ಧೀರೂಬಾಯಿ ಅಂಬಾನಿ ಗ್ರೂಪ್ ಮೇಲೆ 12,000 ಕೋಟಿ ರೂ. ಗೂ ಅಧಿಕ ಸಾಲ ಬಾಕಿ ಇದೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಯಸ್ ಬ್ಯಾಂಕ್ ಅನಿಲ್ ಅಂಬಾನಿಯ ಹೆಡ್ ಆಫೀಸ್ ರಿಲಯನ್ಸ್ ಸೆಂಟರ್‌ನ್ನು ಸೀಜ್ ಮಾಡಿದೆ. ಇದರ ಮೌಲ್ಯ ಸುಮಾರು 2,000 ಕೋಟಿ ರೂ ಎಂದು ಅಂದಾಜಿಸಲಾಗಿದೆ. 21ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿರುವ ಈ ಆಫೀಸ್ ಜೊತೆ ಮುಂಬೈನ ನಾಗಿನ್ ಮಹಲ್‌ನ ಎರಡು ಮಹಡಿಯನ್ನೂ ತನ್ನ ವಶಕ್ಕೆ ಪಡೆದಿದೆ.
ಅನಿಲ್ ಅಂಬಾನಿ ಮೇಲೆ ಈಗಲೂ ಅನಕ ಬಬ್ಯಾಂಕ್‌ಗಳ ಸಾಲ ಇದೆ. ಹೀಗಿರುವಾಗ ಅವರು ತಮ್ಮ ಮನೆ ಮಾರಿದ್ರೆ ಐದು ಸಾವಿರ ಕೋಟಿ ಮಾತ್ರ ಸಿಗಬಹುದು.
ಅತ್ತ ಅನಿಲ್ ಅಣ್ಣ ಮುಕೇಶ್ ಅಂಬಾನಿ ವಾಸಿಸುತ್ತಿರುವ ಬಂಗಲೆ ಭಾರತದ ಅತ್ಯಂತ ದುಬಾರಿ ನಿವಾಸವಾಗಿದೆ. ಫೋರ್ಬ್ಸ್ ಅನ್ವಯ ಆಂಟಿಲಿಯಾದ ಮಾರ್ಕೆಟ್ ವ್ಯಾಲ್ಯೂ 6000 ಕೋಟಿ ಎನ್ನಲಾಗಿದೆ.