ಅಮೆಜಾನ್ ಹೊಸ CEO ಆ್ಯಂಡಿ ಜೆಸ್ಸಿ ಕಿಂಚಿತ್ ಪರಿಚಯ
ಅಮೆಜಾನ್ ಸಿಇಒ ಜೆಫ್ ಬೇಜೋಸ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಎರಡನೇ ತ್ರೈಮಾಸಿಕದ ಅಂತ್ಯದೊಳಗೆ ಅವರು ಈ ಹುದ್ದೆ ತ್ಯಜಿಸಲಿದ್ದಾರೆ. ಅವರ ಸ್ಥಾನಕ್ಕೆ ಎಡಬ್ಲ್ಯೂಎಸ್‌ನ ಸಿಇಒ ಆಗಿರುವ ಆ್ಯಂಡಿ ಜೆಸ್ಸಿರನ್ನು ಸಿಇಒ ಆಗಿ ನೇಮಿಸಲಿದ್ದಾರೆ. ಜುಲೈ 1ರಿಂದ ಆರಂಭವಾಗುವ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ತಮ್ಮ ಅಧಿಕಾರವನ್ನು ಅಮೇಜಾನ್ ವೆಬ್ ಸರ್ವೀಸಸ್ ಸಿಇಒ ಆ್ಯಂಡಿ ಜೆಸ್ಸಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಹಾಗಂಥ ಜೆಫ್ ಕಂಪನಿ ವ್ಯವಹಾರಗಳಿಂದ ಸಂಪೂರ್ಣವಾಗಿ ದೂರ ಸರಿಯೋಲ್ಲ. ಬದಲಾಗಿ ಕಾರ್ಯಕಾರಿ ಅಧ್ಯಕ್ಷರಾಗಲಿದ್ದಾರೆ. ಜೆಫ್ ಹಾಗೂ ಆ್ಯಂಡಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಹೀಗಿರುವಾಗ ಆ್ಯಂಡಿ ಓರ್ವ ಉತ್ತಮ ಲೀಡರ್ ಆಗಬಲ್ಲ ಎಂದು ಜೆಫ್ ತಿಳಿಸಿದ್ದಾರೆ. ಸದ್ಯ ಆ್ಯಂಡಿ ಅಮೆಜಾನ್ ವೆಬ್ ಸರ್ವಿಸ್‌ನ ಹೆಡ್ ಆಗಿದ್ದಾರೆ. ಇಲ್ಲಿದೆ ನೋಡಿ 53ರ ಹರೆಯದ ಆ್ಯಂಡಿ ಜೆಸ್ಸಿ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು!
ಜೆಫ್ ಬೇಜೋಸ್ ಮಂಗಳವಾರ ಪತ್ರವೊಂದನ್ನು ಬರೆದು ತಾವು ಮೂರನೇ ತ್ರೈಮಾಸಿಕದಲ್ಲಿ ಹುದ್ದೆ ತ್ಯಜಿಸುವುದಾಗಿ ತಿಳಿಸಿದ್ದಾರೆ. ತಮ್ಮ ಸ್ಥಾನಕ್ಕೆ ಆ್ಯಂಡಿ ಜೆಸ್ಸಿ ಸಿಇಒ ಆಗಲಿದ್ದಾರೆ ಎಂದಿದ್ದಾರೆ.
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಪೂರೈಸಿರುವ ಆ್ಯಂಡಿ ಜೆಸ್ಸಿ ಅಮೆಜಾನ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅರ್ಜಿ ಹಾಕಿದ್ದರು.
1997 ರಲ್ಲಿ ಜೆಸ್ಸಿ ಅಮೆಜಾನ್‌ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸೇರಿಕೊಂಡಿದ್ದರು. ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಜೆಸ್ಸಿ MBIನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು.
2000ನೇ ಇಸವಿಯಲ್ಲಿ ಅವರು ಬೇಜೋಸ್‌ರವರ technical assistant ಆಗಿ ಕೆಲಸ ಆರಂಭಿಸಿದರು. ಅಮೆಜಾನ್‌ನಲ್ಲಿ ಪುಸ್ತಕ ಹೊರತುಪಡಿಸಿ ಬೇರೆ ವಸ್ತುಗಳ ಮಾರಾಟ ಆರಂಭ ಮಾಡುವ ಕನಸು ಕಂಡಿದ್ದ ವ್ಯಕ್ತಿಯಾಗಿದ್ದರು.
ಜೆಸ್ಸಿಗೆ ಕಂಪನಿಯೊಳಗೆ Amazon Web Services (AWS) ಸಂಸ್ಥಾಪಕರಾಗಿ ಗುರುತಿಸುತ್ತಾರೆ. ಅವರು 57 ಮಂದಿ ತಂಡದೊಂದದಿಗೆ ಕೆಲಸ ಆರಂಭಿಸಿದ್ದರು.
13 ವರ್ಷದ ಬಳಿಕ 2010ರಲ್ಲಿ ಅವರನ್ನು AWS ಸಿಇಒ ಆಆಗಿ ನೇಮಕ ಮಾಡಲಾಯ್ತು. ಅಲ್ಲಿ ಅವರು ಸಾಧಿಸಿದ ಯಶಸ್ಸಿನ ಫಲವಾಗಿ ಅವರನ್ನು ಅಮೆಜಾನ್‌ನ ಸಿಇಒ ಆಗಿ ನೇಮಕ ಮಾಡಲಾಗುತ್ತಿದೆ.
ಇನ್ನು ಜೆಸ್ಸಿ ಖಾಸಗಿ ಬದುಕಿನ ಬಗ್ಗೆ ಹೇಳುವುದಾದರೆ ಅವರು ರೇಚಲ್ ಕೆಪ್ಲಾನಾರನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಜೆಸ್ಸಿ ಅನೇಕ ಸಾಮಾಜಿಕ ವಿಚಾರಗಳ ಕುರಿತಾಗಿ ಟಟ್ವೀಟ್ ಮಾಡುತ್ತಿರುತ್ತಾರೆ. ಅವರು ಆಫ್ರಿಕನ್- ಅಮೆರಿಕನ್ ನಾಗರಿಕ ಹಕ್ಕು, LGBTQ ಹಕ್ಕುಗಳ ವಿಚಾರದಲ್ಲಿ ಧ್ವನಿ ಎತ್ತಿದ್ದರು.
ಅಮೆಜಾನ್‌ನಲ್ಲಿ ತಮ್ಮ ಕೆಲಸ ಹೊರತುಪಡಿಸಿ ಜೆಸ್ಸಿಯವರಿಗೆ ಕ್ರೀಡೆ ಎಂದರೆ ಬಹಳ ಅಚ್ಚುಮೆಚ್ಚು. ಅಲ್ಲದೇ ನ್ಯೂ ಸಿಯೆಟಲ್ ನ್ಯಾಷನಲ್ ಹಾಕಿ ಲೀಗ್ ಫ್ರಾಂಚೈಸಿಯ ಸಹ ಮಾಲೀಕರಾಗಿದ್ದಾರೆ. ಈ ತಂಡ 2021-2022 ಸೀಜನ್‌ನಲ್ಲಿ ಲೀಗ್‌ನಲ್ಲಿ ಪಾಲ್ಗೊಳ್ಳಲಿದೆ. ಕ್ರೀಡೆ ಹೊರತುಪಡಿಸಿ ಸಂಗೀತ ಎಂದರೆ ಜೆಸ್ಸಿಗೆ ಬಹಳ ಇಷ್ಟ.
57ವರ್ಷದ ಜೆಫ್ 1994 ರಲ್ಲಿ ತಮ್ಮ ಮನೆಯ ಗ್ಯಾರೆಜ್‌ನಿಂದ ಅಮೆಜಾನ್ ಆರಂಭಿಸಿದ್ದರು. ಇಂದು ಆ ಕಂಪನಿ ಆನ್‌ಲೈನ್ ರೀಟೆಲ್ ಕ್ಷೇತ್ರದಲ್ಲಿ ಬಹುದೊಡ್ಡ ಸಂಸ್ಥೆಯಾಗಿದೆ.