ಶುಭ ಸಮಾರಂಭಕ್ಕಾಗಿ ಖರೀದಿಸಿ ಚಿನ್ನ ಮತ್ತು ಬೆಳ್ಳಿ; ಇಂದಿನ ದರ ಇಲ್ಲಿದೆ ನೋಡಿ
Gold And Silver Price Today: ಇಂದು ಚಿನ್ನದ ಬೆಲೆ ಗಗನಕ್ಕೇರಿದ್ದು, ಜನರು ಅಗತ್ಯ ಸಮಾರಂಭಗಳಲ್ಲಿ ಮಾತ್ರ ಚಿನ್ನ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು, ಹೂಡಿಕೆಯೂ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಚಿನ್ನದ ಬೆಲೆ 1 ಲಕ್ಷ ತಲುಪುವ ಸಾಧ್ಯತೆ ಇದೆ.

ಇಂದು ಚಿನ್ನದ ಬೆಲೆ ಗಗನಕ್ಕೇರಿರುವ ಕಾರಣ ಜನರು ಅನಿವಾರ್ಯ ಮತ್ತು ಅಗತ್ಯ ಸಮಾರಂಭಗಳಲ್ಲಿ ಮಾತ್ರ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಭಾರತದ ಸಂಪ್ರದಾಯದಲ್ಲಿ ಚಿನ್ನಕ್ಕೆ ಅತ್ಯಮೂಲ್ಯ ಸ್ಥಾನ ನೀಡಲಾಗಿದೆ. ಹಾಗಾಗಿ ಯಾವುದೇ ಶುಭ ಸಮಾರಂಭ ನಡೆದರೂ ಚಿನ್ನ ಇರಬೇಕೆಂದು ಹೇಳಲಾಗುತ್ತದೆ.
ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿರುತ್ತವೆ. ಸಂಪ್ರದಾಯಿಕ ಬಳಕೆ ಜೊತೆಯಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆಯೂ ಏರಿಕೆಯಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ 1 ಗ್ರಾಂ ಚಿನ್ನದ ಬೆಲೆ 1 ಲಕ್ಷದ ಗುರಿಯನ್ನು ತಲುಪುವ ಸಾಧ್ಯತೆಗಳಿವೆ. ಹಾಗಾಗಿ ಈಗಲೇ ಚಿನ್ನ ಖರೀದಿ ಮಾಡೋದು ಸೂಕ್ತ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಾರೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,051 ರೂಪಾಯಿ
8 ಗ್ರಾಂ: 64,408 ರೂಪಾಯಿ
10 ಗ್ರಾಂ: 80,510 ರೂಪಾಯಿ
100 ಗ್ರಾಂ: 8,05,100 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,783 ರೂಪಾಯಿ
8 ಗ್ರಾಂ: 70,264 ರೂಪಾಯಿ
10 ಗ್ರಾಂ: 87,830 ರೂಪಾಯಿ
100 ಗ್ರಾಂ: 8,78,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಗಳು ಹೀಗಿವೆ. ಚೆನ್ನೈ: 80,510 ರೂಪಾಯಿ, ಮುಂಬೈ: 80,510 ರೂಪಾಯಿ, ದೆಹಲಿ: 80,660 ರೂಪಾಯಿ, ಕೋಲ್ಕತ್ತಾ: 80,510 ರೂಪಾಯಿ, ಬೆಂಗಳೂರು: 80,510 ರೂಪಾಯಿ, ಹೈದರಾಬಾದ್: 80,510 ರೂಪಾಯಿ, ಪುಣೆ; 80,510 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 989 ರೂಪಾಯಿ
100 ಗ್ರಾಂ: 9,890 ರೂಪಾಯಿ
1000 ಗ್ರಾಂ: 98,900 ರೂಪಾಯಿ