ATM ಕಾರ್ಡ್ ಕೇವಲ ಹಣ ತೆಗೆಯಲು ಮಾತ್ರವಲ್ಲ, ಈ 10 ಕೆಲಸಗಳಿಗೂ ಬಳಸಬಹುದು!
ATMಗಳು ಹಣ ತೆಗೆಯೋದಕ್ಕೆ ಮಾತ್ರ ಅಲ್ಲ. ಹಣ ವರ್ಗಾವಣೆ, ಬಿಲ್ ಪಾವತಿ, ವಿಮಾ ಕಂತು, ಚೆಕ್ ಬುಕ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಹಲವು ಕೆಲಸಗಳಿಗೆ ATM ಕಾರ್ಡ್ ಉಪಯೋಗಿಸಬಹುದು.

ಹಣ ವಿತ್ಡ್ರಾ
ATMನಿಂದ ಹಣ ತೆಗೆಯಬಹುದು. ಡೆಬಿಟ್ ಕಾರ್ಡ್ ಬಳಸುವಾಗ ಪಿನ್ ನೆನಪಿರಲಿ. ATMಗೆ ಕಾರ್ಡ್ ಹಾಕಿ ಹಣ ತೆಗೆಯಬಹುದು. ಹಣ ಜಮಾ ಕೂಡ ಮಾಡಬಹುದು.
ಬ್ಯಾಲೆನ್ಸ್ ಚೆಕ್
ಖಾತೆಯಲ್ಲಿ ಎಷ್ಟು ಹಣ ಇದೆ ಅಂತ ನೋಡಬಹುದು. ಬ್ಯಾಂಕಿಗೆ ಹೋಗಬೇಕಾಗಿಲ್ಲ. ಕಳೆದ ಹತ್ತು ದಿನದ ವ್ಯವಹಾರ ನೋಡಬಹುದು. ಮಿನಿ ಸ್ಟೇಟ್ಮೆಂಟ್ ತರ ಇರುತ್ತೆ.
ಹಣ ವರ್ಗಾವಣೆ
SBI ಪ್ರಕಾರ, ಡೆಬಿಟ್ ಕಾರ್ಡ್ ಬಳಸಿ ದಿನಾ 40,000 ರೂ. ವರೆಗೆ SBI ಖಾತೆಗಳ ನಡುವೆ ವರ್ಗಾವಣೆ ಮಾಡಬಹುದು. ATM ಕಾರ್ಡ್, ಪಿನ್ ಮತ್ತು ರಿಸೀವರ್ ಖಾತೆ ವಿವರ ಬೇಕು.
ಕ್ರೆಡಿಟ್ ಕಾರ್ಡ್ ಪಾವತಿ
ATM ಮೂಲಕ ಯಾವುದೇ ವೀಸಾ ಕಾರ್ಡ್ ಬಾಕಿ ತೀರಿಸಬಹುದು. ಕಾರ್ಡ್ ಮತ್ತು ಪಿನ್ ಅಗತ್ಯವಾಗಿ ಬೇಕಾಗುತ್ತೆ.
ಇದನ್ನೂ ಓದಿ: ಎಟಿಂ ಹಣ ಡ್ರಾಕ್ಕೆ ಶುಲ್ಕ ಏರಿಸಿದ ಆರ್‌ಬಿಐ, ಯುಪಿಐ ಪಾವತಿಯಲ್ಲೂ ಬದಲಾವಣೆ
ಖಾತೆಗೆ ಹಣ ವರ್ಗಾವಣೆ
ATM ಬಳಸಿ ಖಾತೆಗಳ ನಡುವೆ ಹಣ ವರ್ಗಾವಣೆ ಮಾಡಬಹುದು. ಒಂದು ATM ಕಾರ್ಡ್ ಗೆ 16 ಖಾತೆಗಳನ್ನು ಲಿಂಕ್ ಮಾಡಬಹುದು.
ಇದನ್ನೂ ಓದಿ: ಎಟಿಎಂ ಕಾರ್ಡ್ ಇದ್ಯಾ? ಹಾಗಿದ್ರೆ ಈ ಮಹತ್ವದ ಮಾಹಿತಿ ಅರಿಯಿರಿ- ಇದರಿಂದ ಏನೆಲ್ಲಾ ಪ್ರಯೋಜನ ಇವೆ ಗೊತ್ತಾ?
ವಿಮಾ ಕಂತು ಪಾವತಿ
ATM ಬಳಸಿ ವಿಮಾ ಕಂತುಗಳನ್ನು ಪಾವತಿಸಬಹುದು. LIC, HDFC ಲೈಫ್, SBI ಲೈಫ್ ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿವೆ. ಪಾಲಿಸಿ ನಂಬರ್, ATM ಕಾರ್ಡ್ ಮತ್ತು ಪಿನ್ ಬೇಕು.
ಚೆಕ್ ಬುಕ್ ರಿಕ್ವೆಸ್ಟ್
ಚೆಕ್ ಲೀಫ್ ಗಳು ಮುಗಿದ್ರೆ ATMಗೆ ಹೋಗಿ ಹೊಸ ಚೆಕ್ ಬುಕ್ ಕೇಳಬಹುದು. ನಿಮ್ಮ ವಿಳಾಸಕ್ಕೆ ಬರುತ್ತೆ. ವಿಳಾಸ ಬದಲಾಗಿದ್ರೆ ATMನಲ್ಲಿ ಅಪ್ಡೇಟ್ ಮಾಡಿ.
ಬಿಲ್ ಪಾವತಿ
ATM ಬಳಸಿ ಬಿಲ್ ಪಾವತಿಸಬಹುದು. ಬಿಲ್ಲಿಂಗ್ ಕಂಪನಿ ATM ನೆಟ್ವರ್ಕ್ ಜೊತೆ ಲಿಂಕ್ ಆಗಿದೆಯಾ ನೋಡಿ. ಹಣ ಕಳಿಸುವ ಮುನ್ನ ಬ್ಯಾಂಕಿನ ವೆಬ್ಸೈಟ್ ನಲ್ಲಿ ರಿಸೀವರ್ ವಿವರಗಳನ್ನು ನೋಂದಾಯಿಸಿ.
ಮೊಬೈಲ್ ಬ್ಯಾಂಕಿಂಗ್
ಖಾತೆ ತೆಗೆಯುವಾಗ ಬ್ಯಾಂಕ್ ಗಳು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಆಕ್ಟಿವೇಟ್ ಮಾಡುತ್ತವೆ. ATMನಲ್ಲಿ ಆಕ್ಟಿವೇಟ್/ಡೀಆಕ್ಟಿವೇಟ್ ಮಾಡಬಹುದು.
ATM ಪಿನ್ ಬದಲಾವಣೆ
ಅಷ್ಟೇ ಅಲ್ಲ, ATMನಲ್ಲಿ ಪಿನ್ ಬದಲಾಯಿಸಬಹುದು. ಆಗಾಗ್ಗೆ ಪಿನ್ ಬದಲಾಯಿಸುವುದು ಸುರಕ್ಷಿತ. ಸೈಬರ್ ವಂಚನೆಯಿಂದ ರಕ್ಷಣೆ ಸಿಗುತ್ತದೆ.