68 ಕಿಲೋ ಮೀಟರ್ ಮೈಲೇಜ್, ಈ ಸ್ಕೂಟರ್‌ನ ಮಾರಾಟವು ಶೇಕಡಾ 90 ರಷ್ಟು ಹೆಚ್ಚಾಗಿದೆ..
ಕಳೆದ ಸೆಪ್ಟೆಂಬರ್‌ನಲಿ ಯಮಹ ಕಂಪನಿ ಭರ್ಜರಿ ಲಾಭದಲ್ಲಿ ಇದೆ. ಸ್ಕೂಟರ್‌ಗಳ ಮಾರಾಟದಲ್ಲಿ ಶೇಕಡಾ 90 ರಷ್ಟು ಪ್ರಗತಿ ಸಾಧಿಸಿದ್ದು, ಗ್ರಾಹಕರು ಖರೀದಿಸಲು ಮುಗಿಬಿದ್ದಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಡಿಮ್ಯಾಂಡ್ ಹೆಚ್ಚಾಗಿದೆ
ಕಳೆದ ಸೆಪ್ಟೆಂಬರ್‌ಗೆ ಹೋಲಿಸಿದರೆ ಯಮಹ ಮೋಟಾರ್ ಇಂಡಿಯಾ ತನ್ನ ಸ್ಕೂಟರ್‌ಗಳ ಮಾರಾಟದಲ್ಲಿ ಶೇಕಡಾ 10 ರಷ್ಟು ಪ್ರಗತಿಯನ್ನ ಈ ಸೆಪ್ಟೆಂಬರ್‌ನಲ್ಲಿ ಕಂಡಿದೆ. ದೇಸಿಯ ಮಾರುಕಟ್ಟೆಯಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ. ಯಮಹಾ ರೇಝಡ್ ಭಾರತದಲ್ಲಿ ಹೆಚ್ಚು ಮಾರಾಟವಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಯಮಹ ಒಟ್ಟು 73307 ವಾಹನಗಳನ್ನ ಮಾರಾಟ ಮಾಡಿತ್ತು. ಅದೇ ಈ ಬಾರಿ 80782 ವಾಹನಗಳನ್ನ ಮಾರಾಟ ಮಾಡಿದೆ. ಕಳೆದ ಅಗಸ್ಟ್‌ನಲ್ಲಿ 68796 ರಷ್ಟು ಮಾರಾಟ ಮಾಡಿರೋದನ್ನ ಹೋಲಿಸಿದರೆ ಶೇ. 17.42 ರಷ್ಟು ಬೆಳವಣಿಗೆ ನೋಡಬಹುದು.
ಶೇಕಡಾ 90ಕ್ಕಿಂತ ಹೆಚ್ಚಳ
ವಾಹನಗಳ ಮಾರಾಟದಲ್ಲಿ ಯಮಹಾ ಫ್ಯಾಸಿನೋ ಹೆಚ್ಚು ಮುಂಚೂಣಿಯಲ್ಲಿದೆ. ಈ ಸ್ಕೂಟರ್‌ನ ಮಾರಾಟವು ಶೇಕಡಾ 90.58 ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ 11349 ಯುನಿಟ್‌ಗಳು ಮಾರಾಟ ಆಗಿದೆ. 2025ರ ಸೆಪ್ಟೆಂಬರ್‌ನಲ್ಲಿ 5955 ಯುನಿಟ್‌ಗಳು ಮಾತ್ರ ಮಾರಾಟ ಆಗಿದ್ದವು. ಅಂದರೆ ಇದು ವರ್ಷದಿಂದ ವರ್ಷಕ್ಕೆ ಶೇಕಡಾ 90ಕ್ಕಿಂತ ಹೆಚ್ಚಿನ ಸಂಖ್ಯೆಯಲಿ ಮಾರಾಟವನ್ನು ಕಂಡಿದೆ.
ಇನ್ನು ಸ್ಕೂಟರ್‌ನ ವಿಶೇಷತೆ ಹೀಗಿದೆ..
- ಟರ್ 125 ಸಿಸಿ
- ಏರ್-ಕೂಲ್ಡ್
- 4-ಸ್ಟ್ರೋಕ್ ಎಂಜಿನ್
- 8.2 ಪಿಎಸ್ ಪವರ್
- 10.3 ಎನ್ಎಂ ಟಾರ್ಕ್
- ಟಿಎಫ್‌ಟಿ ಮೀಟರ್
- ಟರ್ನ್-ಬೈ-ಟರ್ನ್ ನ್ಯಾವಿಗೇಷನ್
- ಫೋನ್ ಕರೆ, ಎಸ್‌ಎಂಎಸ್, ಇಮೇಲ್ ಎಚ್ಚರಿಕೆ
- ವಿವಿಧ ಅಪ್ಲಿಕೇಷನ್ ಕನೆಕ್ಷನ್
- ಪ್ರತಿ ಲೀಟರ್‌ಗೆ 68 ಕಿಲೋಮೀಟರ್ ಮೈಲೇಜ್
- ಬೆಲೆ ₹78,980 ರಿಂದ ಪ್ರಾರಂಭ
ಭಾರತದಲ್ಲಿ ಮಾರಾಟ
ಭಾರತದಲ್ಲಿ ಅದರ ಮಾರಾಟದ ಬಗ್ಗೆ ಹೇಳೋದಾದರೆ.. ಕಂಪನಿಯ ರೇಝಡ್‌ಆರ್‌ಗೆ ಬೇಡಿಕೆ ಹೆಚ್ಚಿದೆ. ಸೆಪ್ಟೆಂಬರ್ ಸ್ಕೂಟರ್ 22088 ಯುನಿಟ್‌ಗಳನ್ನ ಮಾರಾಟ ಮಾಡಿದೆ. ಆರ್15 ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದೆ.14256 ಯೂನಿಟ್‌ಗಳನ್ನ ಮಾರಾಟ ಮಾಡಿದೆ. ಎಫ್‌ಝೆಡ್ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಫ್ಯಾಸಿನೋ ಇದೆ.

