70 ವರ್ಷದ ಸಂಭ್ರಮ, ಯಮಹಾ ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್
70 ವರ್ಷಗಳ ಸುದೀರ್ಘ ಪಯಣದ ಸಂಭ್ರಮಾಚರಣೆ ಪ್ರಯುಕ್ತ ಯಮಹಾ ತನ್ನ ಆಯ್ದ ಸ್ಕೂಟರ್ ಮಾಡೆಲ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಜೊತೆಗೆ 10 ವರ್ಷದ ವಾರೆಂಟಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ.

ಯಮಹಾ 70 ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಸಂದರ್ಭದಲ್ಲಿ ಯಮಹಾ ಮೋಟಾರ್ ಭರ್ಜರಿ ಡಿಸ್ಕೌಂಟ್ ಆಫರ್ ಹಾಗೂ ಇತರ ಸೌಲಭ್ಯಗಳನ್ನು ಘೋಷಿಸಿದೆ. ಯಮಹಾದ ಜನಪ್ರಿಯ ಮಾಡೆಲ್ ಸ್ಕೂಟರ್ ಯಮಹಾ ರೇZR 125 Fi ಹೈಬ್ರಿಡ್ ಹಾಗೂ ಯಮಹಾ ರೇZR 125 Fi Hybrid ಸ್ಕೂಟರ್‌ಗೆ ಒಟ್ಟು 10,000 ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲೇ ಮೊದಲ ಬಾರಿಗೆ ಬರೋಬ್ಬರಿ 10 ವರ್ಷ ವಾರೆಂಟಿ ಕೂಡ ನೀಡುತ್ತಿದೆ.
ಯಮಹಾ ರೇZR 125 Fi ಹೈಬ್ರಿಡ್ ಹಾಗೂ ಯಮಹಾ ರೇZR 125 Fi Hybrid ಸ್ಕೂಟರ್ ಸ್ಟ್ರೀಟ್ ರ‍್ಯಾಲಿಗೆ 7,000 ರೂಪಾಯಿವರೆಗೆ ಡಿಸ್ಕೌಂಟ್ ಬೆನಿಫಿಟ್ ನೀಡಲಾಗುತ್ತಿದೆ. ಇದರಿಂದ ಆನ್‌ರೋಡ್ ಬೆಲೆಯಲ್ಲಿ ಗ್ರಾಹಕರಿಗೆ ಒಟ್ಟು 10 ಸಾವಿರ ರೂ ಡಿಸ್ಕೌಂಟ್ ಪಡೆಯಲಿದ್ದಾರೆ.
ಈ 10-ವರ್ಷಗಳ 'ಟೋಟಲ್ ವಾರಂಟಿ' 2-ವರ್ಷಗಳ ಪ್ರಮಾಣಿತ ಖಾತರಿ ಮತ್ತು 8-ವರ್ಷಗಳ ವಿಸ್ತೃತ ಖಾತರಿಯನ್ನು ಒಳಗೊಂಡಿರುತ್ತದೆ. ಈ ವಾರಂಟಿ 1,00,000 ಕಿ.ಮೀ ವರೆಗೆ ಇಂಧನ ಇಂಜೆಕ್ಷನ್ ((Fi) ವ್ಯವಸ್ಥೆಯನ್ನು ಒಳಗೊಂಡಂತೆ ನಿರ್ಣಾಯಕ ಎಂಜಿನ್ ಮತ್ತು ವಿದ್ಯುತ್ ಘಟಕಗಳಿಗೂ ಅನ್ವಯವಾಗುತ್ತದೆ. ಜೊತೆಗೆ, ಈ ವಾರಂಟಿಯನ್ನು ಮುಂದಿನ ಮಾಲೀಕರಿಗೆ ಸಂಪೂರ್ಣವಾಗಿ ವರ್ಗಾಯಿಸಬಹುದಾಗಿದೆ. ಇದು, ಯಮಹಾ ಗೆ ತನ್ನ ಉತ್ಪನ್ನದ ಬಾಳಿಕೆಯ ಬಗ್ಗೆ ಇರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ದೀರ್ಘಕಾಲೀನ ಮಾಲೀಕತ್ವದ ಮೌಲ್ಯವನ್ನು ಹೆಚ್ಚಿಸುತ್ತದೆ.
RayZR 125 Fi Hybrid ವಿನ್ಯಾಸ, ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕತೆ ಎರಡನ್ನೂ ಬಯಸುವ ಇಂದಿನ ನಗರ ಸವಾರರ ಅಗತ್ಯಗಳಿಗೆ ಸೂಕ್ತವಾಗಿದೆ. ಹೈಬ್ರಿಡ್ ಪವರ್ ಅಸಿಸ್ಟ್ ಇರುವ ಇದರ 125cc Fi ಬ್ಲೂ ಕೋರ್ ಎಂಜಿನ್, ಹೆಚ್ಚಿನ ವೇಗವರ್ಧನೆ ಮತ್ತು ಇಂಧನ ದಕ್ಷತೆಯನ್ನು ನೀಡುವುದರಿಂದ ನಗರ ಪ್ರಯಾಣಕ್ಕೆ ಸೂಕ್ತವಾಗಿದೆ. ಸುಗಮ, ಸದ್ದಿಲ್ಲದ ಆರಂಭಕ್ಕಾಗಿ ಸ್ಮಾರ್ಟ್ ಮೋಟಾರ್ ಜನರೇಟರ್ (SMG) ಇದ್ದು ನಿತ್ಯ ಓಡಾಡಲು ಹೆಚ್ಚು ಅನುಕೂಲಕರವಾಗಿದೆ. E20 ಇಂಧನಕ್ಕೆ ಹೊಂದಿಕೊಳ್ಳುವ ಇದು ಭವಿಷ್ಯಕ್ಕೆ ಸಿದ್ಧವಾಗಿದೆ ಮತ್ತು 21-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಇರುವುದರಿಂದ ದೈನಂದಿನ ಬಳಕೆಗೆ ಅತ್ಯುತ್ತಮವಾಗಿದೆ. ಉತ್ತಮ ಸವಾರಿ ಸೌಕರ್ಯಕ್ಕಾಗಿ ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹೆಚ್ಚುವರಿ ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಟ್ರಾಫಿಕ್‌ನಲ್ಲಿ ಸುಧಾರಿತ ಮೈಲೇಜ್‌ಗಾಗಿ ಸ್ವಯಂಚಾಲಿತ ಸ್ಟಾಪ್-ಅಂಡ್-ಸ್ಟಾರ್ಟ್ ಸಿಸ್ಟಮ್ ಮತ್ತು ಪ್ರಯಾಣದಲ್ಲಿರುವಾಗ ಮಾಹಿತಿ ಮತ್ತು ಸಂಪರ್ಕಕ್ಕಾಗಿ ವೈ-ಕನೆಕ್ಟ್ ಬ್ಲೂಟೂತ್ ಸಂಪರ್ಕ ಸಹಿತವಾಗಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವಿಶೇಷತೆಗಳಿವೆ.
Ray ZR 125 Fi Hybrid ಡ್ರಂ ಸೈಯಾನ್ ಬ್ಲೂ, ಮೆಟಾಲಿಕ್ ಬ್ಲೂ, ಮೆಟಾಲಿಕ್ ಬ್ಲ್ಯಾಕ್ ಮತ್ತು ಮ್ಯಾಟ್ ರೆಡ್ 79,340 ರೂಪಾಯಿ
ಡಿಸ್ಕ್ ಸೈಯಾನ್ ಬ್ಲೂ, ಮೆಟಾಲಿಕ್ ಬ್ಲ್ಯಾಕ್, ಮ್ಯಾಟ್ ರೆಡ್, ರೇಸಿಂಗ್ ಬ್ಲೂ, ಮತ್ತು ಡಾರ್ಕ್ ಮ್ಯಾಟ್ ಬ್ಲೂ 86,430 ರೂಪಾಯಿ
Ray ZR 125 Fi Hybrid Street Rally ಡಿಸ್ಕ್ ಐಸ್ ಫ್ಲೂಒ ವರ್ಮಿಲಿಯನ್, ಸೈಬರ್ ಗ್ರೀನ್ ಮತ್ತು ಮ್ಯಾಟ್ ಬ್ಲ್ಯಾಕ್ 92,970 ರೂಪಾಯಿ ಆಗಿದೆ