ಬಜಾಜ್ ಪಲ್ಸರ್ RS200 ಬೈಕ್ ಹೊಸ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳೊಂದಿಗೆ ಬಿಡುಗಡೆಯಾಗಿದೆ. ಹೊಸ 5-ಇಂಚಿನ TFT ಕನ್ಸೋಲ್ ಮತ್ತು ಹೆಚ್ಚಿನ ಎಂಜಿನ್ ಸಾಮರ್ಥ್ಯದೊಂದಿಗೆ ಇದು ಬೈಕ್ ಪ್ರಿಯರನ್ನು ಆಕರ್ಷಿಸುತ್ತಿದೆ.

ಬೆಂಗಳೂರು: ಹೊಸ ಬೈಕ್ ಖರೀದಿ ಪ್ಲಾನ್ ಮಾಡುತ್ತಿರೋರಿಗೆ ಬಜಾಜ್ ಎಕ್ಸೈಟಿಂಗ್ ನ್ಯೂಸ್ ನೀಡಿದೆ. ಪಲ್ಸರ್ RS200 ಬೈಕ್‌ನ ಅಪ್‌ಗ್ರೇಡ್ ಮಾಡಿ ರಿಲೀಸ್ ಮಾಡಿದೆ. ಇದು ನೋಡಲು ಖಡಕ್ ಲುಕ್‌ನೊಂದಿಗೆ ಬೈಕ್ ಪ್ರಿಯರನ್ನ ಆಕರ್ಷಿಸುತ್ತಿದೆ.

ಈ ಬೈಕ್ ಹೊಸ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್ ಅಪ್‌ಗ್ರೇಡ್‌ ಹೊಂದಿದೆ. ಹೊಸ, ಹೊಸ ಫೀಚರ್‍‌ಗಳನ್ನ ಹೊಂದಿರುವ ಬೈಕ್‌ ಖರೀದಿ ಪ್ಲಾನ್‌ನಲ್ಲಿ ಇರುವ ಬೈಕ್ ಪ್ರಿಯರಿಗೆ ಹೇಳಿ ಮಾಡಿಸಿದ ವಾಹನ ಇದಾಗಿದೆ. ಹೊಸ ಡಿಸ್ಪ್ಲೇ ಮಾತ್ರವಲ್ಲದೆ.. ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ ಕಂಪನಿಯು ಬೈಕ್ ಎಂಜಿನ್‌ನ ಸಾಮರ್ಥ್ಯವನ್ನೂ ಹೆಚ್ಚಿಸಿದೆ.

ವಿಶೇಷತೆಗಳು ಏನೇನು?

ಬಜಾಜ್ ಪಲ್ಸರ್ RS200 ಈಗ 25.5 PS ಸಾಮರ್ಥ್ಯವನ್ನು ನೀಡುತ್ತದೆ. ಹಿಂದೆ ಇದೇ ಬೈಕ್ 24.5 PS ಗುರಿ ಹೊಂದಿತ್ತು. ಇದು ಸ್ಪೋರ್ಟ್ ಶಿಫ್ಟರ್ ಸಹ ಹೊಂದಿದೆ. ಪ್ರಯಾಣದ ವೇಳೆ ಒಳ್ಳೆಯ ಅನುಭವ ನೀಡುವ ಈ ಬೈಕ್‌ನ ಬೆಲೆ ₹198,411 (ಎಕ್ಸ್-ಶೋರೂಂ). ಆಗಿದೆ.

ಪ್ರಮುಖ ಯಾಂತ್ರಿಕ ಬದಲಾವಣೆಗಳಲ್ಲಿ ಎಲೆಕ್ಟ್ರಾನಿಕ್ ಥ್ರೊಟಲ್ ಬಾಡಿ ಸೇರಿದೆ. ಇದು ಬಹು ರೈಡರ್ ಮೋಡ್‌ಗಳನ್ನು ನೀಡುತ್ತದೆ. ಇದರಿಂದ ವಿಭಿನ್ನ ರೈಡಿಂಗ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅನುಕೂಲ ಆಗಲಿದೆ. ಜೊತೆಗೆ ಟ್ರಾಕ್ಷನ್ ಕಂಟ್ರೋಲ್ ಸಹ ಸೇರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಸ್ಪೋರ್ಟ್ ಶಿಫ್ಟರ್ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿ ಒದಗಿಸಿಲ್ಲ. ಶೀಘ್ರದಲ್ಲೇ ಮಾಹಿತಿ ನೀಡುವ ಸಾಧ್ಯತೆ ಇದೆ.

ಬೈಕ್‌ನ ವಿಶೇಷತೆ ಏನು?

ಬೈಕ್ ಹಿಂದಿನ LCD ಘಟಕವನ್ನು ಬದಲಾಯಿಸಿದೆ. ಈಗ 5-ಇಂಚಿನ TFT ಕನ್ಸೋಲ್ ಹೊಂದಿದೆ. ಗೂಗಲ್ ಮ್ಯಾಪ್ ನೋಡಲು ಅನುಕೂಲ ಆಗುವ ರೀತಿಯಲ್ಲಿ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ನ್ಯಾವಿಗೇಷನ್ ಮಾಹಿತಿ ನೇರವಾಗಿ ಡಿಸ್‌ಪ್ಲೇನಲ್ಲಿ ಸಿಗಲಿದೆ. ಅಷ್ಟೇ ಅಲ್ಲ, USB ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಅಪಾಯದ ಸ್ವಿಚ್ ಮತ್ತು ಪ್ಯಾನಿಕ್ ಬ್ರೇಕ್ ಅಲರ್ಟ್ ಒಳಗೊಂಡಿದೆ. ಜೊತೆಗೆ ದೈನಂದಿನ ಸವಾರಿ ಹೆಚ್ಚಿಸುವ ಪ್ಯಾಕೇಜ್ ನೀಡಿದೆ. ಹಾರ್ಡ್‌ವೇರ್ ಅನ್ನು ಪರಿಷ್ಕರಿಸಿದೆ. 37mm USD ಮುಂಭಾಗದ ಫೋರ್ಕ್‌ನೊಂದಿಗೆ USD ಮುಂಭಾಗದ ಫೋರ್ಕ್ ಒಳಗೊಂಡಿದೆ. ಇನ್ನು ಸ್ಟೈಲಿಂಗ್ ಬದಲಾಗದೆ ಉಳಿದಿದೆ. ಈ ಬೈಕ್ KTM RC 200, ಯಮಹಾ R15 V4, ಮತ್ತು ಸುಜುಕಿ ಗಿಕ್ಸರ್ SF 250 ನೊಂದಿಗೆ ನೇರವಾಗಿ ಪೈಪೋಟಿ ನಡೆಸಲಿದೆ.

ಒಟ್ಟಾರೆಯಾಗಿ ಯುಎಸ್‌ಡಿ (USD) ಫ್ರಂಟ್ ಫೋರ್ಕ್ಸ್, 5-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ರೈಡ್ ಮೋಡ್‌ಗಳು ಹಾಗೂ ಟ್ರಾಕ್ಷನ್ ಕಂಟ್ರೋಲ್‌ನಂತಹ ಆಧುನಿಕ ಫೀಚರ್‌ಗಳೊಂದಿಗೆ 2026ರ ಬಜಾಜ್ ಪಲ್ಸರ್ RS200 ಮತ್ತಷ್ಟು ಬಲಿಷ್ಠವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೆಚ್ಚಿದ ಎಂಜಿನ್ ಪವರ್ ಮತ್ತು ಕ್ವಿಕ್‌ಶಿಫ್ಟರ್‌ನಂತಹ ಹೊಸ ತಂತ್ರಜ್ಞಾನದ ಸೇರ್ಪಡೆಯು ಸ್ಪೋರ್ಟ್ಸ್ ಬೈಕ್ ಪ್ರಿಯರಿಗೆ ರೋಮಾಂಚಕಾರಿ ರೈಡಿಂಗ್ ಅನುಭವವನ್ನು ನೀಡಲಿದೆ.

ಹಳೆಯ ಮಾದರಿಗಿಂತ ಬೆಲೆ ತುಸು ಹೆಚ್ಚಾಗಿದ್ದರೂ, ಸದ್ಯದ ಮಾರುಕಟ್ಟೆಯಲ್ಲಿ ಯಮಹಾ R15 V4 ಹಾಗೂ ಕೆಟಿಎಂ RC 200ನಂತಹ ಬೈಕ್‌ಗಳಿಗೆ ಇದು ಭರ್ಜರಿ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ. ಆಕರ್ಷಕ ಫುಲ್-ಫೇರ್ಡ್ ಲುಕ್ ಜೊತೆಗೆ ಪವರ್‌ಫುಲ್ ಪರ್ಫಾರ್ಮೆನ್ಸ್ ಬಯಸುವ ಯುವ ಸವಾರರಿಗೆ ಈ ಹೊಸ ಪಲ್ಸರ್ RS200 ಒಂದು ಅತ್ಯುತ್ತಮ ಆಯ್ಕೆಯಾಗಲಿದೆ.