ಲೈಸೆನ್ಸ್ -ರಿಜಿಸ್ಟ್ರೇಶನ್ ಬೇಡ, 33,893 ರೂ ಬೆಲೆಯ ಹೊಸ ಓಲಾ GIG ಎಲೆಕ್ಟ್ರಿಕ್ ಸ್ಕೂಟರ್
ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ, RTO ನೋಂದಣಿ ಬೇಡ, ಇದೀಗ ಓಲಾ ಹೊರತಂದಿದೆ GIG ಎಲೆಕ್ಟ್ರಿಕ್ ಸ್ಕೂಟರ್. ಇದರ ಬೆಲೆ ಕೇವಲ 33,983 ರೂಪಾಯಿ ಮಾತ್ರ.

ಲೈಸೆನ್ಸ್ ಬೇಡದ ಸ್ಕೂಟರ್
OLA GIG: ಕೇವಲ ₹39,999ಕ್ಕೆ ಓಲಾ ಗಿಗ್ ಎಂಬ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಸರಳ, ಕಡಿಮೆ ವೆಚ್ಚದ ಮತ್ತು ಲೈಸೆನ್ಸ್-ಮುಕ್ತ ವಾಹನ ಬಯಸುವವರಿಗೆ ಇದು ಸೂಕ್ತ. ಸರ್ಕಾರಿ ಸಬ್ಸಿಡಿ ಸಿಕ್ಕರೆ ₹33,893ಕ್ಕೆ ಸಿಗುತ್ತದೆ. ಈ ಸ್ಕೂಟರ್‌ಗೆ ನೋಂದಣಿ ಅಥವಾ ಲೈಸೆನ್ಸ್ ಬೇಕಿಲ್ಲ. ಸ್ಕೂಲ್-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಇದು ಉತ್ತಮ ಆಯ್ಕೆ.250W ಮೋಟಾರ್, 1.5 kWh ಬ್ಯಾಟರಿ ಇದ್ದು, ಒಂದು ಚಾರ್ಜ್‌ಗೆ 112 ಕಿ.ಮೀ. ಓಡುತ್ತದೆ. ಗರಿಷ್ಠ ವೇಗ 25 ಕಿ.ಮೀ./ಗಂಟೆ. 4-5 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ.
ಲೈಸೆನ್ಸ್ ಬೇಕಿಲ್ಲ
ಓಲಾ ಗಿಗ್ ಲೈಸೆನ್ಸ್ ಅಥವಾ ನೋಂದಣಿ ಬೇಕಿಲ್ಲ. ಕಡಿಮೆ ವೇಗದ ವಾಹನವಾದ್ದರಿಂದ RTOಗೆ ಹೋಗುವ ಅಗತ್ಯವಿಲ್ಲ.
ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಇದು ಸೂಕ್ತ. ಸುಲಭವಾಗಿ ಎಲೆಕ್ಟ್ರಿಕ್ ವಾಹನ ಬಳಸಬಹುದು.
ಕಡಿಮೆ ನಿರ್ವಹಣೆ ವೆಚ್ಚ. ದಿನನಿತ್ಯದ ಪ್ರಯಾಣಕ್ಕೆ ಉತ್ತಮ.
ಆರಾಮದಾಯಕ ವಿನ್ಯಾಸ
ಕಿಕ್ ಸ್ಕೂಟರ್‌ನಲ್ಲಿ ಟ್ಯೂಬ್‌ಲೆಸ್ ಟೈರ್‌ಗಳಿವೆ. ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದೆ. ಡಿಜಿಟಲ್ ಸ್ಪೀಡೋಮೀಟರ್, ಪುಶ್-ಬಟನ್ ಸ್ಟಾರ್ಟ್ ಇದೆ.
ಮೊಬೈಲ್ ಚಾರ್ಜಿಂಗ್ ಪೋರ್ಟ್, ಆಂಟಿ-ಥೆಫ್ಟ್ ಅಲಾರ್ಮ್, ಸೀಟ್ ಕೆಳಗೆ ಸ್ಟೋರೇಜ್ ಇದೆ. ವಿದ್ಯಾರ್ಥಿಗಳು, ಆಫೀಸ್‌ಗೆ ಹೋಗುವವರಿಗೆ ಉತ್ತಮ.
ಯಾರಿಗೆಲ್ಲಾ ಸೂಕ್ತ?
ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ದಿನನಿತ್ಯ ಪ್ರಯಾಣಿಕರು, ಡೆಲಿವರಿ ಮಾಡುವವರು, ಎರಡನೇ ವಾಹನ ಬಯಸುವವರಿಗೆ ಓಲಾ ಕಿಕ್ ಸೂಕ್ತ. ನಗರ ಪ್ರದೇಶದ ಟ್ರಾಫಿಕ್ ನಡುವೆ ಗ್ರಾಮೀಣ ಪ್ರದೇಶದಲ್ಲಿ ಈ ಸ್ಕೂಟರ್ ಸುಲಭಾಗಿ ಬಳಕೆ ಮಾಡಬಹುದು.
ಬೆಲೆ ಮತ್ತು ಬುಕಿಂಗ್
₹39,999. ಸಬ್ಸಿಡಿ ಇದ್ದರೆ ₹33,893. ಓಲಾ ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡಬಹುದು. EMI ಆಯ್ಕೆಗಳೂ ಇವೆ. ಬಅತೀ ಕಡಿಮೆ ಬೆಲೆಯ ಸ್ಕೂಟರ್ ನೋಡುತ್ತಿದ್ದರೆ ಓಲಾದ ಹೊಸ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ.
ಮುಖ್ಯ ವೈಶಿಷ್ಟ್ಯಗಳು
ಪುಶ್-ಬಟನ್ ಸ್ಟಾರ್ಟ್, ಡಿಜಿಟಲ್ ಡಿಸ್‌ಪ್ಲೇ, ಮೊಬೈಲ್ ಚಾರ್ಜಿಂಗ್, ಆಂಟಿ-ಥೆಫ್ಟ್ ಅಲಾರ್ಮ್, ಸ್ಟೋರೇಜ್, ಲೈಟ್‌ವೈಟ್ ವಿನ್ಯಾಸ.
OLA GIG: ಮಹತ್ವ ಏನು?
ಎಲೆಕ್ಟ್ರಿಕ್ ವಾಹನಗಳು ಈಗ ಎಲ್ಲರಿಗೂ ಸಿಗುವಂತಾಗಿದೆ. ಕಡಿಮೆ ಬೆಲೆ, ಲೈಸೆನ್ಸ್ ಬೇಡ, ಉತ್ತಮ ವೈಶಿಷ್ಟ್ಯಗಳು ಇರುವುದರಿಂದ ಓಲಾ ಕಿಕ್ ಒಳ್ಳೆಯ ಆಯ್ಕೆ.