MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • Yamaha NMAX 155: ಯಮಹಾದಿಂದ ಮತ್ತೊಂದು ಮ್ಯಾಕ್ಸಿ ಸ್ಕೂಟರ್? ಎನ್‌ಮ್ಯಾಕ್ಸ್-155 ಡಿಸೈನ್ ಪೇಟೆಂಟ್!

Yamaha NMAX 155: ಯಮಹಾದಿಂದ ಮತ್ತೊಂದು ಮ್ಯಾಕ್ಸಿ ಸ್ಕೂಟರ್? ಎನ್‌ಮ್ಯಾಕ್ಸ್-155 ಡಿಸೈನ್ ಪೇಟೆಂಟ್!

ಯಮಹಾ ತನ್ನ NMAX 155 ಟೆಕ್ ಮ್ಯಾಕ್ಸ್ ಸ್ಕೂಟರ್‌ನ ವಿನ್ಯಾಸವನ್ನು ಭಾರತದಲ್ಲಿ ಪೇಟೆಂಟ್ ಮಾಡಿಸಿದೆ, ಇದು ಭವಿಷ್ಯದ ಬಿಡುಗಡೆಯ ಸಾಧ್ಯತೆ ಹೆಚ್ಚಿಸಿದೆ. ಏರಾಕ್ಸ್ 155ಕ್ಕಿಂತ ಭಿನ್ನವಾಗಿದೆ. YECVT ತಂತ್ರಜ್ಞಾನ, 155cc ಎಂಜಿನ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯಂತಹ ಪ್ರೀಮಿಯಂ ಫೀಚರ್‌ ಹೊಂದಿದೆ.

2 Min read
Author : Sathish Kumar KH
Published : Jul 02 2026, 10:51 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : RushLane

ಭಾರತದ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮ್ಯಾಕ್ಸಿ ಸ್ಕೂಟರ್‌ಗಳ ವಿಭಾಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಹೊತ್ತಲ್ಲೇ, ಯಮಹಾ ಕಂಪನಿಯ NMAX 155 ಟೆಕ್ ಮ್ಯಾಕ್ಸ್ ಸ್ಕೂಟರ್ ಮತ್ತೆ ಗಮನ ಸೆಳೆಯುತ್ತಿದೆ. ಕಂಪನಿಯು ಈ ಮಾಡೆಲ್‌ನ ಡಿಸೈನ್‌ಗೆ ಭಾರತದಲ್ಲಿ ಪೇಟೆಂಟ್ ಪಡೆದುಕೊಂಡಿದ್ದು, ವಾಹನ ಪ್ರಿಯರಲ್ಲಿ ಹೊಸ ಚರ್ಚೆ ಶುರುವಾಗಿದೆ. ಡಿಸೈನ್ ಪೇಟೆಂಟ್ ಮಾಡಿಸಿದ ಮಾತ್ರಕ್ಕೆ ಬಿಡುಗಡೆ ಖಚಿತ ಅಂತ ಹೇಳೋಕಾಗಲ್ಲ. ಆದರೆ, ಭವಿಷ್ಯದಲ್ಲಿ ಭಾರತದ ಮಾರುಕಟ್ಟೆಗೆ ಇದನ್ನು ತರುವ ಬಗ್ಗೆ ಕಂಪನಿ ಯೋಚಿಸುತ್ತಿದೆ ಅನ್ನೋದು ಸ್ಪಷ್ಟ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : RushLane

ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಏರಾಕ್ಸ್ 155 ಒಂದು ಸ್ಪೋರ್ಟಿ ಸ್ಕೂಟರ್. ಆದರೆ, NMAX 155 ಟೆಕ್ ಮ್ಯಾಕ್ಸ್ ಹೆಚ್ಚು ಆರಾಮದಾಯಕ ಹಾಗೂ ದೂರದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ತಯಾರಾಗಿದೆ. ದೊಡ್ಡದಾದ ಫ್ರಂಟ್ ಏಪ್ರಾನ್, ಎತ್ತರದ ವಿಂಡ್‌ಸ್ಕ್ರೀನ್, ವಿಶಾಲವಾದ ಸ್ಟೆಪ್-ಅಪ್ ಸೀಟ್, ದೊಡ್ಡ ಫ್ಲೋರ್‌ಬೋರ್ಡ್ ಮತ್ತು ಇಂಟಿಗ್ರೇಟೆಡ್ ಗ್ರಾಬ್ ರೈಲ್‌ಗಳು ಇದಕ್ಕೆ ಪಕ್ಕಾ ಮ್ಯಾಕ್ಸಿ ಸ್ಕೂಟರ್ ಲುಕ್ ನೀಡಿವೆ. ಇದರ ಟೆಕ್ ಮ್ಯಾಕ್ಸ್ ಆವೃತ್ತಿಯಲ್ಲಿ ವಿಶೇಷ ಗ್ರಾಫಿಕ್ಸ್, ಪ್ರೀಮಿಯಂ ಪೇಂಟ್ ಮತ್ತು ಕಾಂಟ್ರಾಸ್ಟ್ ಸ್ಟಿಚಿಂಗ್ ಇರುವ ಸೀಟ್ ಕೂಡ ಸಿಗಲಿದೆ.

Related Articles

Related image1
44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್
Related image2
ಯುಗಾದಿ ವಿಶೇಷ ಆಫರ್ ಘೋಷಿಸಿದ ಯಮಹಾ, ಬೈಕ್ - ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್
35
Image Credit : RushLane

ಈ ಮಾಡೆಲ್‌ನ ಅತಿದೊಡ್ಡ ವಿಶೇಷತೆ ಅಂದ್ರೆ, ಯಮಹಾದ ಹೊಸ YECVT (Yamaha Electric Continuously Variable Transmission) ತಂತ್ರಜ್ಞಾನ. ಸಾಮಾನ್ಯ CVT ಗಿಂತ ಇದು ಭಿನ್ನವಾಗಿದ್ದು, ಟೌನ್ ಮತ್ತು ಸ್ಪೋರ್ಟ್ ಮೋಡ್‌ಗಳಲ್ಲಿ ಥ್ರಾಟಲ್ ರೆಸ್ಪಾನ್ಸ್ ಬದಲಾಯಿಸಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ, ಓವರ್‌ಟೇಕ್ ಮಾಡಲು ಮತ್ತು ಏರುರಸ್ತೆಗಳಲ್ಲಿ ಸಲೀಸಾಗಿ ಹೋಗಲು 'ಡೌನ್‌ಶಿಫ್ಟ್' ಫಂಕ್ಷನ್ ಕೂಡ ಇದೆ.

45
Image Credit : our own

NMAX 155 ಟೆಕ್ ಮ್ಯಾಕ್ಸ್‌ಗೆ 155cc ಲಿಕ್ವಿಡ್-ಕೂಲ್ಡ್ ಬ್ಲೂ ಕೋರ್ ಸಿಂಗಲ್ ಸಿಲಿಂಡರ್ ಎಂಜಿನ್ ಶಕ್ತಿ ನೀಡುತ್ತದೆ. ವೇರಿಯಬಲ್ ವಾಲ್ವ್ ಆಕ್ಚುಯೇಶನ್ (VVA) ತಂತ್ರಜ್ಞಾನ ಹೊಂದಿರುವ ಈ ಎಂಜಿನ್, ಜಾಗತಿಕ ಮಾರುಕಟ್ಟೆಯಲ್ಲಿ 15 PS ಪವರ್ ಮತ್ತು 14 Nm ಟಾರ್ಕ್ ಉತ್ಪಾದಿಸುತ್ತದೆ. ಫೀಚರ್‌ಗಳ ವಿಚಾರದಲ್ಲೂ ಈ ಸ್ಕೂಟರ್ ಹಿಂದೆ ಬಿದ್ದಿಲ್ಲ. 

ಇದರಲ್ಲಿ 4.2-ಇಂಚಿನ TFT ಕಲರ್ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಗಾರ್ಮಿನ್ ನ್ಯಾವಿಗೇಷನ್, ಮೈರೈಡ್ ಆ್ಯಪ್ ಇಂಟಿಗ್ರೇಷನ್, ಸ್ಮಾರ್ಟ್ ಕೀ, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್, ಆಟೋಮ್ಯಾಟಿಕ್ ಸ್ಟಾರ್ಟ್-ಸ್ಟಾಪ್, ಟ್ರ್ಯಾಕ್ಷನ್ ಕಂಟ್ರೋಲ್, ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಫುಲ್-ಫೇಸ್ ಹೆಲ್ಮೆಟ್ ಇಡಬಹುದಾದಷ್ಟು ದೊಡ್ಡ ಅಂಡರ್‌ಸೀಟ್ ಸ್ಟೋರೇಜ್ ಇದೆ.

55
Image Credit : RushLane

13-ಇಂಚಿನ ಅಲಾಯ್ ವೀಲ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ 230mm ಡಿಸ್ಕ್ ಬ್ರೇಕ್‌ಗಳು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಪ್ರೀಲೋಡ್ ಅಡ್ಜಸ್ಟಬಲ್ ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳು NMAXನ ಇತರೆ ವಿಶೇಷತೆಗಳು. ಆದರೆ, ಯಮಹಾ ಇಂಡಿಯಾ ಇದರ ಬಿಡುಗಡೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹಾಗಾಗಿ, 2026ರ ಅಂತ್ಯದ ವೇಳೆಗೆ ಈ ವಾಹನ ಮಾರುಕಟ್ಟೆಗೆ ಬರಲಿದೆ ಎಂಬ ವರದಿಗಳು ಸದ್ಯಕ್ಕೆ ಕೇವಲ ವದಂತಿಗಳಷ್ಟೇ. ಆದರೂ, ಡಿಸೈನ್ ಪೇಟೆಂಟ್ ಫೈಲ್ ಮಾಡಿರುವುದರಿಂದ ಭಾರತದಲ್ಲಿ NMAX 155 ಟೆಕ್ ಮ್ಯಾಕ್ಸ್ ಬಿಡುಗಡೆಯಾಗುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಾಗಿವೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಆಟೋಮೊಬೈಲ್
ಬೈಕ್
ಬೈಕರ್
ಭಾರತ ಸುದ್ದಿ

Latest Videos
Recommended Stories
Recommended image1
44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್
Recommended image2
ಜೂನ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಭರ್ಜರಿ ಕಮಾಲ್!; ಒಂದೇ ತಿಂಗಳಲ್ಲಿ 1.14 ಲಕ್ಷ ಬೈಕ್ ಮಾರಾಟ, ಶೇ. 27 ರಷ್ಟು ವೃದ್ಧಿಸಿದ ಸೇಲ್ಸ್!
Recommended image3
ಟಿವಿಎಸ್ ಮೋಟಾರ್ ಷೇರು ಅಬ್ಬರ: ಜೂನ್ ಮಾರಾಟದಲ್ಲಿ ಶೇ.47 ಪ್ರಗತಿ; ನಾರ್ಟನ್ ನಷ್ಟದ ನಡುವೆಯೂ ಹೂಡಿಕೆದಾರರ ವಿಶ್ವಾಸ
Related Stories
Recommended image1
44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್
Recommended image2
ಯುಗಾದಿ ವಿಶೇಷ ಆಫರ್ ಘೋಷಿಸಿದ ಯಮಹಾ, ಬೈಕ್ - ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved