Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Automobile
  • Bike News
  • ದಾಖಲೆ ಬರೆದ ಏಥರ್ ರಿಜ್ಟಾ ಇವಿ ಸ್ಕೂಟರ್, ಮಾರಾಟದಲ್ಲಿ ಹೊಸ ಮೈಲಿಗಲ್ಲು

ದಾಖಲೆ ಬರೆದ ಏಥರ್ ರಿಜ್ಟಾ ಇವಿ ಸ್ಕೂಟರ್, ಮಾರಾಟದಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರು ಮೂಲದ ಎಥರ್ ಎನರ್ಜಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಎಥರ್ ಫ್ಯಾಮಿಲಿಯ ಭಾರಿ ಬೇಡಿಕೆಯ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ಮಾರಾಟ ಕಾಣುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

Chethan Kumar | Published : Jun 05 2025, 02:59 PM
2 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
15
Asianet Image
Image Credit : Ather website

ಏಥರ್ ಎನರ್ಜಿ ಲಿಮಿಟೆಡ್ ಸಂಸ್ಥೆ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಹೊಸ ಕ್ರಾಂತಿ ಮಾಡಿದೆ. ಭಾರತದ ಅತ್ಯುತ್ತಮ ಇವಿ ಸ್ಕೂಟರ್ ಪಟ್ಟಿಯಲ್ಲಿ ಎಥರ್ ಸ್ಕೂಟರ್‌ಗೆ ಸ್ಥಾನವಿದೆ. ಗುಣಮಟ್ಟ, ಮೈಲೇಜ್, ಫೀಚರ್ಸ್ ಸೇರಿದಂತೆ ಹಲವು ಕಾರಣಗಳಿಂದ ಜನರು ಎಥರ್ ಸ್ಕೂಟರ್ ಖರೀದಿಸಲು ಬಯಸುತ್ತಿದ್ದಾರೆ. ಇದೀಗ ಎಥರ್ ಕುಟುಂಬದ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಒಂದು ವರ್ಷದಲ್ಲಿ 1 ಲಕ್ಷ ರಿಜ್ಟಾ ಸ್ಕೂಟರ್ ಮಾರಾಟವಾಗಿದೆ.

25
Asianet Image
Image Credit : our own

ಏಪ್ರಿಲ್ 2024ರಲ್ಲಿ ಬಿಡುಗಡೆಯಾದ ರಿಜ್ಟಾ ಭಾರತದಾದ್ಯಂತ ಇರುವ ಫ್ಯಾಮಿಲಿ ಸ್ಕೂಟರ್ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದು ಏಥರ್‌ ನ ಮಾರುಕಟ್ಟೆ ಪಾಲಿನಲ್ಲಿ ಗಮನಾರ್ಹ ಏರಿಕೆಯಾಗಲು ಕಾರಣವಾಗಿದೆ. ರಿಜ್ಟಾ ಮಾರಾಟದಲ್ಲಿ 1 ಲಕ್ಷ ಮೈಲಿಗಲ್ಲು ತಲುಪಿದ್ದು ನಮಗೆ ಮಹತ್ವದ ಕ್ಷಣವಾಗಿದೆ. ಭಾರತೀಯ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ನಿರ್ಮಿಸಲಾದ ರಿಜ್ಟಾ, ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮತ್ತು ದೊಡ್ಡ ಮಟ್ಟದ ಗ್ರಾಹಕರನ್ನು ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಫ್ಯಾಮಿಲಿ ಸ್ಕೂಟರ್‌ಗೆ ಬೇಕಾದ ಎಲ್ಲಾ ಗುಣವನ್ನೂ ಹೊಂದಿದೆ ಎಂದು ಎನರ್ಜಿಯ ಚೀಫ್ ಬಿಸಿನೆಸ್ ಆಫೀಸರ್ ರವನೀತ್ ಫೋಕೇಲಾ ಹೇಳಿದ್ದಾರೆ.

35
Asianet Image
Image Credit : our own

ವಿಶಾಲವಾದ ಮತ್ತು ಆರಾಮದಾಯಕ ಆಸನ, ಸಾಕಷ್ಟು ಸ್ಟೋರೇಜ್ ವ್ಯವಸ್ಥೆ, ಸುರಕ್ಷತಾ ಫೀಚರ್ ಗಳು ಮತ್ತು ದೈನಂದಿನ ಪ್ರಯಾಣವನ್ನು ಸುಲಭಗೊಳಿಸುವ ವ್ಯವಸ್ಥೆಗಳು ಇವೆಲ್ಲವೂ ಏಥರ್‌ನ ಅದ್ಭುತ ಆಕರ್ಷಕ ವಿನ್ಯಾಸದಲ್ಲಿ ದೊರೆಯುತ್ತವೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ರಿಜ್ಟಾ ಬಹು ರಾಜ್ಯಗಳಲ್ಲಿ ನಮ್ಮ ಮಾರುಕಟ್ಟೆ ಪಾಲನ್ನು ಗಣನೀಯವಾಗಿ ಹೆಚ್ಚಿಸಿದೆ, ಗ್ರಾಹಕರ ವರ್ಗವನ್ನು ವಿಸ್ತರಿಸಿದೆ ಮತ್ತು ನಮ್ಮ ಉಪಸ್ಥಿತಿ ಸೀಮಿತವಾಗಿದ್ದ ರಾಜ್ಯಗಳಲ್ಲಿ ಏಥರ್ ಮೇಲಿನ ಜನಪ್ರೀತಿಯನ್ನು ಜಾಸ್ತಿ ಮಾಡಿದೆ ಎಂದು ರವನೀತ್ ಫೋಕೇಲಾ ಹೇಳಿದ್ದಾರೆ.

45
Asianet Image
Image Credit : Google

ಏಥರ್‌ನ ಮೊದಲ ಫ್ಯಾಮಿಲಿ ಸ್ಕೂಟರ್ ಆಗಿರುವ ರಿಜ್ಟಾ, ಏಥರ್‌ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿತು ಮತ್ತು ದೇಶದಲ್ಲಿ ದೊಡ್ಡ ಮಟ್ಟದ ಗ್ರಾಹಕ ವಿಭಾಗಕ್ಕೆ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. 2025 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಿತರಣೆಗಳನ್ನು ಹೆಚ್ಚಿಸಿದಾಗಿನಿಂದ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ ಮತ್ತು ಛತ್ತೀಸ್‌ ಗಢದಂತಹ ಪ್ರಮುಖ ರಾಜ್ಯಗಳಲ್ಲಿ ಏಥರ್‌ ನ ಮಾರುಕಟ್ಟೆ ಪಾಲು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಿಜ್ಟಾ ಈಗ ಖರೀದಿದಾರರ ಅಚ್ಚು ಮೆಚ್ಚಿನ ಆಯ್ಕೆಯಾಗಿದ್ದು, ಒಟ್ಟು ಮಾರಾಟದ ಸುಮಾರು ಶೇ.60 ರಷ್ಟು ರಿಜ್ಟಾ ಮಾರಾಟದಿಂದಲೇ ಬಂದಿದೆ. ದೈನಂದಿನ ಉಪಯೋಗಕ್ಕೆ ಸರಿಹೊಂದುವ ವೈಶಿಷ್ಟ್ಯಗಳು, ಸ್ಮಾರ್ಟ್ ತಂತ್ರಜ್ಞಾನ ಮತ್ತು ಸೌಕರ್ಯದ ಸಮತೋಲನದಿಂದಾಗಿ ರಿಜ್ಟಾ ಬಹಳ ಜನಪ್ರಿಯವಾಗಿದೆ. ಇದರ ಜೊತೆಗೆ ವಾಹನ ಡೇಟಾದ ಪ್ರಕಾರ ರಿಜ್ಟಾ ಮತ್ತು ಏಥರ್ 450 ಸರಣಿಯಿಂದಾಗಿ ಆರ್ಥಿಕ ವರ್ಷ 25ರ ಕೊನೆಯ ತ್ರೈಮಾಸಿಕದಲ್ಲಿ ಏಥರ್‌ ಸಂಸ್ಥೆಯು ದಕ್ಷಿಣ ಭಾರತದ #1 ಬ್ರಾಂಡ್ ಆಗಿ ಮೂಡಿಬಂದಿದೆ.

55
Asianet Image
Image Credit : Google

ರೈಡಿಂಗ್ ನ ಸಂತೋಷ ಮತ್ತು ಆರಾಮದಾಯಕತೆಯನ್ನು ಹೆಚ್ಚಿಸಲು, ರಿಜ್ಟಾದಲ್ಲಿ 56 ಲೀಟರ್‌ ನ ಸೀಟ್ ಕೆಳಗಿನ ಸ್ಟೋರೇಜ್, ವಿಶಾಲವಾದ ಮತ್ತು ಆರಾಮದಾಯಕ ಆಸನ, ವಿಶಾಲ ಫ್ಲೋರ್‌ ಬೋರ್ಡ್‌ ಜೊತೆಗೆ ಹಲವಾರು ಸುರಕ್ಷತಾ ಮತ್ತು ಕನೆಕ್ಟಿವಿಟಿ ಫೀಚರ್ ಗಳನ್ನು ನೀಡಲಾಗಿದೆ. ರಿಜ್ಟಾದಲ್ಲಿ ಪರಿಚಯಿಸಲಾದ ಸ್ಕಿಡ್ ಕಂಟ್ರೋಲ್ ಎಂಬ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಜಲ್ಲಿಕಲ್ಲು, ಮರಳು, ನೀರು ಅಥವಾ ಎಣ್ಣೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸ್ಕೂಟರ್ ಟ್ರಾಕ್ಷನ್ ಕಳೆದುಕೊಳ್ಳದಂತೆ ಮೋಟಾರ್ ಟಾರ್ಕ್ ಅನ್ನು ನಿರ್ವಹಿಸುತ್ತದೆ. ಇತರ ಸುರಕ್ಷತಾ ವೈಶಿಷ್ಟ್ಯಗಳಾದ ಟೋ & ಥೆಫ್ಟ್ ಅಲರ್ಟ್ ಸ್ಕೂಟರ್‌ ನ ಅನಧಿಕೃತ ಚಲನೆಯ ಕುರಿತು ಮಾಲೀಕರಿಗೆ ಸೂಚನೆ ನೀಡುತ್ತದೆ ಮತ್ತು ಎಮರ್ಜೆನ್ಸಿ ಸ್ಟಾಪ್ ಸಿಸ್ಟಮ್ ಸ್ಕೂಟರ್ ತಕ್ಷಣ ನಿಲುಗಡೆಯಾದಾಗ ಹಿಂದಿನ ವಾಹನಕ್ಕೆ ಸೂಚನೆ ನೀಡಲು ಟೈಲ್ ಲೈಟ್ ಅನ್ನು ತ್ವರಿತವಾಗಿ ಆನ್ ಮಾಡುತ್ತದೆ. ಇದರ ಜೊತೆಗೆ, ಏಥರ್ ಸ್ಟಾಕ್ 6 ನ ಭಾಗವಾದ ಸಾಫ್ಟ್‌ ವೇರ್ ಆಧರಿತ ‘ಲೈವ್ ಲೊಕೇಷನ್ ಶೇರಿಂಗ್’ ವೈಶಿಷ್ಟ್ಯವು, ರೈಡರ್‌ ಗಳು ಕೆಲವೇ ಕ್ಲಿಕ್‌ ಗಳಲ್ಲಿ ತಮ್ಮ ಸ್ಥಳವನ್ನು ಪೂರ್ವನಿಗದಿತ ಕಾಂಟಾಕ್ಟ್ ನಂಬರ್ ಜೊತೆ ಶೇರ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ತುರ್ತು ಸಂದರ್ಭಗಳಲ್ಲಿ ರೈಡರ್‌ ಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ರಿಜ್ಟಾದಲ್ಲಿ ಡ್ಯಾಶ್‌ ಬೋರ್ಡ್‌ ನಲ್ಲಿ ಗೂಗಲ್ ಮ್ಯಾಪ್ಸ್ ಕೂಡ ಇದ್ದು, ಸುಲಭವಾಗಿ ನ್ಯಾವಿಗೇಷನ್ ಮಾಡಲು ಸಹಾಯ ಮಾಡುತ್ತದೆ.

Chethan Kumar
About the Author
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ. Read More...
ಆಟೋಮೊಬೈಲ್
 
Recommended Stories
Top Stories